ವ್ಲಾದಿಮಿರ್ ಪುಟಿನ್ ಶತ್ರು ಉಡೀಸ್, ಅಮೆರಿಕ ಹೇಳಿದ್ದೇನು?

ಜಗತ್ತು ನಿಧಾನವಾಗಿ 3ನೇ ಮಹಾಯುದ್ಧದ ಕಡೆ ಜಾರುತ್ತಿದ್ದು ರಷ್ಯಾ & ಉಕ್ರೇನ್ ಯುದ್ಧ ಇದಕ್ಕೆ ನೀರೆರೆಯುತ್ತಿದೆ. ಅದರಲ್ಲೂ ರಷ್ಯಾದ ಸ್ಥಿತಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಯಾವ ಕ್ಷಣದಲ್ಲಿ ಎಂತಹ ಪರಿಸ್ಥಿತಿ ಎದುರಾಗುತ್ತೋ ಗೊತ್ತಿಲ್ಲ. ಹೀಗಿದ್ದಾಗ ಪುಟಿನ್ ಶತ್ರು ರಷ್ಯಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಉರಿಯುವ ಬೆಂಕಿಗೆ ಅಮೆರಿಕ ಅಧ್ಯಕ್ಷರ ಹೇಳಿಕೆ ತುಪ್ಪ ಸುರಿದಿದೆ.

ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥನಾಗಿದ್ದ ಯೆವ್ಗೆನಿ ಪ್ರಿಗೊಝಿನ್ ರಷ್ಯಾ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದ. ಅದರಲ್ಲೂ ರಷ್ಯಾ ಸೇನೆಯನ್ನೂ ಎದುರು ಹಾಕಿಕೊಂಡಿದ್ದ. ಹೀಗೆ ತನ್ನ ಹಠ ಬಿಡದೆ ತನ್ನ ದೇಶದ ವಿರುದ್ಧವೇ ಸಮರ ಸಾರಿದ್ದ ಯೆವ್ಗೆನಿ ಪ್ರಿಗೊಝಿನ್. ಇದೆಲ್ಲಾ ನಡೆಯುವ ಸಂದರ್ಭದಲ್ಲೇ ಅನುಮಾನ ಮೂಡುವ ರೀತಿ ಮೃತಪಟ್ಟಿದ್ದಾನೆ ಪ್ರಿಗೊಝಿನ್. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ಹಿಂದೆ ನಿಲ್ಲದವರದ್ದು ಏನೂ ನಡೆಯಲ್ಲ. ಆದರೆ ಅದಕ್ಕೆ ಉತ್ತರ ಸ್ಪಷ್ಟವಾಗಿಲ್ಲ ಎಂದು ಪರೋಕ್ಷವಾಗಿ ಪುಟಿನ್‌ಗೆ ಟಾಂಗ್ ಕೊಟ್ಟಿದ್ದಾರೆ ಬೈಡನ್.

What America said about Russian wagner group chief death

ಯೆವ್ಗೆನಿ ಪ್ರಿಗೊಝಿನ್ ಸತ್ತಿದ್ದು ಹೇಗೆ?

ಖಾಸಗಿ ವಿಮಾನದಲ್ಲಿ ತನ್ನ ಸಂಗಡಿಗರ ಜೊತೆ ಹೊರಟಿದ್ದ ಯೆವ್ಗೆನಿ ಪ್ರಿಗೊಝಿನ್ ದುರಂತ ಅಂತ್ಯ ಕಂಡಿದ್ದಾನೆ ಎನ್ನಲಾಗಿದೆ. ರಷ್ಯಾ ಟ್ವೆರ್ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿ 10 ಜನ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರಲ್ಲಿ ಯೆವ್ಗೆನಿ ಪ್ರಿಗೊಝಿನ್ ಕೂಡ ಸೇರಿದ್ದ ಎನ್ನಲಾಗಿದೆ. ಈ ಸುದ್ದಿ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದು, ಯೆವ್ಗೆನಿ ಪ್ರಿಗೊಝಿನ್ ಸಾವು ಕೊಲೆ ಎಂಬ ಆರೋಪ ಕೇಳಿಬಂದಿದೆ. ಆದರೆ ರಷ್ಯಾ ಈ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿಲ್ಲ, ವಿಮಾನ ಪತನದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದೆ.

ಪುಟಿನ್ ಬೆನ್ನಿಗೆ ಪ್ರಿಗೊಝಿನ್ ಚೂರಿ?

ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನೆಯಷ್ಟೇ ಪ್ರಬಲ. ಪುಟಿನ್‌ ಅಧಿಕಾರ ಅವಧಿಯಲ್ಲಿ ಖಾಸಗಿ ಸೇನೆ ಸ್ಥಾಪನೆ ಆಗಿತ್ತು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆ ಇರುವ ಈ ವ್ಯಕ್ತಿ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ವ್ಲಾದಿಮಿರ್ ಪುಟಿನ್ ಪರ್ಮಿಷನ್ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪಿಸಿದ್ದ ಈ ಪ್ರಿಗೊಝಿನ್. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧ ವಿಚಾರದಲ್ಲಿ ಪ್ರಿಗೊಝಿನ್‌ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಆಗಿತ್ತು. ಕಿತ್ತಾಟವು ಜೋರಾಗಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರು. ಪರಿಸ್ಥಿತಿ ಹೀಗಿದ್ದಾಗಲೇ ಪುಟಿನ್ ಬೆನ್ನಿಗೆ ಚೂರಿ ಹಾಕಿದ್ದಾನೆ ಪ್ರಿಗೊಝಿನ್ ಅನ್ನೋ ಆರೋಪ ಬಂದಿತ್ತು.

What America said about Russian wagner group chief death

ಖಾಸಗಿ ಸೈನಿಕರಿಗೆ ಮೋಸ ಮಾಡಿತ್ತಾ ರಷ್ಯಾ?

ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಯೆವ್ಗೆನಿ ಪ್ರಿಗೊಝಿನ್. ರಷ್ಯಾ ಸೇನೆ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಸಪ್ಲೈ ಮಾಡುತ್ತಿಲ್ಲ. ಸೌಲಭ್ಯ ಸಿಗದೆ ವ್ಯಾಗ್ನರ್ ಸೈನಿಕರು ಸಾಯುತ್ತಿದ್ದಾರೆ. ಇಷ್ಟಾದ್ರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಕಿತ್ತಾಟ ಇನ್ನೂ ಸಣ್ಣದಾಗಿರುವಾಗ ರಷ್ಯಾ ಅಧ್ಯಕ್ಷರು & ರಕ್ಷಣಾ ಸಚಿವ ಅದನ್ನ ಸೈಲೆಂಟ್ ಮಾಡಲಿಲ್ಲ.

ಹೀಗೆ ಸಣ್ಣ ಕಿಡಿಯಾದ ಖಾಸಗಿ ಸೇನೆ ಬಂಡಾಯ ದೇಶದೊಳಗೆ ನುಗ್ಗುವಷ್ಟು ಪ್ರಬಲವಾಗಿತ್ತು. ರಷ್ಯಾದ ಆಂತರಿಕ ದಂಗೆ ಸಂಚಲನ ಸೃಷ್ಟಿಸಿತ್ತು. ಹೀಗಿದ್ದಾಗಲೇ ಕೇವಲ 3-4 ದಿನಗಳ ಹಿಂದೆ ಆಫ್ರಿಕಾದಲ್ಲಿ ವಿಡಿಯೋ ಮಾಡಿದ್ದ ಪ್ರಿಗೊಝಿನ್. ಆಫ್ರಿಕಾದಲ್ಲಿ ರಷ್ಯಾದ ಖಾಸಗಿ ಸೇನೆ ಉಗ್ರರ ವಿರುದ್ಧ ಹೋರಾಡುತ್ತಿರುವ ಬಗ್ಗೆ ಪ್ರಿಗೊಝಿನ್ ತಿಳಿಸಿದ್ದ. ಈಗ ನೋಡಿದರೆ ಜೀವ ಕಳೆದುಕೊಂಡಿದ್ದಾನೆ.

What America said about Russian wagner group chief death

ಒಟ್ನಲ್ಲಿ ರಷ್ಯಾ ಘಟನೆ ಬಗ್ಗೆ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ. ಉಕ್ರೇನ್ & ರಷ್ಯಾ ಕಿತ್ತಾಟ ಜೋರಾಗಿರುವ ವೇಳೆ ಖಾಸಗಿ ಸೇನೆ ಅಧ್ಯಕ್ಷ ರಷ್ಯಾದಲ್ಲಿ ಮೃತಪಟ್ಟಿದ್ದಾನೆ. ಅಮೆರಿಕದಿಂದ ಈ ಘಟನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದೆ ದೊಡ್ಡಣ್ಣನಿಗೆ ರಷ್ಯಾ ಯಾವ ರೀತಿ ಉತ್ತರ ನೀಡುತ್ತೆ ಅಂತಾ ಕಾದು ನೋಡಬೇಕು. ಅಲ್ಲದೆ ಪ್ರಿಗೊಝಿನ್ ಸಾವು ಉಕ್ರೇನ್‌ನಲ್ಲಿ ಹೋರಾಡುತ್ತಿರುವ ರಷ್ಯಾದ ಖಾಸಗಿ ಸೈನಿಕ ಪಡೆಯಲ್ಲಿ ಸಂಚಲನ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+