USA Military: ನಮ್ಮ ತಂಟೆಗೆ ಬಂದ್ರೆ ಚನ್ನಾಗಿರಲ್ಲ ಅಂತು ಇರಾನ್, ಅಮೆರಿಕ ಕಡೆಯಿಂದಲೂ ಖಡಕ್ ವಾರ್ನಿಂಗ್
ಅಮೆರಿಕ ಮತ್ತು ಇರಾನ್ ನಡುವೆ ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋದು ಗೊತ್ತಾಗುತ್ತಲೇ ಇಲ್ಲ. ಯಾಕಂದ್ರೆ ಒಂದು ದಿನ ಇಬ್ಬರೂ ಚನ್ನಾಗಿಯೇ ಮಾತನಾಡುತ್ತಾರೆ, ಇನ್ನೊಂದು ದಿನ ಇಬ್ಬರ ಮಧ್ಯೆ ದೊಡ್ಡ ಕಿರಿಕ್ ಶುರುವಾಗಿರುತ್ತದೆ. ಅಲ್ಲಿ ನೋಡಿದರೆ ಒಮನ್ ನೆಲದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ ನಡೆಯುತ್ತಿದೆ, ಆದರೆ ಇದೇ ಸಮಯದಲ್ಲಿ ದಿಢೀರ್ ಅಂತಾ ಇರಾನ್ & ಅಮೆರಿಕ ಯುದ್ಧದ ಬಗ್ಗೆ ಮಾತನಾಡುವ ಹಂತಕ್ಕೆ ತಲುಪಿವೆ. ಅದರಲ್ಲೂ ನಮ್ಮ ಮೇಲೆ ದಾಳಿ ಮಾಡಿದರೆ ಸರಿ ಇರಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಅಮೆರಿಕ ಸೇನೆ ಇನ್ನಷ್ಟು ಅಲರ್ಟ್ ಆಗಿದೆ.
ಅಮೆರಿಕ ಈಗಾಗಲೇ ತನ್ನ ಬೃಹತ್ ಸೇನೆಯನ್ನು ಇರಾನ್ ಗಡಿಯಲ್ಲಿ ನಿಯೋಜನೆ ಮಾಡಿದ್ದು, ಈ ಭಾಗದಲ್ಲಿ ಯಾವುದೇ ಕ್ಷಣ ಯುದ್ಧ ಶುರುವಾಗುವ ಆತಂಕ ಕಾಡುತ್ತಿದೆ. ಇಬ್ಬರ ನಡುವೆ ಯುದ್ಧವು ಶುರುವಾದರೆ ಅದು ಭವಿಷ್ಯದ ದೃಷ್ಟಿಯಿಂದ ಕೂಡ ತುಂಬಾ ಆತಂಕಕಾರಿ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಪರಮಾಣು ಅಸ್ತ್ರಗಳ ಬಳಕೆ ಮಾಡಿದರೆ ಅದು ಎಲ್ಲವನ್ನೂ ನಾಶ ಮಾಡಿಬಿಡುತ್ತದೆ ಎಂಬ ಆತಂಕ ಕೂಡ ಕಾಡುತ್ತಿದೆ. ಹೀಗಿದ್ದರೂ ಮತ್ತೆ ಎರಡೂ ದೇಶಗಳು ಪರಸ್ಪರರ ಮೇಲೆ ದಾಳಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿ ಜಗತ್ತಿನಲ್ಲಿ ಭಯದ ಬೀಜ ಬಿತ್ತಿವೆ.

ಶಾಂತಿ ಮಾತುಕತೆ ನಡುವೆ ಕಿರಿಕ್!
ಒಮನ್ ನೆಲದಲ್ಲಿ ಈಗಾಗಲೇ ಅಮೆರಿಕ & ಇರಾನ್ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆಯನ್ನ ನಡೆಸಿದ್ದಾರೆ. ಅಲ್ಲದೆ ಈ ಮಾತುಕತೆ ಬಹುತೇಕ ಯಶಸ್ವಿ ಎನ್ನುವ ಹಂತಕ್ಕೂ ಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪರಮಾಣು ಒಪ್ಪಂದ ಏರ್ಪಡುವ ಮುನ್ಸೂಚನೆ ಕೂಡ ಇತ್ತು. ಹೀಗೆ, ಎಲ್ಲವೂ ಸರಿ ಆಗುತ್ತಿದೆ, ಅಮೆರಿಕ & ಇರಾನ್ ನಡುವೆ ಸಂಧಾನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಜಗತ್ತು ಈಗ ಕಾಯುತ್ತಿರುವ ಸಮಯದಲ್ಲೇ ದಿಢೀರ್ ಮತ್ತೊಮ್ಮೆ ಕಿಚ್ಚು ಹೊತ್ತಿಕೊಂಡಿದೆ. ಈಗಿನ ಪರಿಸ್ಥಿತಿಯಲ್ಲಿ ಇಬ್ಬರ ನಡುವೆ ಯುದ್ಧ ಶುರುವಾದರೆ ಅದು ಘೋರ ವಿನಾಶಕ್ಕೆ ದಾರಿ ಮಾಡಿಕೊಡುವ ಆತಂಕ ಕೂಡ ಆವರಿಸಿದೆ.
ಮಧ್ಯಪ್ರಾಚ್ಯದ ದೇಶಗಳಿಗೆ ಆತಂಕ ಶುರು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿ ಸೇನಾ ಕಾರ್ಯಾಚರಣೆ ಕುರಿತು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು. ಇಂತಹ ಸಮಯದಲ್ಲೇ ಇರಾನ್ ಕೂಡ ಪ್ರತಿಕ್ರಿಯೆ ನೀಡಿ, ಇರಾನ್ ನೆಲದ ಮೇಲಿನ ಯಾವುದೇ ದಾಳಿಯು ಜಗತ್ತಿನಾದ್ಯಂತ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದೆ. ಈ ಮೂಲಕ ಅತ್ತ ಅಮೆರಿಕ ಕೂಡ ಯುದ್ಧಕ್ಕೆ ಸಜ್ಜಾಗಿದೆ ಇನ್ನೊಂದು ಕಡೆ ಇರಾನ್ ಕೂಡ ತಾನು ಯುದ್ಧ ಸಿದ್ಧ ಎಂದು ಹೇಳುತ್ತಿದೆ. ಇಬ್ಬರ ನಡುವೆ ತಿಕ್ಕಾಟ ನೋಡಿ ಮಧ್ಯಪ್ರಾಚ್ಯದ ಜನರು ಮಾತ್ರ ನಲುಗಿ ಹೋಗಿದ್ದಾರೆ. ಯಾವ ಕ್ಷಣದಲ್ಲಿ ಯುದ್ಧ ಶುರುವಾಗಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆಯುತ್ತೋ ಎಂಬ ಆತಂಕದಲ್ಲಿವೆ ಮಧ್ಯಪ್ರಾಚ್ಯದ ದೇಶಗಳು.












Click it and Unblock the Notifications