ವಿಡಿಯೋ: ಕಳ್ಳತನದ ಬಗ್ಗೆ ನೇರ ಪ್ರಸಾರದ ವೇಳೆ ವರದಿಗಾರನ ಇಯರ್‌ಫೋನ್ ಕದ್ದ ಗಿಳಿ
ಚಿಲಿಯ ವರದಿಗಾರನೊಬ್ಬ ಕಳ್ಳತನದ ಬಗ್ಗೆ ವರದಿ ನೀಡುತ್ತಿರುವಾಗ ಗಿಳಿಯೊಂದು ಆತನ ಇಯರ್‌ಫೋನ್ ಕದ್ದು ಹೋಗುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. 'ಕಾಗೆ ಕುಳಿತುಕೊಳ್ಳೋದಕ್ಕೂ ಟೊಂಗೆ ಮುರಿಯೋದಕ್ಕೂ' ಸರಿಹೋಗಿದೆ ಎನ್ನುವ ಮಾತಿನಂತೆ ವರದಿಗಾರ ಗಿಳಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ.
ಚಿಲಿಯ ವರದಿಗಾರ ತನ್ನ ಹಿಂದೆ ಗಿಡ ಮರಗಳಿರುವ ಪ್ರದೇಶದಲ್ಲಿ ನಿಂತು ಕ್ಯಾಮರಾ ಮುಂದೆ ವರದಿ ಒಪ್ಪಿಸುತ್ತಿರುತ್ತಾರೆ. ಈ ವೇಳೆ ಹಾರಿ ಬಂದ ಗಿಳಿ ಅವರ ಹೆಗಲ ಮೇಲೆ ಕುಳಿತುಕೊಳ್ಳುತ್ತದೆ. ಕೊಂಚ ಇರುಸುಮುರಸಾದರೂ ವರದಿಗಾರ ವರದಿ ಒಪ್ಪಿಸುವುದನ್ನು ಮುಂದುವರೆಸುತ್ತಾರೆ. ತಕ್ಷಣ ಗಿಳಿ ಆತನ ಕಿವಿಗೆ ಹಾಕಿಕೊಂಡಿದ್ದ ಇಯರ್‌ಫೋನ್ ಕದ್ದು ಹಾರಿ ಹೋಗುತ್ತದೆ. ಈ ವೇಳೆ ವರದಿಗಾರ ಗಿಳಿಯ ಉದಾಹರಣೆಯನ್ನೇ ತೆಗೆದುಕೊಳ್ಳುತ್ತಾರೆ. ಈ ಸಂಪೂರ್ಣ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಚಿಲಿ ಪ್ರದೇಶದಲ್ಲಿ ನಡೆದ ಒಂದು ಕಳ್ಳತನದ ಬಗ್ಗೆ ಪತ್ರಕರ್ತ ನಿಕೋಲಸ್ ಕ್ರುಮ್ ಅವರು ಚಿಲಿವಿಷನ್ ಚಾನೆಲ್‌ಗೆ ನೇರ ಪ್ರಸಾರದಲ್ಲಿ ವರದಿ ನೀಡುತ್ತಿದ್ದರು. ಈ ವೇಳೆ ಬಂದ ದರೋಡೆಕೋರ ಗಿಳಿ ವರದಿಗಾರನ ಭುಜದ ಮೇಲೆ ಕುಳಿತು ಇಯರ್‌ಪೀಸ್ ಕದ್ದು ಹಾರಿ ಹೋಗಿದೆ. ವರದಿಗಾರ ನೀಡುವ ವರದಿಗೂ ಹಾಗೂ ನಡೆದ ಘಟನೆಗೂ ಪೂರಕವಾದ ಉಲ್ಲಾಸದ ಕ್ಷಣವಿದು. ಇದು ಕ್ಯಾಮರಾದಲ್ಲಿ ತುಂಬಾ ಸ್ಪಷ್ಟವಾಗಿ ಸೆರೆಯಾಗಿದೆ.

ಚಿಲಿ ವರದಿಗಾರನ ಇಯರ್‌ಫೋನ್ ಕದ್ದ ಗಿಳಿ
ಪತ್ರಕರ್ತ ನಿಕೋಲಸ್ ಕ್ರುಮ್ ನಿರ್ಮಾಪಕರೊಂದಿಗೆ ಸ್ಥಳೀಯ ದರೋಡೆಗಳ ಹೆಚ್ಚಳದ ಕುರಿತು ವರದಿ ನೀಡುತ್ತಿದ್ದರು. ಈ ಘಟನೆಯಿಂದ ನಿಕೋಲಸ್ ಕ್ರುಮ್ ಕೂಡ ಆಶ್ಚರ್ಯಗೊಂಡಿದ್ದಾರೆ. ಕೊನೆಗೆ ಇಯರ್‌ಪೀಸ್ ಅನ್ನು ಮರಳಿ ಪಡೆಯಲು, ಸಿಬ್ಬಂದಿ ಪಕ್ಷಿಯನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಅದು ಹೊರಟುಹೋಯಿತು. ಸ್ಥಳೀಯ ಮಾಧ್ಯಮದ ಮೂಲಗಳ ಪ್ರಕಾರ, ಗಿಳಿ ನಂತರ ಇಯರ್‌ಪಾಡ್ ಅನ್ನು ಕೈಬಿಟ್ಟಿತು, ಅದು ಅಂತಿಮವಾಗಿ ವರದಿಗಾರರಿಗೆ ಸಿಕ್ಕಿದೆ ಎನ್ನಲಾಗಿದೆ.
Beware the earphone pinching parrots 🦜 of #Huddersfield, @AndrewVossy... 😂@RLWC2021 #RLWC2021 pic.twitter.com/BXtLoHujYo
— Jayne Halhead 🇺🇦 (@Jaynes__World) November 5, 2022
ಹಾಸ್ಯಮಯ ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ನಿಕೋಲಸ್ ಕ್ರುಮ್ ಸ್ಯಾಂಟಿಯಾಗೊ ಡಿ ಚಿಲಿಯಲ್ಲಿ ಕಳ್ಳತನಗಳು ಮತ್ತು ಭದ್ರತೆಯ ಬಗ್ಗೆ ಲೈವ್ ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಭುಜದ ಮೇಲೆ ಗಿಳಿ ಕುಳಿತಿರುವಾಗ ಪತ್ರಕರ್ತ ಕ್ಯಾಮರಾಮನ್‌ಗೆ ಸಿಗ್ನಲ್ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿ ಹಕ್ಕಿ ಇದ್ದಕ್ಕಿದ್ದಂತೆ ತನ್ನ ಬಲಕ್ಕೆ ಎರಡು ಹೆಜ್ಜೆಗಳನ್ನು ಸರಿಸಿ ಇಯರ್ ಪಾಡ್ ತನ್ನ ಬಾಯಲ್ಲಿ ಹಿಡಿದುಕೊಂಡು ಹಾರಿ ಹೋಗಿದೆ.
ಇದು ದೂರದರ್ಶನದಲ್ಲಿ ಲೈವ್ ಆಗಿ ಸಂಭವಿಸುವ ವಿಚಿತ್ರವಾದ ಸಂಗತಿಗಳಲ್ಲಿ ಒಂದಾಗಿದೆ. ಅನೇಕರು ಇಂಟರ್ನೆಟ್‌ನಲ್ಲಿ ವಿಡಿಯೋದ ಬಗ್ಗೆ ಸಂತೋಷಪಟ್ಟಿದ್ದಾರೆ. ವಿಡಿಯೋ ಸ್ಪ್ಯಾನಿಷ್ ಭಾಷೆಯಲ್ಲಿದೆ. ಪ್ರಪಂಚದಾದ್ಯಂತ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಜೊತೆಗೆ ಈ ವಿಡಿಯೋ ಬಗ್ಗೆ ಹಲವಾರು ಜನ ಕಾಮೆಂಟ್ ಮಾಡಿದ್ದಾರೆ.

ಕಾಮೆಂಟ್
ಬಳಕೆದಾರರು ಈ ವಿಡಿಯೋವನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆ. ಕೆಲವರು ಹಾಲಿವುಡ್ ಸ್ಟಾರ್ ರಿಯಾನ್ ಗೊಸ್ಲಿಂಗ್‌ಗೆ ಹೋಲಿಸಿ ಬರೆದಿರುವುದು ಹೀಗಿದೆ- "ಚಿಲಿಯ ರಿಯಾನ್ ಗೊಸ್ಲಿಂಗ್ ತನ್ನ ಏರ್ ಪಾಡ್ ಅನ್ನು ಕಳೆದುಕೊಂಡರು" ಎಂದು ಬರೆದಿದ್ದಾರೆ.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications