ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ತಿಂಗಳು 1 ಲಕ್ಷ ಭಾರತೀಯರಿಗೆ ಅಮೆರಿಕ ವೀಸಾ: ಪ್ರಕ್ರಿಯೆಯಲ್ಲಿ ಬದಲಾವಣೆ?

|
Google Oneindia Kannada News

ವೀಸಾ ನೀತಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಹಲವು ವಿವಾದಗಳು ಹುಟ್ಟಿಕೊಂಡಿದ್ದವು. ಆದರೆ ಅಮೆರಿಕ ಈಗ ಭಾರತೀಯರ ವೀಸಾ ಒದಗಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ. ವೀಸಾ ವಿವಾದಗಳ ನಡುವೆ ಇದೀಗ ಅಮೆರಿಕ ಭಾರತೀಯರಿಗೆ ವೀಸಾ ಸೌಲಭ್ಯಕ್ಕಾಗಿ ಮೊದಲ ಆದ್ಯತೆ ಎಂದು ಹೇಳಿಕೆ ನೀಡಿದೆ.

ಕೋವಿಡ್ ಯುಗದ ಮೊದಲು ವೀಸಾಗಳನ್ನು ನೀಡುವ ನೀತಿಯನ್ನು ಸರಳ ಸ್ಥಿತಿಗೆ ತರಲು ಬಯಸುವುದಾಗಿ ಅಮೆರಿಕ ಹೇಳಿದೆ. ಈಗ ಭಾರತದಿಂದ ಯಾರು ಅಮೆರಿಕದಲ್ಲಿ ವೀಸಾಗೆ ಮೊದಲು ಅರ್ಜಿ ಸಲ್ಲಿಸುತ್ತಾರೆ ಅವರಿಗೆ ಅಮೆರಿಕದ ವೀಸಾ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ಸಿಗಲಿದೆ. ಇದರಿಂದ ಭಾರತಕ್ಕೆ ದೊಡ್ಡ ವ್ಯವಹಾರವಾಗಿದೆ ಏಕೆಂದರೆ ಕಳೆದ ಕೆಲವು ವರ್ಷಗಳಿಂದ ವೀಸಾ ಸಮಸ್ಯೆಗಳು ಭಾರತಕ್ಕೆ ಭಾರಿ ತಲೆನೋವು ಎಂಬಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಾಷಿಂಗ್ಟನ್‌ಗೆ (ವೀಸಾ ನೀಡಿಕೆಗೆ) ಭಾರತವು ಮೊದಲ ಆದ್ಯತೆಯಾಗಿದೆ ಎಂದು ಯುಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೋವಿಡ್‌ ಸಂಬಂಧಿತ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಿದ ನಂತರವೇ ಯುಎಸ್ ವೀಸಾಗಳಿಗಾಗಿ ಅರ್ಜಿಗಳಲ್ಲಿ ಭಾರಿ ಜಿಗಿತವನ್ನು ಕಂಡ ಕೆಲವೇ ಕೇಲವು ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ತಿಳಿಸಿದ್ದಾರೆ.

 ವೀಸಾ

ವೀಸಾ "ಡ್ರಾಪ್ ಬಾಕ್ಸ್" ಸೌಲಭ್ಯ ವಿಸ್ತರಣೆ

ವೀಸಾಗಳಿಗಾಗಿ ದೀರ್ಘ ಕಾಯುವ ಸಮಯವನ್ನು ಪರಿಹರಿಸಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಮತ್ತು "ಡ್ರಾಪ್ ಬಾಕ್ಸ್" ಸೌಲಭ್ಯಗಳನ್ನು ವಿಸ್ತರಿಸುವುದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಯುಎಸ್ ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿ ಹೇಳಿದರು. ಪ್ರತಿ ತಿಂಗಳು ಸುಮಾರು ಒಂದು ಲಕ್ಷ ವೀಸಾ ನೀಡುವ ಯೋಜನೆ ಇದೆ. ಭಾರತೀಯರಿಗೆ H (H1B) ಮತ್ತು L ವರ್ಗದ ವೀಸಾಗಳನ್ನು ತನ್ನ ಆದ್ಯತೆಯಾಗಿ ಅಮೆರಿಕ ಈಗಾಗಲೇ ಗುರುತಿಸಿದೆ ಮತ್ತು ವೀಸಾಗಳನ್ನು ನವೀಕರಿಸಲು ಬಯಸುವವರಿಗೆ ಸುಮಾರು 100,000 ಸ್ಲಾಟ್‌ಗಳನ್ನು ಇತ್ತೀಚೆಗೆ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು.

 ವೀಸಾ ಕಾಯುವಿಕೆಗಳು 9 ತಿಂಗಳು

ವೀಸಾ ಕಾಯುವಿಕೆಗಳು 9 ತಿಂಗಳು

ಮಾಹಿತಿಯ ಪ್ರಕಾರ, ಕೆಲವು ವರ್ಗಗಳಿಗೆ ಕಾಯುವ ಸಮಯವನ್ನು ಹಿಂದಿನ 450 ದಿನಗಳಿಂದ ಸುಮಾರು ಒಂಬತ್ತು ತಿಂಗಳಿಗೆ ಕಡಿಮೆ ಮಾಡಲಾಗಿದೆ. ಬಿ1, ಬಿ2 (ವ್ಯಾಪಾರ ಮತ್ತು ಪ್ರವಾಸೋದ್ಯಮ) ವೀಸಾಗಳಿಗಾಗಿ ಕಾಯುವ ಸಮಯವನ್ನು ಸಹ ಸುಮಾರು ಒಂಬತ್ತು ತಿಂಗಳಿಗೆ ಕಡಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಯುಎಸ್ ನೀಡುತ್ತಿರುವ ವೀಸಾಗಳ ಸಂಖ್ಯೆಯಲ್ಲಿ ಭಾರತವು ಪ್ರಸ್ತುತ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಚಲಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿ ಹೇಳಿದರು.

 ಪ್ರತಿ ತಿಂಗಳು 1 ಲಕ್ಷ ಭಾರತೀಯರಿಗೆ ವೀಸಾ

ಪ್ರತಿ ತಿಂಗಳು 1 ಲಕ್ಷ ಭಾರತೀಯರಿಗೆ ವೀಸಾ

ಅಮೆರಿಕವೇ ಪ್ರತಿ ತಿಂಗಳು 1 ಲಕ್ಷ ಭಾರತೀಯ ಅರ್ಜಿದಾರರಿಗೆ ವೀಸಾ ನೀಡಲು ಸಿದ್ಧತೆ ನಡೆಸಿದೆ. ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತಂತೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷದ ಆಗಸ್ಟ್ ವೇಳೆಗೆ ಯುಎಸ್ ವೀಸಾಗಳಿಗಾಗಿ ಸುಮಾರು 1.2 ಮಿಲಿಯನ್ ಹೊಸ ಭಾರತೀಯ ಅರ್ಜಿದಾರರು ಇರುತ್ತಾರೆ ಎಂದು ಈ ಹಿರಿಯ ಅಧಿಕಾರಿ ಹೇಳಿದ್ದಾರೆ, ಆಗಸ್ಟ್ ತಿಂಗಳೊಳಗೆ ಪ್ರತಿ ತಿಂಗಳು 1 ಲಕ್ಷ ವೀಸಾಗಳನ್ನು ಒದಗಿಸುತ್ತಾರೆ.

 ಭಾರತೀಯ ಅರ್ಜಿದಾರರು ಮೊದಲ ಆದ್ಯತೆ

ಭಾರತೀಯ ಅರ್ಜಿದಾರರು ಮೊದಲ ಆದ್ಯತೆ

ಈ ಕುರಿತು ಹೇಳಿಕೆ ನೀಡಿರುವ ಅಮೆರಿಕ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಭಾರತೀಯ ಅರ್ಜಿದಾರರು ವೀಸಾ ವಿತರಣೆಗೆ ಅಮೆರಿಕದ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಮಧ್ಯದ ವೇಳೆಗೆ ಸರಳ ಪರಿಸ್ಥಿತಿಗೆ ಯುಎಸ್ ತಲುಪಬಹುದು ಎಂದು ಈ ಅಧಿಕಾರಿ ಹೇಳಿದರು.

ಪ್ರಸ್ತುತ, ಹೆಚ್ಚಿನ ಅಮೆರಿಕದ ವೀಸಾ ಅರ್ಜಿದಾರರ ಪಟ್ಟಿಯಲ್ಲಿ ಭಾರತವು ಮೆಕ್ಸಿಕೋ ಮತ್ತು ಚೀನಾದ ನಂತರ ಮೂರನೇ ಸ್ಥಾನದಲ್ಲಿದೆ. ಆದರೆ ಶೀಘ್ರದಲ್ಲೇ ಭಾರತ ಈ ಪಟ್ಟಿಯಲ್ಲಿ ಚೀನಾವನ್ನು ಬಿಟ್ಟು ಎರಡನೇ ಸ್ಥಾನಕ್ಕೆ ಏರಿಕೆ ಕಾಣಲಿದೆ ಈಗಾಗಲೇ ಭಾರತಕ್ಕೆ ಹೆಚ್ಚಿನ ವೀಸಾ ನೀಡಲು ಅಮೆರಿಕ ಮೊದಲ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Major changes are going to be made in the visa issuance process for Indians. Amidst the visa controversies, America has now stated that it is the first priority for visa facilities for Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X