ಚಂದ್ರನ ಮೇಲೆ ಅನ್ಯಗ್ರಹ ಜೀವಿ ನೆರಳು ಪತ್ತೆ!
ನ್ಯೂಯಾರ್ಕ್, ಆ. 14: ಇತ್ತೀಚಿಗೆ ನಾಸಾ ಮತ್ತು ಗೂಗಲ್ ಅರ್ಥ್ ತೆಗೆದ ಚಂದ್ರನ ಮೇಲ್ಭಾಗದ ಚಿತ್ರ ಎಲ್ಲರ ಹುಬ್ಬೇರಿಸಿದೆ. ಈ ಚಿತ್ರವನ್ನು ಗಮನಿಸಿ ನೋಡಿದರೆ ಮಾನವಾಕಾರದ ಆಕೃತಿ ನಡೆಯುವಂತೆ ಅದರ ನೆರಳು ಕಾಣಿಸುವ ಭಂಗಿಯಲ್ಲಿ ಚಿತ್ರವಿದೆ. ಚಂದ್ರನಲ್ಲಿ ಅನ್ಯಗ್ರಹ ಜೀವಿಗಳಿವೆಯೇ? ಇಲ್ಲಿ ಕಾಣಿಸಿರುವ ನೆರಳು ಸತ್ಯವೇ? ಎಂಬ ಚರ್ಚೆ ನಡೆಯುತ್ತಿದೆ.
ಮಾನವನನ್ನು ಹೋಲುವ ಅಕೃತಿ ಇರುವ ಚಿತ್ರ ಅಸ್ಪಷ್ಟವಾಗಿದೆಯಾದರೂ ಮಾನವ ಆಕೃತಿಯನ್ನು ಅದರ ನೆರಳೂ ಹಿಂಬಾಲಿಸುತ್ತಿರುವುದು ಸಹಜವಾಗಿಯೇ ಜನರಲ್ಲಿ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ.

ಮೊದಲಿಗೆ ಈ ಚಿತ್ರವುಳ್ಳ ವಿಡಿಯೋ ತುಣುಕನ್ನು 'ವಾವ್‌ಫಾರ್‌ರಿಯಲ್' ಎಂಬ ಬಳಕೆದಾರ ಯೂ ಟ್ಯೂಬ್‌ಗೆ ಹಾಕಿದ್ದಾರೆ. ವಿಶ್ವದಲ್ಲಿ ನಾವು (ಭೂಮಿಯ ಮೇಲಿನ ಮಾನವರು) ಮಾತ್ರ ಇರುವುದಲ್ಲ ಎಂಬುದನ್ನು ಈ ಚಿತ್ರ ಸಾರುತ್ತಿದೆಯೇ? ಇದು ಯಾವುದರ ಚಿತ್ರ ಎಂಬ ವಿವರಣೆಯನ್ನು ನಾಸಾ ಇನ್ನೂ ಸ್ಪಷ್ಟನೆ ನೀಡಿಲ್ಲ.
ಈ ಯೂ ಟ್ಯೂಬ್ ವೀಡಿಯೊ ಕಾಡ್ಗಿಚ್ಚಿನಂತೆ ಹರಡಿದ್ದು ಈಗಾಗಲೇ 20 ಲಕ್ಷ ಮಂದಿ ನೋಡಿದ್ದಾರೆ ಹಾಗೂ ಇನ್ನೂ ನೋಡುತ್ತಿದ್ದಾರೆ. ವಾವ್‌ಫಾರ್‌ರಿಯಲ್ ಬಳಕೆದಾರ ಯಾರು ಎಂಬುದರ ಬಗ್ಗೆ ಕೂಡಾ ಈಗ ತನಿಖೆ ನಡೆಯುತ್ತಿದೆಯಂತೆ. ಆದರೆ ಈ ಛಾಯಾಚಿತ್ರದ ನೈಜತೆಯ ಬಗೆಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಇದು ನೆರಳು ಬೆಳಕಿನ ಚಮತ್ಕಾರ ಇರಬಹುದೇ? ಎಂಬ ಪ್ರಶ್ನೆಯೂ ಎದ್ದಿದೆ.












Click it and Unblock the Notifications