• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೆಜಿಲ್‌ ಜೈಲುಗಳಲ್ಲಿ ಗಲಭೆ, 55 ಕೈದಿಗಳ ಸಾವು

|

ರಿಯೋ ಡಿ ಜೆನೈರೋ, ಮೇ 28: ಉತ್ತರ ಬ್ರೆಜಿಲ್‌ ನಾಲ್ಕು ಜೈಲುಗಳಲ್ಲಿ ಏಕಾ-ಏಕಿ ಸಂಭವಿಸಿದ ಘರ್ಷಣೆಯಲ್ಲಿ 55 ಮಂದಿ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಮೆಜಾನಸ್‌ ರಾಜ್ಯದ ಮಾನೌಸ್‌ ನಲ್ಲಿನ ಅಂಟಾನಿಯೋ ಟ್ರಿಂಡೇಡ್‌ ಪ್ಯಾನಲ್ ಇನ್ಸ್ಟಿಟ್ಯೂಟ್‌ ಜೈಲಿನಲ್ಲಿ ಅತಿ ಹೆಚ್ಚು ಮಂದಿ ಹಿಂಸಾಚಾರ ನಡೆದಿದೆ. ಇಲ್ಲಿ ಹಲವು ಕುಖ್ಯಾತ ಖೈದಿಗಳು, ನ್ಯಾಯಾಂಗ ಬಂಧನದಲ್ಲಿರುವವರು ಇದ್ದರು.

ಜಪಾನ್‌ನಲ್ಲಿ ಸಾಮೂಹಿಕ ಚೂರಿ ಇರಿತ : 2 ಸಾವು

ಮಾದಕ ದ್ರವ್ಯ ಸಾಗಾಣೆದಾರರು ಮತ್ತು ಕೆಲವು ಕುಖ್ಯಾತ ಅಪರಾಧಿಗಳ ನಡುವೆ ದ್ವೇಷದ ಕಾರಣಕ್ಕೆ ಪ್ರಾರಂಭವಾದ ಗಲಾಟೆ ಭಾರಿ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗಿದೆ. ಅಮೆಜಾನಸ್‌ ರಾಜ್ಯದ ಮಾನೌಸ್‌ ನಲ್ಲಿನ ಅಂಟಾನಿಯೋ ಟ್ರಿಂಡೇಡ್‌ ಪ್ಯಾನಲ್ ಇನ್ಸ್ಟಿಟ್ಯೂಟ್‌ ಜೈಲು ಒಂದರಲ್ಲೇ ಸುಮಾರು 42 ಖೈದಿಗಳು ಮೃತರಾಗಿದ್ದಾರೆ.

ಉತ್ತರ ಬ್ರೆಜಿಲ್‌ನಲ್ಲಿ ಮಾದಕ ದ್ರವ್ಯ ಸಾಗಾಣಿಕೆ ಯಾರಿಗೆ ಸೇರಬೇಕೆಂಬ ಕಾರಣಕ್ಕೆ ನಡೆದ ವಾಗ್ವಾದ ಈ ರೀತಿಯ ಭಾರಿ ಹಿಂಸಾತ್ಮಕ ಗಲಭೆಗೆ ಕಾರಣವಾಗಿದೆ ಎನ್ನಲಾಗಿದೆ.

ಆಸ್ಟ್ರಿಯಾ ಸರ್ಕಾರದ ಪತನಕ್ಕೆ ಕಾರಣವಾದ ಇಸ್ರೇಲ್ ಗುಪ್ತಚರ ಸಂಸ್ಥೆ

ಗಲಭೆಗಳು ಭಾನುವಾರ ಪ್ರಾರಂಭಗೊಂಡವು ಎನ್ನಲಾಗಿದೆ. ಭಾನುವಾರವೇ ಕೆಲವು ಖೈದಿಗಳ ಹೆಣಗಳು ಪೊಲೀಸ್ ಅಧಿಕಾರಿಗಳಿಗೆ ದೊರೆತಿತ್ತು, ಕೆಲವರು ಉಸಿರುಗಟ್ಟಿ ಸತ್ತಿದ್ದರೆ ಇನ್ನು ಕೆಲವರು ಹರಿತವಾದ ಟೂತ್‌ಬ್ರೆಶ್‌ನಿಂದ ಚುಚ್ಚಲ್ಪಟ್ಟಿದ್ದರು.

ವಿಡಿಯೋ: ಮೋದಿ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹೆದರಿದ ಪಾಕಿಸ್ತಾನ

2017 ರಲ್ಲಿ ಇದೇ ಮಾದರಿಯ ಗಲಭೆ ಉತ್ತರ ಬ್ರೆಜಿಲ್‌ ರಾಜ್ಯದೆಲ್ಲೆಡೆ ಹಬ್ಬಿ ಕನಿಷ್ಟ 120 ಮಂದಿ ಅಸುನೀಗಿದ್ದರು. ಪ್ರಸ್ತುತ ಪ್ರಾರಂಭವಾಗಿರುವ ಗಲಭೆಯನ್ನು ಹತ್ತಿಕ್ಕಲು ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

English summary
violence in North Brazil's four different jails minimum 55 prisoners dead. violence broke out between two drug supplier gangs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X