ಮಗಳ ಕಣ್ಮುಂದೆಯೇ ರೂಪದರ್ಶಿ ಮೋನಿಕಾ ಹತ್ಯೆ

ಕಾರಕಾಸ್, ಜ.8: ವೆನೆಜುವೆಲಾದ ಸುಂದರಿ ಮೋನಿಕಾ ಸ್ಪಿಯರ್ ಹಾಗೂ ಅವರ ಸಂಗಾತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮೋನಿಕಾ ಅವರ 5 ವರ್ಷದ ಮಗುವನ್ನು ಹತ್ಯೆ ಮಾಡದೆ ಉಳಿಸಿ ಹೋಗಿದ್ದಾರೆ.

ಈ ಕೊಲೆ ಪ್ರಕರಣ ನಿಗೂಢವಾಗಿದ್ದು, ಮೋನಿಕಾ ಸ್ಪಿಯರ್(29) ಹಾಗೂ ಅವರ ಸಂಗಾತಿ ಥಾಮಸ್ ಹೆನ್ರಿ ಬೆರಿ(39) ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕಳ್ಳತನ ಮಾಡಲು ಬಂದವರು ಯಾವೊಂದು ವಸ್ತುವನ್ನು ಕದಿಯದೇ ಹಾಗೆ ಪರಾರಿಯಾಗಿದ್ದಾರೆ. ಪೋಷಕರ ರಜಾ ದಿನಗಳ ಸಂಭ್ರಮದಲ್ಲಿದ್ದ ಐದು ವರ್ಷದ ಹೆಣ್ಣು ಮಗು ಮಾಯಾ ಬೆರಿ ಸ್ಪಿಯರ್ ಕಣ್ಮುಂದೆಯೇ ಅಪ್ಪ-ಅಮ್ಮನ ಹತ್ಯೆ ನಡೆದು ಹೋಗಿದೆ.

ವೆನೆಜುವೆಲದ ವಾಯುವ್ಯ ಭಾಗದ ಹೆದ್ದಾರಿ ರಸ್ತೆಯಲ್ಲಿ ಮೋನಿಕಾ ಅವರ ಕುಟುಂಬ ತೆರಳುವಾಗ ಕಾರು ಕೆಟ್ಟು ಹೋಗಿದೆ. ದುಷ್ಕರ್ಮಿಗಳು ರಸ್ತೆ ಮಧ್ಯೆ ಇದ್ದ ವಸ್ತುವೊಂದು ಬಡಿದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Venezuela: Beauty queen, partner shot dead

ದಾರಿಯಲ್ಲಿ ಹೋಗುತ್ತಿದ್ದ ಟ್ರಕ್ ವೊಂದನ್ನು ನಿಲ್ಲಿಸಿ ಸಹಾಯ ಬೇಡುತ್ತಿದ್ದ ಮೋನಿಕಾ ಅವರ ಮೇಲೆ ಅಲ್ಲೇ ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ಐದು ಜನರ ತಂಡ ಮುಗಿ ಬಿದ್ದಿದೆ. ಮೋನಿಕಾ ಹಾಗೂ ಅವರ ಪತಿ ತಕ್ಷಣವೇ ಕಾರಿನ ಒಳಹೊಕ್ಕು ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲರಾಗಿದ್ದಾರೆ.

ಘಟನೆಗೆ ಸಾಕ್ಷಿಯಾದ ಟ್ರಕ್ ಚಾಲಕ ಅಲ್ಲಿಂದ ಕೂಡಲೇ ಮುಂದಕ್ಕೆ ಚಲಿಸಿ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೂರು ಹತ್ಯೆಯಾಗಿರುವ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಕಾಲು ಮುರಿದುಕೊಂಡು ನೋವಿನಿಂದ ಪ್ರಜ್ಞೆ ತಪ್ಪಿದ್ದ ಮೋನಿಕಾ ಅವರ ಮಗಳು ಕಂಡು ಬಂದಿದ್ದಾಳೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ಮಗುವನ್ನು ರಕ್ಷಿಸಲಾಗಿದೆ. ಮೋನಿಕಾ ಅವರ ಸಾವಿಗೆ ಅಭಿಮಾನಿಗಳು ಹಾಗೂ ವೆನೆಜುವೆಲ ಅಧ್ಯಕ್ಷ ನಿಕೊಲಾಸ್ ಮಡುರೊ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಿಸ್ ವೆನೆಜುವೆಲ ಸೌಂದರ್ಯ ಸ್ಪರ್ಧೆ ಗೆದ್ದಿದ್ದ ಮೋನಿಕಾ ಅವರು 2005ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲಿಸ್ಟ್ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+