ಖೋಸ್ಲಾ ಮಗಳ ನಗ್ನ ಚಿತ್ರ ಹಿಡಿದು ಕಾಡಿದ ಪ್ರೇಮಿ
ವಾಷಿಂಗ್ಟನ್, ಏ. 25 : ಸನ್ ಮೈಕ್ರೋಸಿಸ್ಟೆಂ ಸಹಸಂಸ್ಥಾಪಕ ಭಾರತ ಮೂಲದ ಅಮೆರಿಕದ ಕೋಟ್ಯಾಧಿಪತಿ ವಿನೋದ್ ಖೋಸ್ಲಾ ಅವರ ಮಗಳ ನಗ್ನ ಚಿತ್ರಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ (ಸುಲಿಗೆ) ಮಾಡಲು ಯತ್ನಿಸುತ್ತಿರುವ ಯುವಕನ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋಟ್ಯಾಧಿಪತಿಯ ಮಗಳಾದ ನೀನಾ ಖೋಸ್ಲಾ (26) ಮತ್ತು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರ ಡಗ್ಲಾಸ್ ಟಾರ್ಲೋ (27) ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಆ ಸಂದರ್ಭದಲ್ಲಿ ತಾವೇ ತೆಗೆದುಕೊಂಡಿದ್ದ ಕೆಲ ಅಶ್ಲೀಲ ಚಿತ್ರಗಳನ್ನು, ವಿಡಿಯೋಗಳನ್ನು ನೀನಾ ಅವರೇ ಡಗ್ಲಾಸ್ ಜೊತೆ ಹಂಚಿಕೊಂಡಿದ್ದರು.
ಎರಡು ವರ್ಷಗಳ ಸಂಬಂಧಕ್ಕೆ ತಿಲಾಂಜಲಿಯಿಟ್ಟು ಇಬ್ಬರೂ 2010ರಲ್ಲೇ ಬೇರೆಬೇರೆಯಾಗಿದ್ದರು. ಆದರೆ, ಹಣದ ಆಸೆ ಕೇಳಬೇಕಲ್ಲ? ನೀನಾಳ ತಾಯಿ ನೀರುಳಿಗೆ ಮಗಳ ಹಲವಾರು ಅಶ್ಲೀಲ ಚಿತ್ರವನ್ನು ಕಳಿಸಿ ಹಣ ನೀಡಬೇಕೆಂದು ಆಗ್ರಹಿಸಲು ಡಗ್ಲಾಸ್ ಆರಂಭಿಸಿದ ಎಂದು ತನಿಖಾ ವೆಬ್ ಸೈಟ್ ದಿ ಸ್ಮೋಕಿಂಗ್ ಗನ್ ವರದಿ ಮಾಡಿದೆ.

"ಎಲ್ಲ ಅಶ್ಲೀಲ ಚಿತ್ರಗಳನ್ನು ರೆಡ್ಡಿಟ್ ನಲ್ಲಿ ಹಾಕುತ್ತೇನೆ. ಆ ಚಿತ್ರಗಳನ್ನು ಇಂಟರ್ನೆಟ್ ನಿಂದ ತೆಗೆದುಹಾಕಲು ಕೂಡ ಸಾಧ್ಯವಿಲ್ಲ" ಎಂಬ ಸಂದೇಶವನ್ನು ಡಗ್ಲಾನ್ ನೀನಾಳ ತಾಯಿ ನೀರುಳಿಗೆ ಕಳಿಸಿದ್ದಾನೆ. 2012ರಲ್ಲಿ 72 ಸಾವಿರ ಡಾಲರ್ ಹಣ ನೀಡಬೇಕೆಂದು ಆಗ್ರಹಿಸಿ ನೀನಾ ಮತ್ತು ಆಕೆಯ ತಾಯಿ ನೀರುಳನ್ನು ಕಾಡಲು ಡಗ್ಲಾಸ್ ಆರಂಭಿಸಿದ್ದಾನೆ. [ಮಹಿಳೆ ದೌರ್ಜನ್ಯ ಕುರಿತ ವಿಡಿಯೋ ವಿಡಂಬನೆ]
ಪ್ರಕರಣ ದಾಖಲಿಸಿಕೊಂಡಿದ್ದ ಎಫ್‌ಬಿಐ ಕಳೆದ ವಾರ ಡಗ್ಲಾಸ್ ಟಾರ್ಲೋನನ್ನು ಬಂಧಿಸಿ ನಂತರ ಬಿಡುಗಡೆ ಮಾಡಿತ್ತು. ಪ್ರಾಥಮಿಕ ವಿಚಾರಣೆಗಾಗಿ ಇದೇ ಶುಕ್ರವಾರ ಡಗ್ಲಾಸ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನೀನಾ ಖೋಸ್ಲಾ ಅವರು ನಿರಾಕರಿಸಿದ್ದಾರೆ.












Click it and Unblock the Notifications