ವಿಡಿಯೋ: ಮೂರ್ಛೆ ಹೋಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆ
ಮೂರ್ಛೆ ಹೋಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆ ಪವಾಡದಂತೆ ಬದುಕುಳಿದಿದ್ದಾಳೆ. ಸದ್ಯ ಈ ಭಯಾಕನ ವಿಡಿಯೋ ವೈರಲ್ ಆಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅರ್ಜೆಂಟೀನಾದಲ್ಲಿ ಚಲಿಸುತ್ತಿದ್ದ ರೈಲಿನ ಕೆಳಗೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯೊಬ್ಬರು ಪವಾಡ ಸದೃಶದ ರೀತಿಯಲ್ಲಿ ಬದುಕುಳಿದಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬ್ಯೂನಸ್ ಐರಿಸ್‌ನ ಸ್ವಾತಂತ್ರ್ಯ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಏಕಾಏಕಿ ಚಲಿಸುತ್ತಿದ್ದ ರೈಲು ಕೆಳಗೆ ಬಿದ್ದಿದ್ದಾಳೆ. ತಕ್ಷಣ ರೈಲು ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ.
ರೈಲು ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ಮಹಿಳೆ ಕ್ಯಾಂಡೆಲಾ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದಾಳೆ. ಮಾರ್ಚ್ 29 ರಂದು ಈ ಘಟನೆ ನಡೆದಿದೆ. ದೃಶ್ಯದಲ್ಲಿ ರೈಲು ನಿಲ್ದಾಣದಲ್ಲಿ ಎಲ್ಲವೂ ಸಹಜವಾಗಿರುತ್ತದೆ. ಕ್ಯಾಂಡೆಲಾ ಅವರು ರೈಲು ಆಗಮನದ ವೇಳೆ ಇತರರಿಗಿಂತ ಕೊಂಚ ದೂರದಲ್ಲಿ ನಿಂತಿರುತ್ತಾರೆ. ಆದರೆ ನೋಡುಗರಿಗೆ ಇದು ಆತ್ಮಹತ್ಯೆ ಎಂಬಂತೆ ಕ್ಯಾಂಡೆಲಾ ಚಲಿಸುತ್ತಿದ್ದ ರೈಲಿನ ಕಡೆಗೆ ವೇಗವಾಗಿ ಆಗಮಿಸಿ ಆಯತಪ್ಪಿ ಬಿಳುತ್ತಾರೆ. ಅವರೊಂದಿಗೆ ಇದ್ದ ಸಹಪ್ರಯಾಣಿಕರು ಘಟನೆ ಕಂಡು ಬೆಚ್ಚಿ ಬೀಳುತ್ತಾರೆ. ತಕ್ಷಣ ರಕ್ಷಣೆಗೆ ದಾವಿಸುತ್ತಾರೆ. ಬಳಿಕ ಅಲ್ಲೇ ಇದ್ದ ಸಿಬ್ಬಂದಿ ರೈಲು ನಿಂತ ಬಳಿಕ ಆಕೆಯನ್ನು ರಕ್ಷಿಸಿ ಮೇಲೆಕ್ಕೆ ತರುತ್ತಾರೆ. ಪ್ರಜ್ಞೆ ಕಳೆದುಕೊಂಡ ಆಕೆಯನ್ನು ನಂತರ ಅಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಕ್ಯಾಂಡೆಲಾ ಅವರನ್ನು ಬ್ಯೂನಸ್ ಐರಿಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ದೂರಾಗಿದ್ದಾರೆ.
A woman in #BuenosAires, #Argentina
— ZOONewsTV (@ZOONewsTV) April 19, 2022
survived after falling under a moving train pic.twitter.com/BTItaVbQNE
ಚೇತರಿಕೆ ಬಳಿಕ ಮಾತನಾಡಿದ ಕ್ಯಾಂಡೆಲಾ, "ನಾನು ಇನ್ನೂ ಹೇಗೆ ಜೀವಂತವಾಗಿದ್ದೇನೆ ಎಂದು ನನಗೆ ತಿಳಿದಿಲ್ಲ. ನಾನು ಇನ್ನೂ ಏನಾಯ್ತು ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, "ಎಂದು ಅರ್ಜೆಂಟೀನಾದ ದೂರದರ್ಶನ ಚಾನೆಲ್‌ಗೆ ತಿಳಿಸಿದ್ದಾರೆ. ಅಪಘಾತದಿಂದ ಬದುಕುಳಿದ ನಂತರ ತಾನು ಮರುಜನ್ಮ ಪಡೆದಿದ್ದೇನೆ ಎಂದು ಕ್ಯಾಂಡೆಲಾ ಹೇಳಿದರು.

"ನಾನು ರಕ್ತದೊತ್ತಡದಲ್ಲಿ ಹಠಾತ್ ಕುಸಿತವನ್ನು ಅನುಭವಿಸಿದೆ ಮತ್ತು ಮೂರ್ಛೆ ಹೋದೆ. ನಾನು ನನ್ನ ಎದುರಿಗಿದ್ದ ವ್ಯಕ್ತಿಯನ್ನು ಎಚ್ಚರಿಸಲು ಪ್ರಯತ್ನಿಸಿದೆ. ಆದರೆ ಪ್ರಯೋಜನವಾಗಲಿಲ್ಲ ನಾನು ರೈಲಿಗೆ ಡಿಕ್ಕಿ ಹೊಡೆದ ಕ್ಷಣ ಮಾತ್ರ ನನಗೆ ನೆನಪಿದೆ ಬೇರೇನೂ ನೆನಪಿಲ್ಲ"ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು, ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬರು ಸೂರತ್‌ನಲ್ಲಿ ಪ್ಲಾಟ್‌ಫಾರ್ಮ್ ಮತ್ತು ಚಲಿಸುವ ರೈಲಿನ ನಡುವೆ ಜಾರಿಬಿದ್ದು ರಕ್ಷಿಸಲ್ಪಟ್ಟರು. ವ್ಯಕ್ತಿ ರೈಲಿನಿಂದ ಇಳಿಯಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಫೆಬ್ರವರಿಯಲ್ಲಿ ದೆಹಲಿಯ ಮೆಟ್ರೋ ರೈಲು ಹಳಿಗಳ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ರಕ್ಷಿಸಿದರು. ಘಟನೆಯ ವಿಡಿಯೋ ಕ್ಲಿಪ್‌ನಲ್ಲಿ ವ್ಯಕ್ತಿ ತನ್ನ ಫೋನ್‌ನಲ್ಲಿ ಮುಳುಗಿ ಪ್ಲಾಟ್‌ಫಾರ್ಮ್‌ನಲ್ಲಿ ಹತ್ತಲು ಪ್ರಯತ್ನಿಸಿದ್ದು ಘಟನೆಗೆ ಕಾರಣವಾಗಿದೆ.












Click it and Unblock the Notifications