Viral Video: ಶ್ರೇಯಾ ಘೋಷಾಲ್ ಹಾಡಿಗೆ ಸಖತ್ ಡ್ಯಾನ್ಸ್: ಡ್ಯಾನಿಶ್ ಪ್ರೇಕ್ಷಕರು ಫುಲ್ ಫಿದಾ
ಶ್ರೇಯಾ ಘೋಷಾಲ್ ಅವರ ಬಾಲಿವುಡ್ ಹಾಡಿಗೆ ಭಾರತೀಯ ಮಹಿಳೆಯೊಬ್ಬರು ಸಖತ್ ಡ್ಯಾನ್ಸ್ ಮಾಡಿದ್ದು ಡ್ಯಾನಿಶ್ ಪ್ರೇಕ್ಷಕರು ಫುಲ್ ಫಿದಾ ಆಗಿ ಹೋಗಿದ್ದಾರೆ. ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಗಾಯಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಡೆನ್ಮಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ನರ್ತಕಿಯೊಬ್ಬರು ಮನಮೋಹಕ ಪ್ರದರ್ಶನ ನೀಡಿದ್ದಾರೆ. ಈ ವಿಡಿಯೋ ಜನರನ್ನು ರೋಮಾಂಚನಗೊಳಿಸಿದೆ. ಕ್ಲಿಪ್‌ನಲ್ಲಿ ನತಾಶಾ ಶೆರ್ಪಾ ಶ್ರೇಯಾ ಘೋಷಾಲ್ ಅವರ "ಓಹ್ ಲಾ ಲಾ" ಹಾಡಿನಲ್ಲಿ ಆಕರ್ಷಕವಾಗಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಅವರ ಹಾವಾಭಾವ ಮತ್ತು ಅದ್ಭುತ ನಡೆಗಳು ಪ್ರೇಕ್ಷಕರನ್ನು ವಿಸ್ಮಯಗೊಳಿಸಿವೆ. ಅಲ್ಲದೆ ಅವರ ನೃತ್ಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಮಂತ್ರಮುಗ್ಧರನ್ನಾಗಿಸಿದೆ.

ಡೆನ್ಮಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಭಾರತೀಯ ಮಹಿಳೆ ಶ್ರೇಯಾ ಘೋಷಾಲ್ ಅವರ ಹಾಡಿಗೆ ಮಾಡಿದ ನೃತ್ಯ ಜನರನ್ನು ಬೆರಗುಗೊಳಿಸದೆ.
ವೀಡಿಯೊವನ್ನು ಪೋಸ್ಟ್ ಮಾಡಿದ ಶೆರ್ಪಾ, "ಬಾಲಿವುಡ್ ನನ್ನ ರಕ್ತದಲ್ಲಿದೆ. ಈಗ ಅದು ನನ್ನ ಹೃದಯದಲ್ಲಿದೆ'' ಎಂದು ಬರೆದಿದ್ದಾರೆ. ಡ್ಯಾನ್ಸರ್ ನತಾಶಾ ಶೆರ್ಪಾ ಅವರು ಡೆನ್ಮಾರ್ಕ್‌ನಲ್ಲಿ ರೆಡ್ ಬುಲ್ ಡ್ಯಾನ್ಸ್ ಯುವರ್ ಸ್ಟೈಲ್ ನ್ಯಾಷನಲ್ ಫೈನಲ್ಸ್‌ನಲ್ಲಿ ಪ್ರದರ್ಶನ ನೀಡಿದರು. ಈವೆಂಟ್ ಅನ್ನು ಸಹ ಅವರೇ ಆಯೋಜಿಸಿದ್ದರು. ನತಾಶಾ ಶೆರ್ಪಾ ಅವರು ಈ ಪೋಸ್ಟ್‌ನೊಂದಿಗೆ ತಮ್ಮ ಸಹ-ಹೋಸ್ಟ್‌ಗಳು, ಸಂಘಟಕರು ಮತ್ತು ಸಹ ನೃತ್ಯಗಾರರಿಗೆ ಧನ್ಯವಾದ ಹೇಳಿದ್ದಾರೆ. ದಿ ಡರ್ಟಿ ಪಿಕ್ಚರ್ ಚಿತ್ರದ ಓಹ್ ಲಾ ಲಾ ಹಾಡು ಹಾಡಿದ ಶ್ರೇಯಾ ಘೋಷಾಲ್ ಅವರನ್ನು ಸಹ ನತಾಶಾ ಶೆರ್ಪಾ ಅವರು ಟ್ಯಾಗ್ ಮಾಡಿದ್ದಾರೆ.
ಅದ್ಭುತ ನೃತ್ಯದ ವೀಡಿಯೊವನ್ನು ಇಲ್ಲಿ ನೋಡಿ:
ಈ ವೀಡಿಯೊವನ್ನು 25 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನಂತರ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋಗೆ ಸಾಕಷ್ಟು ಜನ ಹಾಗೂ ಗಾಯಕರು ಸೇರಿದಂತೆ ಹಲವರು ಕಾಮೆಂಟ್ ಮಾಡಿದ್ದಾರೆ.
ಶ್ರೇಯಾ ಘೋಷಾಲ್ ಪ್ರತಿಕ್ರಿಯೆ ಏನು?
ಈ ವಿಡಿಯೋಕ್ಕೆ ಗಾಯಕಿ ಶ್ರೇಯಾ ಘೋಷಾಲ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅವರು ಅನೇಕ ಎಮೋಜಿಗಳನ್ನು ಬಳಸಿದ್ದಾರೆ. ಶ್ರೇಯಾ ಘೋಷಾಲ್ ಅವರು ಫೈರ್ ಎಮೋಜಿ ಮತ್ತು ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

Instagram ಬಳಕೆದಾರರು ಹಂಚಿಕೆಯ ಬಗ್ಗೆ ಏನು ಹೇಳಿದರು?
ಈ ವಿಡಿಯೋಕ್ಕೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಸಾಕಷ್ಟು ಜನ ತಮ್ಮ ಮನದಾಳದ ಮಾತುಗಳನ್ನು ಕಮಾಂಟ್ ಮಾಡಿದ್ದಾರೆ. ಹಾಗಾದರೆ ಇನ್‌ಸ್ಟಾಗ್ರಾಮ್ ಬಳಕೆದಾರರ ಕಾಮೆಂಟ್ ಹೇಗಿದೆ ನೋಡೋಣ.
"ಇಂದು ಇಂಟರ್ನೆಟ್‌ನಲ್ಲಿ ಅದ್ಬುತವಾದ ವಿಡಿಯೋ" ಒಬ್ಬ Instagram ಬಳಕೆದಾರರು ಬರೆದಿದ್ದಾರೆ.
"ಪ್ರತಿಯೊಂದು ನಡೆಯಲ್ಲೂ ಅವರ ಹಾವಭಾವ ಸೂಪರ್," ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
"ನೀವು ನಮ್ಮನ್ನ ನೃತ್ಯದ ಮೂಲಕ ಕೊಂದಿದ್ದೀರಿ," ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
ನಾಲ್ಕನೆಯವರು, "ನಾನು ಹೆಚ್ಚು ಹೆಚ್ಚು ಬಾರಿ ಈ ವಿಡಿಯೋ ನೋಡಿದ್ದೇನೆ, ನಾನು ಇದಕ್ಕೆ ಅಡಿಟ್ ಆಗಿದ್ದೇನೆ"
ಹಾಡಿನ ಬಗ್ಗೆ:
2011 ರ ಚಲನಚಿತ್ರ ದಿ ಡರ್ಟಿ ಪಿಕ್ಚರ್‌ನ 'ಓಹ್ ಲಾ ಲಾ' ಹಾಡನ್ನು ರಜತ್ ಅರೋರಾ ಬರೆದಿದ್ದಾರೆ. ಬಪ್ಪಿ ಲಾಹಿರಿ ಮತ್ತು ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡನ್ನು ನಾಸಿರುದ್ದೀನ್ ಶಾ ಮತ್ತು ವಿದ್ಯಾ ಬಾಲನ್ ಮೇಲೆ ನೃತ್ಯದಲ್ಲಿ ಚಿತ್ರಿಸಲಾಗಿದೆ.
ನತಾಶಾ ಶೆರ್ಪಾ ಯಾರು?
ನತಾಶಾ ಶೆರ್ಪಾ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರೊಫೈಲ್‌ಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲೂ ನೂರಾರು ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಆಗಾಗ್ಗೆ ಇತರ ನೃತ್ಯಗಾರರ ಸಹಯೋಗದೊಂದಿಗೆ ತನ್ನ ಆಕರ್ಷಕ ನೃತ್ಯ ಪ್ರದರ್ಶನಗಳ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿರುತ್ತಾರೆ.
ಭಾರತೀಯ ಮಹಿಳೆಯೊಬ್ಬರು ಡೆನ್ಮಾರ್ಕ್‌ನಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ಈ ವೀಡಿಯೊದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ.












Click it and Unblock the Notifications