ಕೆಮ್ಮಿನ ಸಿರಪ್ ಕುಡಿದು ಉಜ್ಬೇಕಿಸ್ತಾನ್‌ದಲ್ಲಿ 18 ಮಕ್ಕಳ ಸಾವು: ಭಾರತದ ಮೇಲೆ ಆರೋಪ
ನವದೆಹಲಿ, ಡಿಸೆಂಬರ್ 29: ಕೆಮ್ಮಿನ ಸಿರಪ್ ಕುಡಿದ ಸುಮಾರು 18 ಮಕ್ಕಳು ಸಾವಿಗೀಡಾದ ಘಟನೆ ಉಜ್ಬೇಕಿಸ್ತಾನ್ ನಲ್ಲಿ ನಡೆದಿದೆ. ಅಲ್ಲಿನ ಆರೋಗ್ಯ ಸಚಿವಾಲಯ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.
ಉಜ್ಬೇಕಿಸ್ತಾನ್ ಆರೋಪದ ಬೆನ್ನಲ್ಲೆ ಇತ್ತ ಭಾರತದ ತನಿಖೆ ಕೈಗೊಳ್ಳಲು ಸಿದ್ಧವಾಗಿದೆ. ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ, ಸಾವನ್ನಪ್ಪಿದ ಮಕ್ಕಳು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಡಾಕ್ -1 ಮ್ಯಾಕ್ಸ್ ಕೆಮ್ಮಿನ ಸಿರಪ್ ಸೇವಿಸಿದ್ದಾರೆ. ಮಕ್ಕಳು ಕುಡಿದ ಸಿರಪ್‌ಗಳ ಬ್ಯಾಚ್‌ನ ಪ್ರಯೋಗಾಲಯ ಪರೀಕ್ಷೆಗಳಲ್ಲಿ ವಿಷಕಾರಿ ವಸ್ತು ಇರುವುದು ದೃಢವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಕ್ಕಳಿಗೆ ಪೋಷಕರು ಇಲ್ಲವೇ ಔಷಧಿ ಮಳಿಗೆದಾರರ ಸಲಹೆಯ ಮೇರೆಗೆ ಸಿರಪ್ ಅನ್ನು ಮಕ್ಕಳಿಗೆ ಅಳತೆ ಮೀರಿ ಅಂದರೆ ಹೆಚ್ಚು ಡೋಸ್ ನೀಡಿದ್ದರಿಂದ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗುವ ಮೊದಲು, ಮಕ್ಕಳು ಈ ಸಿರಪ್ ಅನ್ನು 2-7 ದಿನಗಳವರೆಗೆ ಮನೆಯಲ್ಲಿ 2.5 ರಿಂದ 5 ಮಿಲಿ ಪ್ರಮಾಣದಲ್ಲಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ತೆಗೆದುಕೊಂಡಿರುವುದು ಗೊತ್ತಾಗಿದೆ. ಹೆಚ್ಚಿನ ಡೋಸ್ ಪಡೆದರೆ ಮೂರ್ಛೆ, ಸೆಳೆತ, ಹೃದಯ ರಕ್ತನಾಳದ ಸಮಸ್ಯೆ, ಮೂತ್ರ ಪಿಂಡವೈಫಲ್ಯದಂತೆ ಸಮಸ್ಯೆ ಎದುರಾಗುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಸಿರಪ್ ಕುಡಿತದಿಂದ 18 ಮಕ್ಕಳ ಸಾವಿಗೀಡಾದ ಬೆನ್ನಲ್ಲೆ ದೇಶದ ಎಲ್ಲ ಔಷಧಾಲಯಗಳಿಂದ ಡಾಕ್ -1 ಮ್ಯಾಕ್ಸ್ ಮಾತ್ರೆಗಳು ಮತ್ತು ಸಿರಪ್‌ಗಳನ್ನು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಹಿಂಪಡೆದಿದೆ. ಈ ಪರಿಸ್ಥಿತಿಗೆ ಕಾರಣವಾದ ಏಳು ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.
ಮರಿಯನ್ ಬಯೋಟೆಕ್ ಸಂಸ್ಥೆ ವಿವರಣೆ ಹೀಗಿದೆ
ಮರಿಯನ್ ಬಯೋಟೆಕ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ, ಕೆಮ್ಮು, ಕಟ್ಟಿದ ಮೂಗು, ಗಂಟಲು ನೋವು, ಸೈನುಟಿಸ್, ತಲೆನೋವು, ದೇಹ-ನೋವು ಮತ್ತು ಜ್ವರಕ್ಕೆ ಡಾಕ್-1 ಮ್ಯಾಕ್ಸ್ ಮಾತ್ರೆಗಳನ್ನು ಸೂಚಿಸಲಾಗುತ್ತದೆ. ಜೊತೆಗೆ ಗ್ಲುಕೋಮಾ- ಮೊನೊಅಮೈನ್ ಆಕ್ಸಿಡೇಸ್ ಇನ್ಹಿಬಿಟರ್ ಪಡೆಯುವ ರೋಗಿಗಳು ಮತ್ತು ಯಕೃತ್ತಿನ ಸಮಸ್ಯೆ ಇರುವವರಿಗೆ ಮುಖ್ಯವಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧಿ ತೆಗೆದುಕೊಳ್ಳುವಂತೆ ಸೂಚಿಸುವದಿಲ್ಲ ಎಂದು ತಿಳಿಸಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಉತ್ತರ ಪ್ರದೇಶ ಡ್ರಗ್ಸ್ ಕಂಟ್ರೋಲಿಂಗ್ ಮತ್ತು ಲೈಸೆನ್ಸಿಂಗ್ ಅಥಾರಿಟಿಯ ಅಧಿಕಾರಿಗಳು ಔಷಧಿ ತಯಾರಿಕೆ ಘಟಗಳು ಪರಿಶೀಲನೆ, ಪ್ರಕರಣದ ವಿಚಾರಣೆ ನಡೆಸಲಿವೆ.

ಮರಿಯನ್ ಬಯೋಟೆಕ್‌ನ ನೋಯ್ಡಾ ಉತ್ಪಾದನಾ ಘಟಕದಿಂದ ಡಾಕ್ 1-ಮ್ಯಾಕ್ಸ್ ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಅವರು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಗೆ (WHO) ಗೆ ಪ್ರತಿಕ್ರಿಯಿಸಿದ ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೋಮಾನಿ ಅವರು, ಸರ್ಕಾರಿ ಪ್ರಯೋಗಾಲಯಗಳಲ್ಲಿ ಮೇಡನ್ ಉತ್ಪನ್ನಗಳ ಮಾದರಿಗಳ ಪರೀಕ್ಷೆಗಳು ನಡೆದಿದ್ದು, ಅವುಗಳಲ್ಲಿ ಯಾವುದೇ ವಿಷಕಾರಿ ವಸ್ತು ಪತ್ತೆಯಾಗಿಲ್ಲ ಎಂದಿದ್ದಾರೆ. ಸದ್ಯ ಉಜ್ಬೇಕಿಸ್ತಾನ್ ಮಕ್ಕಳ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ.












Click it and Unblock the Notifications