ಡ್ಯಾಂ ಬ್ಲಾಸ್ಟ್.. ನೀರಿನ ಜೊತೆ ಕೊಚ್ಚಿ ಹೋದ ಜನರ ಬದುಕು!

ಖೆರ್ಸನ್: ರಷ್ಯಾ & ಉಕ್ರೇನ್ ಯುದ್ಧದಲ್ಲಿ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಅದರಲ್ಲೂ ಖೆರ್ಸನ್ ಪ್ರಾಂತ್ಯದ ಡ್ಯಾಂ ಸ್ಫೋಟಗೊಂಡ ನಂತರ ಸಾವಿರಾರು ಜನ ಸಾವಿನ ಸುಳಿಗೆ ಸಿಲುಕಿದ್ದಾರೆ. ದಿಢೀರ್ ನೂರಾರು ಟಿಎಂಸಿ ನೀರು ನುಗ್ಗಿದ ಪರಿಣಾಮ 42000 ಜನ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ರಷ್ಯಾ ಸೈನಿಕರು ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ ಎನ್ನಲಾದ ಖೆರ್ಸನ್ ಡ್ಯಾಂ ಧುಮ್ಮಿಕ್ಕಿ ಭೋರ್ಗರೆಯುತ್ತಿದೆ. ಉಕ್ರೇನ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಷ್ಯಾ ಈ ರೀತಿ ಅಟ್ಯಾಕ್ ಮಾಡಿದೆ ಅನ್ನೋ ಆರೋಪ ಉಕ್ರೇನ್ ಅಧ್ಯಕ್ಷರದ್ದು. ಆದರೆ ರಷ್ಯಾ ಮತ್ತು ವ್ಲಾದಿಮಿರ್ ಪುಟಿನ್ ಪಡೆ ಇದನ್ನ ತಿರಸ್ಕರಿಸಿದೆ. ನಾವು ಇಂತಹ ನೀಚ ಕೃತ್ಯ ಮಾಡೋದಿಲ್ಲ ಅನ್ನೋ ಮಾತನ್ನ ರಷ್ಯಾ ಹೇಳುತ್ತಿದೆ. ಇವರಿಬ್ಬರ ಕಚ್ಚಾಟದಲ್ಲಿ ಸಾಮಾನ್ಯ ಜನರ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ಜನರ ಬದುಕು ನೀರಿನ ಜೊತೆ ಕೊಚ್ಚಿ ಹೋದಂತಾಗಿದೆ (Russia Ukraine War).

Villagers shifting their house after Kherson dam blast

ಜನರ ರಕ್ಷಣೆ ಮಾಡುತ್ತಿಲ್ವಾ ಉಕ್ರೇನ್?

ಖೆರ್ಸನ್ ಪ್ರಾಂತ್ಯದ ಡ್ಯಾಂ ಸ್ಫೋಟದ ಬಳಿಕ ಜನ ಆತಂಕದಲ್ಲೇ ಜೀವ ಕೈಯಲ್ಲಿಡಿದು ತಮ್ಮ ತಮ್ಮ ಮನೆ ಬಿಟ್ಟು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಬಹುತೇಕರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರುತ್ತಿದ್ದು, ಕೊನೆಗೆ ಜೀವ ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿ ತಮ್ಮ ಹಸುಗಳ ಜೊತೆ ಮನೆ ಖಾಲಿ ಮಾಡಿ ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ. ನೂರಾರು ಟಿಎಂಸಿ ನೀರು ಭೋರ್ಗರೆದು ಬರುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಉಕ್ರೇನ್ ಸರ್ಕಾರ ಕ್ರಮ ಕೈಗೊಂಡಿಲ್ಲ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ.

( )

ಘಟನೆ ನಡೆದಿದ್ದು ಹೇಗೆ?

ಖೆರ್ಸನ್ ಡ್ಯಾಂ ನಿರ್ಮಾಣವಾಗಿದ್ದು 1956ರಲ್ಲಿ. ಸುಮಾರು 240 ಕಿ.ಮೀ. ವಿಸ್ತಾರದವರೆಗೂ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿತ್ತು ಜಲಾಶಯ. ಇಂತಹ ಬೃಹತ್ ಜಲಾಶಯ ಸ್ಫೋಟಗೊಂಡಿರುವ ಪರಿಣಾಮ ಡ್ನಿಪ್ರೊದ ಪಶ್ಚಿಮ ದಂಡೆಯ ಹಳ್ಳಿಗಳಿಗೆ ಅಪಾಯ ಎದುರಾಗಿದೆ. ನದಿ ನೀರಿನ ಜೊತೆಗೆ ಹಾವು, ಚೇಳು, ಮೊಸಳೆ, ಮೀನು ಹೀಗೆ ಜೀವ ತೆಗೆಯುವ ಜೀವಿಗಳು ಕೂಡ ಮನೆಗೆ ನುಗ್ಗುತ್ತಿವೆ. ಹೀಗಾಗಿ ಜನ ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ಹಿಂದೆ ರಷ್ಯಾ ಕೈವಾಡ ಇದೆ ಎಂದು ಉಕ್ರೇನ್ ಆರೋಪಿಸುತ್ತಿದೆ, ಆದರೆ ರಷ್ಯಾ ನಾನು ಮಾಡಿಲ್ಲ ಅಂತಿದೆ. ಈ ನಡುವೆ ಡ್ಯಾಂಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಿರುವುದು ಪಕ್ಕಾ ಆಗಿದೆ.

Villagers shifting their house after Kherson dam blast

ರಷ್ಯಾ ರಾಜಧಾನಿಯಲ್ಲಿ ಹೈಅಲರ್ಟ್

ಉಕ್ರೇನ್ ಕಾದು ಕುಳಿತಿದ್ದ ಸಮಯ ಬಂದಂತೆ ಕಾಣುತ್ತಿದೆ. ಏಕೆಂದರೆ ರಷ್ಯಾದ ವಿರುದ್ಧ ಈಗ ಉಕ್ರೇನ್‌ಗೆ ಬಲವಾದ ಕಾರಣ ಸಿಕ್ಕಿದೆ. ಹೀಗಾಗಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ನೀಡಿದ ಭಯಾನಕ ಅಸ್ತ್ರಗಳು ಉಕ್ರೇನ್ ನೆಲಕ್ಕೆ ಬಂದಿವೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಲ್ಲೇ ರಷ್ಯಾ ಅಲರ್ಟ್ ಆಗಿದೆ. ತನ್ನ ಮೇಲೆ ಉಕ್ರೇನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಷ್ಯಾ ಸೇನೆ ಅಲರ್ಟ್ ಆಗಿ ಕ್ರಮ ಕೈಗೊಂಡಿದೆ. ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಕೂಡ ರಷ್ಯಾ ಇದೀಗ ಅಲರ್ಟ್ ಮಾಡಿದ್ದು, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಡ್ರೋನ್‌ಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

( )

ಉಕ್ರೇನ್ ಸ್ನೇಹಿತರಿಂದ ರಷ್ಯಾಗೆ ವಾರ್ನಿಂಗ್!

ಉಕ್ರೇನ್ ಡ್ಯಾಂ ಬ್ಲಾಸ್ಟ್ ಬಗ್ಗೆ ಯುರೋಪ್ ಒಕ್ಕೂಟ ಕೂಡ ಅಸಮಾಧಾನ ಹೊರಹಾಕಿದೆ. ಹಾಗೇ ರಷ್ಯಾಗೆ ಪರೋಕ್ಷ ಎಚ್ಚರಿಕೆಯನ್ನ ನೀಡಲಾಗುತ್ತಿದೆ. ಆದ್ರೆ ಈ ದಾಳಿಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ರಷ್ಯಾ ಹೇಳುತ್ತಲೇ ಇದೆ. ಈ ನಡುವೆ ಅಮೆರಿಕ ಕೂಡ ಉಕ್ರೇನ್‌ಗೆ ಸಹಾಯ ಮಾಡಿ, ರಷ್ಯಾ ವಿರುದ್ಧ ಗೆಲುವಿಗೆ ಸಹಕರಿಸಲು ಮುಂದಾಗಿದೆ ಎನ್ನುವ ಮಾತು ಓಡಾಡುತ್ತಿದೆ. ಈ ಮೂಲಕ ಮತ್ತೊಂದು ಸುತ್ತಿನಲ್ಲಿ ಅಮೆರಿಕ ತನ್ನ ಗೆಳೆಯ ಉಕ್ರೇನ್‌ಗೆ ದೊಡ್ಡ ಮೊತ್ತದ ಪ್ಯಾಕೇಜ್ ಗಿಫ್ಟ್ ಕೊಡೋದು ಬಹುತೇಕ ಪಕ್ಕಾ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+