Maduro Arrest: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನ: ನ್ಯೂಯಾರ್ಕ್‌ನಲ್ಲಿ ವಿಚಾರಣೆ ಎಂದ ಟ್ರಂಪ್
ಅಮೆರಿಕಾ: ಸೂಪರ್ ನೇಷನ್ ಅಮೆರಿಕಾ ದೇಶವು ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಡುರೊ ಮತ್ತು ಅವರ ಪತ್ನಿ ಅಮೆರಿಕದ ಯುದ್ಧನೌಕೆಯಲ್ಲಿದ್ದಾರೆ. ಅಲ್ಲದೇ ಅವರು ಯುಎಸ್‌ನ ನ್ಯೂಯಾರ್ಕ್‌ನಲ್ಲಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕಾದ ಯುದ್ಧ ನೌಕೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಪತ್ನಿ ಸಿಲಿಯಾ ಫ್ಲೋರ್ಸ್ ಇದ್ದಾರೆ. ಯುದ್ಧ ನೌಕೆಯಲ್ಲಿ ಇರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಮಾದಕ ದ್ರವ್ಯ ಭಯೋತ್ಪಾದನೆ ನಿಗ್ರಹ ಹಾಗೂ ಆಡಳಿತ ಬದಲಾವಣೆ ಪ್ರಶ್ನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮತ್ತು ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯ ಕಾರಣಕ್ಕೆ ವೆನೆಜುವೆಲಾದ ಮೇಲೆ ದಾಳಿ ಮಾಡಿರುವುದಾಗಿ ಅಮೆರಿಕಾ ಹೇಳಿದೆ.

ಅಮೆರಿಕಾದ ಪಡೆಗಳು ಇಬ್ಬರನ್ನು ಸಹ ಸೆರೆಹಿಡಿದಿದ್ದು, ಹಡಗಿನ ಮೂಲಕ ಕರೆದೊಯ್ಯಲಾಗುತ್ತಿದೆ. ಮುಂದಿನ ವಿಚಾರಣೆಯು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಷಿಯಲ್ ಮೀಡಿಯಾ ಟ್ರೂತ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ವೆನೆಜುವೆಲಾ ವಿಚಾರದಲ್ಲಿ ನಮ್ಮ ಸೈನಿಕರು ಅತ್ಯಂತ ಧೈರ್ಯಶಾಲಿ ಪ್ರದರ್ಶನವನ್ನು ನೀಡಿದ್ದಾರೆ. ನಾವು ಈ ವಿಚಾರದಲ್ಲಿ ತುಂಬಾ ಭಾಗಿಯಾಗುತ್ತೇವೆ. ನಾವು ಜನರಿಗೆ ಸ್ವಾತಂತ್ರ್ಯವನ್ನು ನೀಡಲು ಬಯಸುತ್ತೇವೆ. ಅಮೆರಿಕದ ವಿಶೇಷ ಪಡೆಗಳ ಧೈರ್ಯಶಾಲಿ ದಾಳಿ ಇದಾಗಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಏತನ್ಮಧ್ಯೆ, ವೆನೆಜುವೆಲಾದ ಆಡಳಿತ ಪಕ್ಷದ ನಾಯಕ ನಹುಮ್ ಫೆರ್ನಾಂಡಿಸ್ ಅವರು ಅಸೋಸಿಯೇಟೆಡ್ ಪ್ರೆಸ್‌ಗೆ, ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿಯುವಾಗ ಫೋರ್ಟ್ ಟಿಯುನಾ ಮಿಲಿಟರಿ ನೆಲೆಯೊಳಗಿನ ನೆಲೆಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅಮೆರಿಕಾ ದಾಳಿ ಹಿಂದೆ ಬೇರೆಯದ್ದೇ ಲೆಕ್ಕಾಚಾರ
ಇನ್ನು ಅಮೆರಿಕಾ ಮತ್ತೊಂದು ಯುದ್ಧಕ್ಕೆ ನಾಂದಿ ಹಾಡಿದೆ. ಅಮೆರಿಕಾದಲ್ಲಿ ಅಧಿಕಾರಕ್ಕೆ ಬಂದರೆ ವಿಶ್ವದ ಎಲ್ಲಾ ದೇಶಗಳ ನಡುವಿನ ಯುದ್ಧವನ್ನು ನಿಲ್ಲಿಸಲಿದ್ದೇನೆ. ವಿಶ್ವದಾದ್ಯಂತ ಶಾಂತಿ ನೆಲೆಸುವಂತೆ ಮಾಡುತ್ತೇನೆ ಎಂದು ಅಮೆರಿಕಾದ ಅಧ್ಯಕ್ಷರಾಗುವುದಕ್ಕೂ ಮುಂಚೆ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು. ಆದರೆ ಅಮೆರಿಕಾದ ಅಧ್ಯಕ್ಷರಾದ ಮೇಲೆ ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದೇ ಬೇರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೂ ಸೇರಿದಂತೆ ವಿಶ್ವದ ಎಂಟು ರಾಷ್ಟ್ರಗಳ ಯುದ್ಧವನ್ನು ನಿಲ್ಲಿಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಭಾರತವು ಸೇರಿದಂತೆ ಪ್ರಮುಖ ರಾಷ್ಟ್ರಗಳು ಅಮೆರಿಕಾದ ಈ ವಾದವನ್ನು ತಳ್ಳಿ ಹಾಕಿವೆ. ಇನ್ನು ಅಮೆರಿಕಾ ವೆನೆಜುವೆಲಾದ ದಾಳಿಯ ಹಿಂದೆ ಸಾಲದ ಲೆಕ್ಕಾಚಾರ ಇದೆ ಎನ್ನುವ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ವೆನೆಜುವೆಲಾದ ಮೇಲೆ ಮೂರು ಪ್ರಮುಖ ಕಾರಣಗಳಿಗಾಗಿ ದಾಳಿ ಮಾಡಿರುವುದಾಗಿ ಟ್ರಂಪ್ ಸರ್ಕಾರ ಹೇಳಿದೆ.
ಅದರಲ್ಲಿ ಮುಖ್ಯವಾಗಿ ವೆನೆಜುವೆಲಾದಿಂದ ಅಮೆರಿಕಾದ ಮೇಲೆ ವಲಸೆ ಹೆಚ್ಚಳ, ಮಾದಕವಸ್ತು ಹಾಗೂ ಮಾದಕ ವಸ್ತು ಭಯೋತ್ಪಾದನೆ ಹೆಚ್ಚಳವೇ ಇದಕ್ಕೆ ಕಾರಣ. ವೆನೆಜುವೆಲಾದಲ್ಲಿನ ಅವ್ಯವಸ್ಥೆಯು ಅಮೆರಿಕಾದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ತುರ್ತು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.












Click it and Unblock the Notifications