ಮಂಗಳ ಗ್ರಹದ ಮೇಲೆ ನೀರಿನ ಕುರುಹು: ಇಎಸ್‌ಎ ಮಾಹಿತಿ

ನವದೆಹಲಿ, ಜುಲೈ 7: ಮಂಗಳ ಗ್ರಹದ ಮೇಲೆ ನೀರಿನ ಕುರುಹು ಪತ್ತೆಯಾಗಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.

ಮಂಗಳ ಗ್ರಹದ ಮೇಲೆ ಬೃಹತ್​ ಮಂಜುಗಡ್ಡೆಯ ಕುಳಿ ಪತ್ತೆಯಾಗಿದೆ. ಅಂದಾಜು 82 ಕಿ.ಮೀ. ಅಗಲವಾಗಿರುವ ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ.
ಕೊರೊಲೇವ್​ ಕುಳಿ ಎಂದು ಗುರುತಿಸಲಾಗುವ ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್​ ಎಕ್ಸ್​ಪ್ರೆಸ್​ ರವಾನಿಸಿರುವುದಾಗಿ ಇಎಸ್​ಎ ತಿಳಿಸಿದೆ.

ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್​ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನ ಮುಂದುವರೆಸಿವೆ. ಕೆಂಪುಗ್ರಹದ ಮೇಲೆ ನೀರು ಮತ್ತು ಜೀವಿಗಳು ವಾಸವಾಗಿದ್ದ ಲಕ್ಷಣವನ್ನು ಪತ್ತೆ ಮಾಡಲು ಕಷ್ಟ ಪಡುತ್ತಲೇ ಇದೆ. ಈ ಸಂದರ್ಭದಲ್ಲಿ ಇಎಸ್‌ಎ ಸಿಹಿಸುದ್ದಿ ನೀಡಿದೆ.

Dont Miss The Video Of Ice-filled Korolev Crater On Mars

ಮಂಜುಗಡ್ಡೆ ಮೇಲಿನ ಗಾಳಿ ತಣ್ಣಗಿದ್ದು, ಸುತ್ತಲಿನ ಗಾಳಿಗಿಂತಲೂ ಭಾರವಾಗಿದೆ. ಗಾಳಿಯು ಶಾಖನಿರೋಧಕ ಗುಣವನ್ನು ಹೊಂದಿರುವ ಕಾರಣ ಕುಳಿಯಲ್ಲಿರುವ ಮಂಜುಗಡ್ಡೆ ಕರಗದೆ ಹಾಗೆಯೇ ಗಟ್ಟಿಯಾಗಿ ಉಳಿದಿದೆ ಎಂದು ಇಎಸ್​ಎ ವಿವರಿಸಿದೆ.

ಕೆಂಪು ಗ್ರಹದ ದಕ್ಷಿಣ ಭಾಗದಲ್ಲಿ ಒಲಿಂಪಿಯಾ ಆ್ಯಂಡೆ ಎಂಬ ಮರಳಿನ ದಿಬ್ಬವಿದೆ. ಇದು ಮಂಗಳಗ್ರಹದ ಉತ್ತರ ಧ್ರುವದ ಒಂದು ಭಾಗವನ್ನು ಆವರಿಸಿದೆ. ಈ ಕುಳಿಯಲ್ಲಿನ ಮಂಜುಗಡ್ಡೆ ವರ್ಷಪೂರ್ತಿ ಸ್ಥಿರವಾಗಿರುತ್ತದೆ. ಏಕೆಂದರೆ ಈ ಭಾಗದಲ್ಲಿನ ವಾಯುಭಾರ ಕುಸಿತ ನೈಸರ್ಗಿಕವಾಗಿ ತಂಪು ವಾತಾವರಣಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+