ರಷ್ಯಾ ಜೈಲಿನಿಂದ ರಾಜಾತಿಥ್ಯದಲ್ಲಿ ಹೊರಗೆ ಬಂದ ‘ಸೈಕೋ’: ಯಾಕೆ ಗೊತ್ತಾ?
ರಷ್ಯಾ & ಉಕ್ರೇನ್ ಯುದ್ಧ ಅದೆಷ್ಟು ಘೋರವಾಗಿದೆ ಎಂದರೆ ಯುದ್ಧದಲ್ಲಿ ಗೆಲ್ಲೋದಕ್ಕಾಗಿ ಯಾರನ್ನ ಬೇಕಾದರೂ ಸಾಯಿಸುತ್ತಾರೆ, ಯಾರನ್ನ ಬೇಕಾದರೂ ಓಲೈಸುತ್ತಾರೆ. ಅದ್ರಲ್ಲೂ ರಷ್ಯಾ ತನ್ನ ಶತ್ರು ಉಕ್ರೇನ್ ವಿರುದ್ಧ ಕೆಂಡ ಕಾರುತ್ತಿದ್ದು, 'ಸೈಕೋ' ಒಬ್ಬನ ಜೈಲಿನಿಂದ ರಿಲೀಸ್ ಮಾಡಿದ ಆರೋಪ ಕೇಳಿಬಂದಿದೆ. ಹಾಗಾದ್ರೆ ಉಕ್ರೇನ್ & ರಷ್ಯಾ ನಡುವೆ ಯುದ್ಧ ನಡೆಯೋದಕ್ಕೂ. ದಿಢೀರ್ ಸೈಕೋ ಜೈಲಿನಿಂದ ರಿಲೀಸ್ ಆಗೋದಕ್ಕೂ, ಸಂಬಂಧವೇನು? ತಿಳಿಯೋಣ ಬನ್ನಿ.
ಹೌದು, ತನ್ನ ಗೆಳತಿನ 111 ಬಾರಿ ಚುಚ್ಚಿ ಕೊಲೆ ಮಾಡಿದ್ದ ಸೈಕೋ ಒಬ್ಬ. ಉಕ್ರೇನ್ ವಿರುದ್ಧ ಯುದ್ಧದಲ್ಲಿ ರಷ್ಯಾ ಸೇನೆ ಸೇರಲು ಒಪ್ಪಿದ ಕಾರಣಕ್ಕೆ, ಅತನನ್ನ ಜೈಲಿನಿಂದ ರಿಲೀಸ್ ಮಾಡಿ ಹೊರಗೆ ಕಳುಹಿಸಲಾಗಿದೆಯಂತೆ. ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆತನಿಗೆ ಕ್ಷಮಾದಾನ ನೀಡಿ ಜೈಲಿನಿಂದ ರಿಲೀಸ್ ಮಾಡಿಸಿದ್ದಾರೆ, ಅನ್ನೋ ಆರೋಪ ಕೇಳಿಬಂದಿದೆ. ಹಾಗಾದರೆ ಯಾರು ಈ ವ್ಯಕ್ತಿ? ಈತನ ಬಿಡುಗಡೆ ನಂತರ ರಷ್ಯಾದಲ್ಲಿ ಯಾವ ರೀತಿ ಕಿಚ್ಚು ಹೊತ್ತಿಕೊಂಡಿದೆ?

ಹೇಗೆ ಹತ್ಯೆ ಮಾಡಿದ್ದ ಗೊತ್ತಾ?
ಅಂದಹಾಗೆ ಈಗ ರಿಲೀಸ್ ಆಗಿರುವ ಮತ್ತು ತನ್ನ ಗೆಳತಿಯನ್ನ ಭೀಕರವಾಗಿ ಹತ್ಯೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ ಹೆಸರು ಕನ್ಯೂಸ್ ಅಂತ. ಈ ಕನ್ಯೂಸ್ ಸುಮಾರು 3 ವರ್ಷ ಕಾಲ ಗೆಳತಿಗೆ ಹಿಂಸೆ ನೀಡಿ, ಅತ್ಯಾಚಾರ ಎಸಗಿದ್ದನಂತೆ. ಒಂದು ದಿನ ದಿಢೀರ್ 111 ಬಾರಿ ಚುಚ್ಚಿ ಆಕೆಯನ್ನ ಹತ್ಯೆ ಮಾಡಿದ್ದ.
Putin pardoned at least 17 high-profile murderers. They were all recruited from prisons and set free after participating in combat in Ukraine.
— Natalka (@NatalkaKyiv) November 10, 2023
One of the most publicized of such cases was the Kemerovo killer Vladislav Kanyus. In July 2022, he received 17 years in a maximum… pic.twitter.com/e71eizCkI5
ಅಂತಿಮವಾಗಿ ಕುತ್ತಿಗೆಗೆ ಕೇಬಲ್ ವೈರ್ ಬಿಗಿದು ಕೊಂದು ವಿಕೃತಿ ಮೆರೆದಿದ್ದ. ಈ ಘಟನೆ ಇಡೀ ರಷ್ಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನು, ಸೈಕೋ ಎಂಬ ಆರೋಪ ಹೊತ್ತಿದ್ದ ಕನ್ಯೂಸ್ ಅರೆಸ್ಟ್ ಆಗಿದ್ದ. ತನ್ನ ಗೆಳೆತಿಯನ್ನ ಕೊಲೆ ಮಾಡಿ, ಈ ಸೈಕೋ ಕೃತ್ಯ ಎಸಗುವಾಗ ಆಕೆ ಚೀರಾಟ ಕೇಳಿದ್ದ ಅಕ್ಕಪಕ್ಕದ ಮನೆಯವರು ಕೊಲೆಗೂ ಸಾಕ್ಷಿಯಾಗಿದ್ದರು.

ಪೊಲೀಸರು ಫೋನ್ ಎತ್ತಲೇ ಇಲ್ಲ!
ಇನ್ನು ಕನ್ಯೂಸ್ ತನ್ನ ಗೆಳೆತಿಯನ್ನು ಹತ್ಯೆ ಮಾಡುವ ಸಮಯದಲ್ಲಿ ಅಕ್ಕಪಕ್ಕದ ಮನೆಯ ಜನ ಪೊಲೀಸರಿಗೆ 07 ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕಾರ ಮಾಡಿರಲಿಲ್ಲವಂತೆ. ಕೊನೆಗೆ ತನ್ನ ಗೆಳತಿ ಕೊಂದಿದ್ದ ಕನ್ಯೂಸ್ ಜೈಲು ಸೇರಿದ್ದ. ಹೀಗಿದ್ದಾಗ, ದಿಢೀರ್ ಅಂತಾ ಸೈಕೋ ಕನ್ಯೂಸ್ ಸೇನಾ ಸಮವಸ್ತ್ರ ಧರಿಸಿದ್ದ ಫೋಟೋ ನೋಡಿ ಮೃತ ಯುವತಿಯ ತಾಯಿ ಶಾಕ್ ಆಗಿದ್ದಾರೆ.
ಅಲ್ಲದೆ ನನ್ನ ಪುತ್ರಿ ಗೋರಿಯಲ್ಲಿ ಕೊಳೆಯುತ್ತಿದ್ದಾಳೆ. ಆದ್ರೆ ಈಗ ಇಂಥ ಕ್ರೂರ ವ್ಯಕ್ತಿ ಕೈಗೆ ಆಯುಧ ನೀಡಲು ಹೇಗೆ ಸಾಧ್ಯ ಎಂದು ಮೃತ ಯುವತಿ ತಾಯಿ ಈಗ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಹೀಗೆ ಒಟ್ಟು 17 ವಿಕೃತ ಕೊಲೆಗಾರರನ್ನ ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾ ರಿಲೀಸ್ ಮಾಡಿದೆಯಂತೆ.
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ಭೀಕರಗೊಂಡಿದೆ. ಇದೇ ಸಮಯದಲ್ಲಿ ಗೆಲ್ಲಬೇಕೆಂಬ ಹಠದಲ್ಲಿ ರಷ್ಯಾ ಸೇನೆ ಮತ್ತು ರಷ್ಯಾ ಅಧ್ಯಕ್ಷರು ಏನೇನೋ ಎಡವಟ್ಟು ಮಾಡಿಕೊಳ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೋ ಗೊತ್ತಿಲ್ಲ ಅಂತಿದ್ದಾರೆ ರಷ್ಯಾ ಪ್ರಜೆಗಳು. ಮತ್ತೊಂದು ಕಡೆ ಉಕ್ರೇನ್ ಜನಗಳು ಮನೆ, ಸಂಸಾರವನ್ನು ಕಳೆದುಕೊಂಡು ಬೀದಿಗೆ ಬಿದ್ದು ನರಳುತ್ತಿದ್ದಾರೆ.












Click it and Unblock the Notifications