ಮಾಸ್ಕೊ ಕಡೆಯ ಪ್ರಯಾಣ ನಿಲ್ಲಿಸಿದ ವ್ಯಾಗ್ನರ್ ಗ್ರೂಪ್

ಮಾಸ್ಕೊ, ಜೂನ್ 25; ರಷ್ಯಾದ ಆಂತರಿಕ ಬಿಕ್ಕಟ್ಟು ಅಂತ್ಯವಾಗುವ ಸೂಚನೆ ಸಿಕ್ಕಿದೆ. ರಷ್ಯಾದ ಖಾಸಗಿ ಸೇನೆ 'ವ್ಯಾಗ್ನರ್ ಗ್ರೂಪ್' ಮಾಸ್ಕೊ ನಗರದ ಕಡೆಯ ಪ್ರಯಾಣವನ್ನು ಸ್ಥಗಿತಗೊಳಿಸಿದೆ. ಪಿಗೋಷಿನ್ ನೇತೃತ್ವದ ಖಾಸಗಿ ಸೇನೆ ಮಾಸ್ಕೊದಿಂದ ಸುಮಾರು 200 ಕಿ. ಮೀ. ದೂರದಲ್ಲಿತ್ತು.

ಪಿಗ್ರೋಷಿನ್ ಮಾತನಾಡಿ, " ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ವಾಪಸ್ ಆಗುವಂತೆ ತಮ್ಮ ಪಡೆಗೆ ಆದೇಶ ನೀಡಿದ್ದೇನೆ" ಎಂದು ಹೇಳಿದ್ದಾರೆ. ಈ ಮೂಲಕ ರಷ್ಯಾದಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ. ರಷ್ಯಾ ಸೇನೆ ಮತ್ತು ಖಾಸಗಿ ಸೇನೆಗಳ ನಡುವಿನ ದಾಳಿ ಅಂತ್ಯವಾಗುವ ಸೂಚನೆ ಸಿಕ್ಕಿದೆ.

ಮಾಸ್ಕೊ ನಗರದಿಂದ 'ವ್ಯಾಗ್ನರ್‌ ಗ್ರೂಪ್' ಕೇವಲ 200 ಕಿ. ಮೀ. ದೂರದಲ್ಲಿತ್ತು. ಆಗ ಪಿಗ್ರೋಷಿನ್ ತನ್ನ ಪಡೆಗಳಿಗೆ ದಾಳಿ ನಿಲ್ಲಿಸಿ, ಉಕ್ರೇನ್‌ನ ಸೇನಾ ಶಿಬಿರಕ್ಕೆ ವಾಪಸ್ ಆಗುವ ಸೂಚನೆ ಕೊಟ್ಟಿದ್ದಾರೆ. ಪಿಗೋಷಿನ್ ಬೇಡಿಕೆಗಳಿಗೆ ರಷ್ಯಾ ಒಪ್ಪಿಗೆ ನೀಡಿದೆಯೇ? ಎಂಬ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

wagner-ighters

ಸೇನೆ ಹಿಂದಕ್ಕೆ; ಪಿಗ್ರೋಷಿನ್ ತಮ್ಮ ಹೇಳಿಕೆಯಲ್ಲಿ, "ನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ. ಮೀ. ದೂರದಲ್ಲಿ ಇರುವಾಗ ದಾಳಿ ನಿಲ್ಲಿಸಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬಗ್ಗೆ ರಷ್ಯಾ ಸಹ ಯಾವುದೇ ತಕ್ಷಣದ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ.

'ವ್ಯಾಗ್ನರ್' ಗ್ರೂಪ್ ಮಾಸ್ಕೊ ನಗರ ಪ್ರವೇಶ ಮಾಡುವ ಆತಂಕ ಎದುರಾಗಿತ್ತು. ಇದರಿಂದಾಗಿ ನಗರಕ್ಕೆ ಆಗಮಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ರಷ್ಯಾ ಸೇನೆಯ ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಚೆಕ್‌ಪಾಯಿಂಟ್ ಸ್ಥಾಪನೆ ಮಾಡಿ ಶಸ್ತ್ರ ಸಜ್ಜಿತ ಯೋಧರನ್ನು ಕಾವಲಿಗೆ ಹಾಕಲಾಗಿತ್ತು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ಕಾಲದ ಆಪ್ತ ಯೆವ್ಗೆನಿ ಪಿಗ್ರೋಷಿನ್ 2014ರಲ್ಲಿ ಪುಟಿನ್ ಬೆಂಬಲದಿಂದಲೇ 'ವ್ಯಾಗ್ನರ್' ಎಂಬ ಖಾಸಗಿ ಸೇನೆ ಕಟ್ಟಿದ್ದರು. ಅವರ ರಷ್ಯಾ ಅಧ್ಯಕ್ಷರ ವಿರುದ್ಧವೇ ಹೋರಾಟ ಆರಂಭಿಸಿದ್ದು, ರಷ್ಯಾ ಸೇರಿದಂತೆ ಅನೇಕ ದೇಶದಲ್ಲಿ ಆತಂಕ ಮೂಡಿಸಿತ್ತು. 'ವ್ಯಾಗ್ನರ್' ಗುಂಪು ಬೆನ್ನಿಗೆ ಚೂರಿ ಹಾಕಿದೆ ಎಂದು ಪುಟಿನ್ ಶನಿವಾರ ಹೇಳಿದ್ದರು.

ಯೆವ್ಗೆನಿ ಪಿಗ್ರೋಷಿನ್ ರಷ್ಯಾ ಸೇನೆಯ ಉನ್ನತ ಅಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ಜೊತೆಗೆ ಹೊಂದಿದ್ದ ಅಸಮಾಧಾನವೇ ಸುಮಾರು 50 ಸಾವಿರ ಸೈನಿಕರ ಜೊತೆ ದಾಳಿ ಆರಂಭಿಸಲು ಕಾರಣ ಎಂದು ಅಂದಾಜಿಸಲಾಗಿದೆ. ರಷ್ಯಾ ಈಗಾಗಲೇ ಉಕ್ರೇನ್ ಜೊತೆ ಯುದ್ಧದಲ್ಲಿ ತೊಡಗಿದೆ, ಈ ಯುದ್ಧದಲ್ಲಿ 'ವ್ಯಾಗ್ನರ್' ಖಾಸಗಿ ಸೇನೆ ಮಹತ್ವದ ಪಾತ್ರ ವಹಿಸಿದೆ. ಆದರೆ ಈ ಸೇನೆ ರಷ್ಯಾ ಸೇನೆಯ ಜೊತೆಗೆ ಆಂತರಿಕ ಯುದ್ಧ ಆರಂಭಿಸಿದ್ದು, ಹಲವು ದೇಶಗಳ ಹುಬ್ಬೇರಿಸಿತ್ತು.

ಕೆಲವು ದಿನಗಳ ಹಿಂದೆ ಯೆವ್ಗೆನಿ ಪಿಗ್ರೋಷಿನ್ ಉಕ್ರೇನ್ ವಿರುದ್ಧ ಹೋರಾಟ ನಡೆಸುತ್ತಿರುವ ತನ್ನ ಸೇನೆಗೆ ರಷ್ಯಾದ ರಕ್ಷಣಾ ಸಚಿವಾಲಯ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಉಕ್ರೇನ್‌ ನೆಲದಲ್ಲಿದ್ದ 'ವ್ಯಾಗ್ನರ್' ಸೈನಿಕರ ಮೇಲೆ ರಷ್ಯಾ ಪಡೆಗಳು ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿದ್ದವು. ಇದನ್ನು ಯೆವ್ಗೆನಿ ಪಿಗ್ರೋಷಿನ್ ತೀವ್ರವಾಗಿ ಖಂಡಿಸಿದ್ದರು ಮತ್ತು ರಷ್ಯಾ ಸೇನಾ ಮುಖ್ಯಸ್ಥ ವ್ಯಾಲೇರಿ ಗೆರಾಸಿಮೋವ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಯೆವ್ಗೆನಿ ಪಿಗ್ರೋಷಿನ್ ರಷ್ಯಾ ಅಧ್ಯಕ್ಷರ ವಿರುದ್ಧ ದಂಗೆ ಏಳುವ ಸೂಚನೆ ಇದೆ ಎಂದು ಶುಕ್ರವಾರ ರಷ್ಯಾದ ಸೇನೆ ಸೂಚನೆ ನೀಡಿತ್ತು. ಯೆವ್ಗೆನಿ ಪಿಗ್ರೋಷಿನ್ ತನ್ನ 'ವ್ಯಾಗ್ನರ್' ಸೇನೆಯ ಮೂಲಕ ಶನಿವಾರ ದಾಳಿಗಳನ್ನು ಆರಂಭಿಸಿತ್ತು. ರೋಸ್ತೋವ್-ಆನ್-ಡಾನ್ ನಗರದಲ್ಲಿದ್ದ ರಷ್ಯಾ ಸೇನಾ ಕಚೇರಿಯಲ್ಲಿ ಖಾಸಗಿ ಸೇನೆ ತನ್ನ ವಶಕ್ಕೆ ಪಡೆದುಕೊಂಡಿತ್ತು, ಸೇನೆ ಮಾಸ್ಕೊ ನಗರದ ಕಡೆ ಪ್ರಯಾಣ ಆರಂಭಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+