Ukraine War: ದಯವಿಟ್ಟು ಉಕ್ರೇನ್‌ಗೆ ಬಂದು ನಮ್ಮ ಪರಿಸ್ಥಿತಿ ನೋಡಿ- ಟ್ರಂಪ್ ಬಳಿ ಬೇಡಿಕೊಂಡ ಉಕ್ರೇನ್ ಅಧ್ಯಕ್ಷ!

ಉಕ್ರೇನ್ ಅಧ್ಯಕ್ಷ ಮಾಡಿಕೊಂಡ ಒಂದೇ ಒಂದು ಸಣ್ಣ ತಪ್ಪು ಇಂದು ಆ ದೇಶವನ್ನೇ ಪೂರ್ತಿ ಮುಳುಗಿಸಿ ಹಾಕಿದೆ. ರಷ್ಯಾ ವಿರುದ್ಧ ಶಾಂತಿ ಮಾತುಕತೆ ಮೂಲಕ ಯುದ್ಧ ನಿಲ್ಲಿಸಬಹುದು ಎಂಬ ಸಲಹೆ ನೀಡಿದರೂ, ತನ್ನ ದುರಹಂಕಾರ & ದಡ್ಡತನದ ಪರಿಣಾಮ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ದೇಶವನ್ನೇ ಬಲಿ ನೀಡಿದ್ದಾರೆ ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗ ದಿಢೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿ ಏನಂತಾ ಮನವಿ ಮಾಡಿದ್ದಾರೆ ಗೊತ್ತಾ ಈ ಝೆಲೆನ್ಸ್ಕಿ?

ಅಮೆರಿಕ ಹಣ ಕೊಡದೆ ಉಕ್ರೇನ್ ಸೇನೆಯ ಪಾಡು ಯಾರಿಗೂ ಬೇಡವಾಗಿದೆ. ಯಾಕಂದ್ರೆ, ರಷ್ಯಾ ರೀತಿಯ ಬಲಿಷ್ಠ ದೇಶದ ವಿರುದ್ಧ ಹೋರಾಟ ನಡೆಸಲು ಆಗದೆ ಉಕ್ರೇನ್ ಒದ್ದಾಡಿದೆ. ಹಾಗೇ ರಷ್ಯಾ ಸೇನೆ ನಿಧಾನವಾಗಿ ಉಕ್ರೇನ್ ಒಳಗೆ ನುಗ್ಗುತ್ತಾ, ಬಹುತೇಕ ಉಕ್ರೇನ್ ನೆಲದ ಮೇಲೆ ತನ್ನ ಹಿಡಿತ ಸಾಧಿಸಿದೆ. ಹೀಗಿದ್ದಾಗ ಅಮೆರಿಕ ನೀಡುತ್ತಿದ್ದ ಅನುದಾನ ಕೂಡ ಬಂದ್ ಆಗಿದ್ದು, ವಿಲವಿಲ ಒದ್ದಾಡಿ ಹೋಗಿದೆ ಉಕ್ರೇನ್. ಯುರೋಪ್ ದೇಶಗಳು ಮಾಡುತ್ತಿರುವ ಸಹಾಯವೇ ಇದೀಗ ಉಕ್ರೇನ್‌ಗೆ ಆಧಾರವಾಗಿದೆ.

Volodymyr Zelenskyy Is Requesting This With American President Donald Trump

ನನ್ನ ನಂಬಿ ಪ್ಲೀಸ್.. ಪ್ಲೀಸ್..!

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿ ಉಕ್ರೇನ್ ಅಧ್ಯಕ್ಷನಾದ ವೊಲೊಡಿಮಿರ್ ಝೆಲೆನ್ಸ್ಕಿ ಮಹತ್ವದ ಮನವಿ ಮಾಡಿದ್ದಾರೆ. ಈ ಮೂಲಕ ಉಕ್ರೇನ್ ಪರಿಸ್ಥಿತಿಯನ್ನು ನೀವು ಖುದ್ದಾಗಿ ನೋಡಿ, ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ಭಾರಿ ದೊಡ್ಡ ಸಮಸ್ಯೆಗೆ ಸಿಲುಕಿ ಒದ್ದಾಡಿ ಹೋಗಿದೆ. ಹೀಗಾಗಿ ನೀವೆ ಉಕ್ರೇನ್‌ಗೆ ಬಂದು ಪರಿಸ್ಥಿತಿ ನೋಡಿ ಎಂದು ಟ್ರಂಪ್‌ರ ಬಳಿ ಬೇಡಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ.

ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ವೊಲೊಡಿಮಿರ್ ಝೆಲೆನ್ಸ್ಕಿ, ನಾನು ಅಮೆರಿಕ ಅಧ್ಯಕ್ಷರಾದ ಟ್ರಂಪ್ ಅವರ ಬಳಿ ವಿನಂತಿಸುತ್ತೇನೆ. ದಯವಿಟ್ಟು ಉಕ್ರೇನ್ ದೇಶಕ್ಕೆ ಭೇಟಿ ನೀಡಿ ರಷ್ಯಾ ಮಾಡಿರುವ ಕೃತ್ಯ ನೋಡಿ. ಪರಿಸ್ಥಿತಿ ತುಂಬಾ ಕಠಿಣವಾಗಿದೆ, ಯುದ್ಧ ಭೀಕರತೆಗೆ ಉಕ್ರೇನ್ ನಲುಗಿ ಹೋಗಿದೆ ಎಂದು ಜಗತ್ತಿನ ಎದುರು ಕಂಬನಿ ಮಿಡಿದಿದ್ದಾರೆ. ಈ ನಡುವೆ ಡೊನಾಲ್ಡ್ ಟ್ರಂಪ್ ಕೂಡ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+