Viral Video: ಲಂಡನ್ ಗಲ್ಲಿಗಳಲ್ಲಿ "ಪ್ಯಾಂಟ್ ಬೇಡ" ಎನ್ನುವ ವಿಚಿತ್ರ ಆಚರಣೆ!
ಲಂಡನ್‌ನಲ್ಲಿ ವಿಚಿತ್ರ ಆಚರಣೆಯೊಂದು ನಡೆಯುತ್ತಿದ್ದು, ವಿಶ್ವದ ಜನ ಈ ಕುಚೇಷ್ಟೆಯನ್ನು ನೋಡಿ ನಗುತ್ತಿದ್ದಾರೆ. ವಾರ್ಷಿಕ No Trousers Tube Ride ಎನ್ನುವ ಆಚರಣೆಯನ್ನು ಮಾಡುತ್ತಿದ್ದಾರೆ. ಇದರ ಅರ್ಥ ಪ್ಯಾಂಟ್‌ಗಳ ಸವಾರಿ ಬೇಡ / ಪ್ಯಾಂಟ್ಸ್ ಬೇಡ ಎಂದಾಗುತ್ತದೆ. ಈ ಆಚರಣೆಯಲ್ಲಿ ಜನ ಪ್ಯಾಂಟ್ ಹಾಕಿಕೊಳ್ಳದೆ ಒಳ ಉಡುಪನ್ನು ಮಾತ್ರ ಧರಿಸಿ ಓಡಾಡುತ್ತಿದ್ದಾರೆ. ಮೈಕೊರೆಯುವ ಚಳಿಯಲ್ಲಿ ಜನ ಇಲ್ಲಿನ ಮೆಟ್ರೋದಲ್ಲಿ ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ಈ ಆಚರಣೆಗಾಗಿ ಜನ ಪ್ಯಾಂಟ್ ಹಾಕಿಕೊಳ್ಳುತ್ತಿಲ್ಲ ಬದಲಿಗೆ ಒಳ ಉಡುಪು, ಸೂಟ್‌ಗಳು, ಶರ್ಟ್ ಮತ್ತು ಶೂ ಮಾತ್ರ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ವಿಚಿತ್ರ ಆಚರಣೆ ಟ್ರೋಲ್ ಆಗುತ್ತಿದೆ. ಲಂಡನ್‌ನ ಬೀದಿಗಳಲ್ಲಿ ಜನ ಈ ರೀತಿ ಸುತ್ತುತ್ತಿದ್ದಾರೆ. ಹಾಗಾದರೆ ಏನಿದು ಆಚರಣೆ, ಜನ ಏನು ಮಾಡುತ್ತಿದ್ದಾರೆ ಎನ್ನುವುದನ್ನ ನೋಡೋಣ..
ಜಗತ್ತಿನಲ್ಲಿ ಚಿತ್ರವಿಚಿತ್ರ ಆಚರಣೆಗಳು ನಡೆಯುತ್ತಿರುತ್ತವೆ. ಇದೀಗ ಲಂಡನ್‌ನಲ್ಲೂ ಅದೇ ರೀತಿಯ ವಿಷಯವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ಯಾಂಟ್ ಧರಿಸದೆ ಇರುವ ಈ ಕಾರ್ಯಾಚರಣೆಗೆ ಜನ ಹುಬ್ಬೇರಿಸಿದ್ದಾರೆ. ಈ ತಂಡ ಮೆಟ್ರೋ ರೈಲುಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಒಳ ಉಡುಪು ಮಾತ್ರ ಧರಿಸಿಕೊಂಡು ಓಡಾಡುತ್ತಿದ್ದಾರೆ. ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು. ರೈಲಿ ಒಳಗೆ ಕುಳಿತುಕೊಂಡು ಪೋಸ್ ನೀಡುತ್ತಾ ಫೋಟೋ ಕ್ಕಲಿಕ್ಕಿಸಿಕೊಳ್ಳುವುದನ್ನು ಮಾಡುತ್ತಿದ್ದಾರೆ.

ಏನಿದು Trousers Tube Ride: ವಿದೇಶಗಳಲ್ಲಿ ಚಿತ್ರ ವಿಚಿತ್ರ ಆಚರಣೆಗಳನ್ನು ಮಾಡುವುದು ಮಾಮೂಲಿಯಾಗಿದೆ. ಈಗ ಪ್ಯಾಂಟ್ ಸವಾರಿ ಬೇಡ ಎನ್ನುವ ವಿಚಿತ್ರ ಆಚರಣೆ ನಡೆದಿದೆ. Improve Everywhere - ಎಲ್ಲಾ ಕಡೆ ಬದಲಾವಣೆ, ಸುಧಾರಣೆ ಎನ್ನುವ ಕಾನ್ಸೆಪ್ಟ್‌ನೊಂದಿಗೆ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇದನ್ನು ನ್ಯೂಯಾರ್ಕ್ ಕಾಮಿಡಿ ಕಲಾ ತಂಡದಿಂದ ಈ ರೀತಿ ಭಿನ್ನ ಆಚರಣೆ ಮಾಡಲಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಈ ತಂಡ ಮಾಡುತ್ತಿರು ಕುಚೇಷ್ಟೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊದಲ ಬಾರಿ ನೋ ಪ್ಯಾಂಟ್ ಟ್ಯೂಬ್ ದಿನಾಚರಣೆಯನ್ನು 2002ರಲ್ಲಿ ನ್ಯೂಯಾರ್ಕ್‌ನಲ್ಲಿ ಪ್ರಾರಂಭಿಸಲಾಯಿತು. ಇದೀಗ ಈ ಅಭಿಯಾನವನ್ನು 60ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಜನವರಿ ತಿಂಗಳಲ್ಲಿ ಜನ ಆಚರಿಸುತ್ತಾರೆ.
ಮೊದಲ ಬಾರಿ ನೋ ಪ್ಯಾಂಟ್ (ಅಂಡರ್ ಪಾಸ್ ಮೆಟ್ರೋ) ಸಬ್‌ವೇ ರೈಡ್ ಅನ್ನು 2002ರಲ್ಲಿ ನ್ಯೂಯಾರ್ಕ್ ಸಿಟಿ ಸಬ್‌ವೇಯಲ್ಲಿ 7 ಜನರೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. 2006ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಇದಕ್ಕೆ ಸೇರುವ ಜನರ ಸಂಖ್ಯೆ ಹೆಚ್ಚಾಗಿತ್ತು. ಮೊದಲ ಬಾರಿ ಈ ಆಚರಣೆಗೆ 150 ಜನರು ಭಾಗವಹಿಸಿದ್ದರು. ಆದರೆ ಇದರಲ್ಲಿ 8 ಜನ ಅಸಭ್ಯವಾಗಿ ವರ್ತಿಸಿದ್ದ ಹಿನ್ನೆಲೆಯಲ್ಲಿ ಅವರ ಮೇಲೆ ಅಲ್ಲಿನ ಸ್ಥಳೀಯ ಪೊಲೀಸರು ಕ್ರಮ ಸಹ ತೆಗೆದುಕೊಂಡಿದ್ದರು.
ಜನರನ್ನು ನಗಿಸುವುದು ನಮ್ಮ ಗುರಿ: ಜನರನ್ನು ನಗಿಸುವುದು ನಮ್ಮ ಗುರಿ ಈ ಕಾರಣಕ್ಕಾಗಿ ನಾವು ಈ ರೀತಿ ವಿಶೇಷ ಆಚರಣೆಯನ್ನು ಮಾಡುತ್ತಿದ್ದೇವೆ. ನ್ಯೂಯಾರ್ಕ್‌ನಲ್ಲಿ ಈ ಆಚರಣೆ ಶುರು ಮಾಡಿದಾಗ ಸಾಕಷ್ಟು ಜನ ಬೆಂಬಲ ಸೂಚಿಸಿದರು ಎಂದು ಆಚರಣೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications