ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ: 13 ಸಾವು

|
Google Oneindia Kannada News

ಜಕಾರ್ತ ಡಿಸೆಂಬರ್ 6: ಇಂಡೋನೇಷ್ಯಾದಲ್ಲಿ ಮತ್ತೊಂದು ಜ್ವಾಲಾಮುಖಿ ಸ್ಫೋಟಗೊಂಡಿದ್ದು 13 ಜನ ಸಾವನ್ನಪ್ಪಿರುವ ವರದಿಯಾಗಿದೆ. ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತ ಸೆಮೆರುನಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಸ್ಫೋಟ ಎಂದು ಪರಿಗಣಿಸಲಾಗಿದ್ದು, ಜ್ವಾಲಾಮುಖಿಯಿಂದ ಆಗಸಕ್ಕೆ ಭಾರೀ ಹೊಗೆ ಆವರಿಸಿದೆ. ಜನರು ಪ್ರಾಣಾಪಾಯದಿಂದ ಪಾರಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜ್ವಾಲಾಮುಖಿ ಸ್ಫೋಟಗೊಂಡು ಲಾವಾ ಸ್ಫೋಟಗೊಳ್ಳುತ್ತಿರುವುದರಿಂದ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಸ್ಥಳೀಯರು ಭಯಭೀತರಾಗಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ನೆನಪಿಸುವ ಹಾರರ್ ದೃಶ್ಯಗಳು ಎಂದು ಹಲವರು ಈ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ದುರಂತದಲ್ಲಿ ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಅಪಾಯಕಾರಿ ಪ್ರದೇಶದಲ್ಲಿ ಸಿಲುಕಿದ್ದ 10 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ದೇಶದ ವಿಪತ್ತು ತಗ್ಗಿಸುವ ಸಂಸ್ಥೆ (ಬಿಎನ್‌ಪಿಬಿ) ಭಾನುವಾರ ತಿಳಿಸಿದೆ. ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರು ಶನಿವಾರದಿಂದ ಭಾರೀ ಹೊಗೆಯನ್ನು ಹೊರಸೂಸಲಾರಂಭಿಸಿತು. ಇದರಿಂದಾಗಿ ಪೂರ್ವ ಜಾವಾ ಪ್ರಾಂತ್ಯದ ಇಡೀ ಗ್ರಾಮಗಳು ಹೊಗೆಯಿಂದ ಆವರಿಸಿಕೊಂಡಿವೆ.

Volcanic eruption again in Indonesia: 13 deaths

12,000 ಮೀ ಎತ್ತರದಲ್ಲಿ ಆಕಾಶವು ಬೂದಿಯಿಂದ ಆವೃತವಾಗಿದ್ದರಿಂದ ಅನೇಕ ಪ್ರದೇಶಗಳಲ್ಲಿ ಹಗಲು ರಾತ್ರಿ ಎರಡೂ ಒಂದೇ ರೀತಿಯಾಗಿದೆ. ಕಳೆದ ಜನವರಿಯಲ್ಲಿ ಸೆಮೆರು ಪರ್ವತ ಸ್ಫೋಟಗೊಂಡಿತ್ತು. ಅದಕ್ಕೂ ಮುನ್ನ 2017 ಮತ್ತು 2019ರಲ್ಲಿ ಸ್ಫೋಟಗಳು ಸಂಭವಿಸಿದ್ದವು.

Volcanic eruption again in Indonesia: 13 deaths

ವರ್ಷಕ್ಕೆ ಎರಡು ಬಾರಿ ಸಿಡಿಯುವ ಈ ಪರ್ವತದಲ್ಲಿ ಇತ್ತೀಚೆಗೆ ವರ್ಷದಲ್ಲಿ ಹಲವು ಬಾರಿ ಜ್ವಾಲಾಮುಖಿ ಉಕ್ಕುತ್ತಿದೆ. ಹತ್ತಿರದ ಜಿಲ್ಲೆಯ ಲುಮಾಜಾಂಗ್‌ನ ಎರಡು ಪ್ರದೇಶಗಳನ್ನು ಮಲಾಂಗ್ ನಗರದೊಂದಿಗೆ ಸಂಪರ್ಕಿಸುವ ಆಯಕಟ್ಟಿನ ಸೇತುವೆ ಮತ್ತು ಹಲವಾರು ಕಟ್ಟಡಗಳು ಜ್ವಾಲಾಮುಖಿಗೆ ಕುಸಿದಿವೆ. ಸೇತುವೆ ಕುಸಿದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಪರಿಣಾಮ ಉಂಟಾಗಿದೆ. ಆದರೂ ಪ್ರಾಣದ ಹಂಗುತೊರೆದು ರಕ್ಷಣಾ ಕಾರ್ಯಕರ್ತರು ಅಪಾಯದ ಪ್ರದೇಶವನ್ನು ತಲುಪಿದ್ದಾರೆ. ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟ 13 ಜನರಲ್ಲಿ ಇಬ್ಬರನ್ನು ಗುರುತಿಸಲಾಗಿದೆ ಎಂದು ಬಿಎನ್‌ಪಿಬಿ ಅಧಿಕಾರಿ ಅಬ್ದುಲ್ ಮುಹಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಬ್ಬರು ಗರ್ಭಿಣಿಯರು ಸೇರಿದಂತೆ ತೊಂಬತ್ತೆಂಟು ಜನರು ಗಾಯಗೊಂಡಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಮತ್ತು 902 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮರಳು ಗಣಿಗಾರರಲ್ಲಿ ಕೆಲವರು ತಮ್ಮ ಕೆಲಸದ ಸ್ಥಳಗಳಲ್ಲಿ ಸಿಕ್ಕಿಕೊಂಡಿದ್ದು ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಜೊತೆಗೆ 41 ಜನರಿಗೆ ದೊಡ್ಡ ಸುಟ್ಟಗಾಯಗಳಾಗಿವೆ. ಜನವರಿಯಲ್ಲಿ ಸೆಮೆರು ಸ್ಫೋಟಗೊಂಡಿತ್ತು ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಬಾರಿ ಸ್ಪೋಟದ ತೀವ್ರತೆ ಹೆಚ್ಚಾಗಿದೆ ಎಂದು ಲುಮಾಜಾಂಗ್‌ನ ಸ್ಥಳೀಯ ಅಧಿಕಾರಿ ತೊರಿಕುಲ್ ಹಕ್ ತಿಳಿಸಿದ್ದಾರೆ.

Volcanic eruption again in Indonesia: 13 deaths

ಕೆಲವು ದಿನಗಳ ನಿರಂತರ ಮಳೆ ಹಾಗೂ ಗುಡುಗಿನ ಬಳಿಕ ಅಗ್ನಿಪರ್ವತ ಸ್ಫೋಟಗೊಂಡಿದೆ. ಶನಿವಾರ ಕನಿಷ್ಠ ಎರಡು ಬಾರಿ ಅನಿಲ ಹಾಗೂ ಲಾವಾರಸ 800 ಮೀಟರ್‌ಗಳಷ್ಟು ದೂರ ಸಾಗಿ ಸಮೀಪದ ನದಿ ನೀರಿಗೆ ಸೇರಿಕೊಂಡಿದೆ. ಈ ರಾಕ್ಷಸ ಅಗ್ನಿಪರ್ವತದಿಂದ ಐದು ಕಿಮೀ ದೂರದ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸೆಮೆರುದಿಂದ ಸುಮಾರು ಎರಡು ಸಾವಿರ ಕಿಮೀ ದೂರದಲ್ಲಿರುವ ಹಲ್ಮಹೆರಾದ ಉತ್ತರ ಭಾಗದಲ್ಲಿ ಭಾನುವಾರ ರಿಕ್ಟರ್ ಪಾಮನದಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
Another volcanic eruption in Indonesia. Months later, the Semeru volcano, the highest mountain in Javadweep, erupted again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X