Russia & Ukraine: ಕದನ ವಿರಾಮ ಒಪ್ಪಿಕೊಳ್ಳಿ, ರಷ್ಯಾ ಮೇಲೆ ಒತ್ತಡ ಹೆಚ್ಚಿಸಿದ ಟ್ರಂಪ್!
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಮಧ್ಯ ಸಿಲುಕಿ ನರಳಿ ಹೋಗಿರುವ ಅಮೆರಿಕದ ಪಾಡು ಈಗ ಯಾರಿಗೂ ಬೇಡವಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಈ ಯುದ್ಧ ನಿಲ್ಲಿಸುವ ಭರವಸೆ ನೀಡಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು 2 ತಿಂಗಳು ಕಳೆಯುತ್ತಿದ್ದರೂ ಯುದ್ಧ ನಿಲ್ಲುತ್ತಿಲ್ಲ. ಯುದ್ಧ ನಿಲ್ಲುವ ಲಕ್ಷಣ ಕೂಡ ಕಾಣಿಸುತ್ತಿಲ್ಲ. ಇಂತಹ ಸಮಯದಲ್ಲೇ, ಕದನ ವಿರಾಮ ಒಪ್ಪಿಕೊಳ್ಳಲು ರಷ್ಯಾ ಮೇಲೆ ಒತ್ತಡ ಹೆಚ್ಚಿಸಿದ ಟ್ರಂಪ್ ಆಡಳಿತ ಏನು ಮಾಡುತ್ತಿದೆ ಗೊತ್ತಾ?
ರಷ್ಯಾ & ಉಕ್ರೇನ್ ಪರಸ್ಪರ ಬಡಿದಾಡಿಕೊಂಡು ಸಾಯುವ ಜೊತೆಗೆ ಜಗತ್ತಿನ ಆರ್ಥಿಕತೆಯನ್ನು ಕೂಡ ಹಳ್ಳಕ್ಕೆ ತಳ್ಳಿವೆ ಎಂಬ ಆರೋಪ ಇದೆ. ಅದರಲ್ಲೂ ಯುರೋಪ್ & ಅಮೆರಿಕದಲ್ಲಿನ ಈಗಿನ ಅಲ್ಲೋಲ ಕಲ್ಲೋಲಕ್ಕೆ ಇದೇ ರಷ್ಯಾ & ಉಕ್ರೇನ್ ಯುದ್ಧ ಕಾರಣವಾಗಿದೆ. ಇಂತಹ ಭಾರಿ ಸಂಕಷ್ಟದ ಸಮಯದಲ್ಲಿ ಯುದ್ಧ ನಿಲ್ಲಿಸಲೇಬೇಕು ಎಂಬ ಒತ್ತಡಕ್ಕೆ ಸಿಲುಕಿದೆ ಅಮೆರಿಕದ & ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಈ ಬಗ್ಗೆ ಸಭೆಗಳನ್ನು ನಡೆಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ.

ಉಕ್ರೇನ್ ಸೊಕ್ಕು ಕಡಿಮೆ ಆಗಲ್ವಾ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕು ಎಂದರೆ ಮೊದಲಿಗೆ ಉಕ್ರೇನ್ ತಗ್ಗಿಬಗ್ಗಿ ನಡೆಯಬೇಕು ಎಂಬುದು ರಷ್ಯಾ ಒತ್ತಾಸೆಯಾಗಿದೆ. ಆದರೆ ಇದಕ್ಕೆ ಕೇರ್ ಮಾಡದ ಉಕ್ರೇನ್ ಅಧ್ಯಕ್ಷನಿಂದ ದಿನಕ್ಕೊಂದು ರಷ್ಯಾ ವಿರೋಧಿ ಹೇಳಿಕೆ ಹೊರಗೆ ಬರುತ್ತಿದೆ. ಇದು ಕೂಡ ಭಾರಿ ದೊಡ್ಡದಾದ ಸಂಚಲನಕ್ಕೆ ಇದೀಗ ಕಾರಣವಾಗಿದ್ದು, ಯುದ್ಧ ಮುಂದುವರಿಸಲು ಕಾರಣವಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಇನ್ನೂ ಘೋರ & ಭಯಾನಕವಾಗಿ ಇರುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications