ಇರಾನ್ ಕಡೆಗೆ ನುಗ್ಗಿ ಬಂತು ಮತ್ತೊಂದು ಬೃಹತ್ ನೌಕೆ, ಅಮೆರಿಕ ಮುಂದಿನ ಹೆಜ್ಜೆ ಬಗ್ಗೆ ಭಾರಿ ಕುತೂಹಲ | USA Military
ಅಮೆರಿಕ ತನ್ನ ಸೇನಾ ಬಲವನ್ನು ನೇರವಾಗಿ ಇರಾನ್ ವಿರುದ್ಧ ಪ್ರಯೋಗ ಮಾಡಲು ಸಜ್ಜಾಗಿ ಇದೀಗ ಕಾಯುತ್ತಿದೆ. ಅತ್ತ ಶಾಂತಿ ಮಾತುಕತೆ ಎಡವಟ್ಟಿನ ಬಳಿಕ ತಾನೇ ಮಾಡಿಕೊಂಡ ತಪ್ಪಿಗೆ ಇರಾನ್ ಕೂಡ ಯುದ್ಧ ಭಯದಲ್ಲಿ ನಲುಗುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನೊಂದು ಕಡೆ ಮಧ್ಯಪ್ರಾಚ್ಯ ಭಾಗದಲ್ಲಿ ಪರಮಾಣು ಯುದ್ಧದ ಆತಂಕ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಸಾಗುತ್ತಿದೆ. ಇದು ಸಾಲದ ಎನ್ನುವಂತೆ, ಇದೀಗ ಮತ್ತೊಂದು ಸಂಚಲನ ಸೃಷ್ಟಿಸುವ ಸುದ್ದಿ ಹೊರಬಿದ್ದಿದೆ. ಈಗಾಗಲೇ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಇರಾನ್ ಜಲಗಡಿ ಸಮೀಪವೇ ಇರುವಾಗ ಮತ್ತೊಂದು ಯುದ್ಧ ನೌಕೆಯನ್ನು ಅಮೆರಿಕ ಈಗ ಮಧ್ಯಪ್ರಾಚ್ಯ ಕಡೆಗೆ ಕಳುಹಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಒಂದೇ ದೇಹ ಎರಡು ಜೀವ ಇದ್ದಂತೆ ಎನ್ನಬಹುದು, ಹೀಗಾಗಿ ಇಬ್ಬರೂ ಈಗ ಒಂದಾಗಿ ಮಧ್ಯಪ್ರಾಚ್ಯದ ತಮ್ಮ ಶತ್ರು ಇರಾನ್‌ಗೆ ಒಂದು ಗತಿ ಕಾಣಿಸಲು ಸಜ್ಜಾಗಿದ್ದಾರೆ. ಹಾಗೇ ಇದಕ್ಕೆ ಬೇಕಾದ ಪೂರ್ವಸಿದ್ಧತೆ ಕೂಡ ಈಗ ಸಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ನೇರ ಸೇನಾ ಕಾರ್ಯಾಚರಣೆ ಶುರುವಾಗುವ ಭೀತಿ ಆವರಿಸಿದೆ. ಬೃಹತ್ ಸೈನ್ಯವನ್ನು ಹಾಗೂ ನೌಕೆಗಳನ್ನ ಇದೀಗ ಇರಾನ್ ಗಡಿಗೆ ಕಳಿಸಿದ್ದಾರೆ ಅಮೆರಿಕ ಅಧ್ಯಕ್ಷರು. ಹಾಗೇ ಇಸ್ರೇಲ್ ಕೂಡ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದು, ಮತ್ತೊಂದು ಬಹುದೊಡ್ಡ ವಿಮಾನ ವಾಹಕ ನೌಕೆಯು ಇರಾನ್ ಸಮೀಪಕ್ಕೆ ಈಗ ದಿಢೀರ್ ಎಂಟ್ರಿ ಕೊಟ್ಟು ಮಧ್ಯಪ್ರಾಚ್ಯ ದೇಶಗಳ ಟೆನ್ಷನ್ ಹೆಚ್ಚಿಸಿದೆ.

ತೆಹ್ರಾನ್ ವಿರುದ್ಧ ಅಮೆರಿಕ ತಿಕ್ಕಾಟ
ವಾಷಿಂಗ್ಟನ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಇರಾನ್‌ಗೆ ವಾರ್ನಿಂಗ್ ಕೊಡಲು ಸಜ್ಜಾಗಿದೆ. ಈ ಪೈಕಿ ಅಮೆರಿಕ ಸೇನೆಯ ಬಳಿ ಇರುವ ಜಗತ್ತಿನ ಅತಿದೊಡ್ಡ ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಕೂಡ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈ ನೌಕೆ, ಯುಎಸ್‌ಎಸ್ ಅಬ್ರಹಾಂ ಲಿಂಕನ್ ರೀತಿಯಲ್ಲೇ ಅತ್ಯಂತ ಪ್ರಬಲ ಹಾಗೂ ಹಲವು ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಯುದ್ಧದ ಸಮಯದಲ್ಲಿ ಅಮೆರಿಕ ಸೇನೆಗೆ ದೊಡ್ಡ ಸಹಾಯ ಮಾಡುವ ಸಾಮರ್ಥ್ಯ ಹೊಂದಿದ್ದು, ತೆಹ್ರಾನ್ ವಿರುದ್ಧ ಅಮೆರಿಕದ ತಿಕ್ಕಾಟ ಹೆಚ್ಚಾಗುತ್ತಿರುವ ಸಮಯದಲ್ಲೇ ಈ ರೀತಿಯ ಘಟನೆ ನಡೆದಿದೆ.
ವೆನಿಜುವೆಲಾ ಕಾರ್ಯಾಚರಣೆಗೆ ಬಳಸಿದ್ದ ನೌಕೆ
ಅಂದಹಾಗೆ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ನೌಕೆ ವೆನಿಜುವೆಲಾ ಕಾರ್ಯಾಚರಣೆಗೆ ಬಳಕೆ ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ಹೀಗೆ ಕೆರಿಬಿಯನ್ ಸಮುದ್ರದಲ್ಲಿ ಹವಾ ಇಟ್ಟಿದ್ದ ನೌಕೆಯು ಈಗ ನೇರವಾಗಿ ಮಧ್ಯಪ್ರಾಚ್ಯ ಭಾಗಕ್ಕೆ ಬಂದಿದೆ. ಅಲ್ಲದೆ ಇರಾನ್ ವಿರುದ್ಧ ಅಮೆರಿಕ ದಿಢೀರ್ ಎಂದು ಕಾರ್ಯಾಚರಣೆ ಶುರು ಮಾಡಿದರೆ ಆಗ ಅಮೆರಿಕ & ಮಿತ್ರ ದೇಶಗಳಿಗೆ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ನೌಕೆ ಸಾಕಷ್ಟು ದೊಡ್ಡ ಸಹಾಯ ಮಾಡುವ ನಿರೀಕ್ಷೆ ಇದೆ. ಆದರೆ ಈವರೆಗೂ ಅಮೆರಿಕ ಈ ನೌಕೆಯನ್ನು ಮಧ್ಯಪ್ರಾಚ್ಯಕ್ಕೆ ಏಕೆ ಕಳುಹಿಸಿದ್ದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೀಗಾಗಿ, ಇರಾನ್ ಕೂಡ ಇಂತಹ ಬೆಳವಣಿಗೆ ನಂತರ ಇನ್ನಷ್ಟು ಬೆಚ್ಚುವಂತಾಗಿದೆ.












Click it and Unblock the Notifications