ಅಂಟಾರ್ಟಿಕಾಗಿಂತ ಅಮೆರಿಕ ಚಳಿ ಚಳಿ ಸಿವಾ!
ವಾಷಿಂಗ್ಟನ್, ಜ.8 : ಇಂಥದ್ದೊಂದು ಪರಿಸ್ಥಿತಿ ಬರುತ್ತದೆ ಎಂದು ಮುಂಚಿತವಾಗಿ ಗೊತ್ತಾದರೂ ಪ್ರಕೃತಿ ಮುಂದೆ ಎಲ್ಲವೂ ಗೌಣ. ಕಳೆದು ಎರಡು ದಶಕಗಳಲ್ಲಿ ದಾಖಲಾಗಿರುವ ಅತಿ ಕಡಿಮೆ ತಾಪಮಾನಕ್ಕೆ ಅಮೆರಿಕದ ಜನತೆ ಅಕ್ಷರಶಃ ನಡುಗಿ ಹೋಗಿದ್ದಾರೆ. ಅಂಟಾರ್ಟಿಕಾಗಿಂತ ಅಮೆರಿಕದಲ್ಲಿ ಈಗ ಚಳಿ ತತ್ತರಿಸುವಂತೆ ಮಾಡಿದೆ. ಇಲ್ಲಿವರೆವಿಗೂ ಸುಮಾರು 21ಕ್ಕೂ ಅಧಿಕ ಮಂದಿ ಚಳಿಗೆ ಬಲಿಯಾಗಿದ್ದಾರೆ.
ಉತ್ತರ ಧ್ರುವ ಪ್ರದೇಶದಿಂದ ಕುಳಿರ್ಗಾಳಿ ಪೂರ್ವ ಕರಾವಳಿ ಕಡೆಗೆ ಬೀಸುತ್ತಿದ್ದು, ಟೆಕ್ಸಾಸ್, ಫ್ಲೋರಿಡಾದಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ.ಉತ್ತರ ಮತ್ತು ದಕ್ಷಿಣ ಡಕೋಟ, ಮಿನಸೋಟಾ, ಲೋವ, ವಿಸ್ಕಾನ್ ಸಿನ್, ಮಿಶಗನ್ ನಲ್ಲಿ ತಾಪಮಾನ 20ರಿಂದ 40ಡ್ರಿ ಫೆ. (11-22 ಡಿಗ್ರಿ ಸೆಲ್ಸಿಯಸ್) ಗೆ ಇಳಿದಿದ್ದು, ನಿರಾಶ್ರಿತರ ತಂಗುದಾಣ ತುಂಬಿಹೋಗಿದೆ.
ಅಮೆರಿಕದ ಅರ್ಧದಷ್ಟು ನಗರಗಳ ರಸ್ತೆಗಳು ಮುಚ್ಚಿಹೋಗಿದ್ದು, ವಾಹನಗಳ, ಮನೆಗಳ ಮೇಲೆ ಹಿಮರಾಶಿ ಆವರಿಸಿವೆ. ಹೊರಬರಲು ಹೆಣಗಾಡುವಂತಹ ಪರಿಸ್ಥಿತಿ ಕಂಡುಬಂದಿದೆ.
ಸುಮಾರು 2500 ವಿಮಾನಗಳು ಹಾರಾಟ ನಿಲ್ಲಿಸಿವೆ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಮುಂದೇನು? ಎಂಬ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ 44 ವರ್ಷಗಳಲ್ಲಿ ಕಾಣದಂಥ ಚಳಿ ಅಮೆರಿಕದ ಜನತೆಯನ್ನು ತತ್ತರಿಸುವಂತೆ ಮಾಡಿದೆ. ಕೆನಡಾ ಗಡಿ ಭಾಗದಲ್ಲಿ ತಾಪಮಾನ ಕನಿಷ್ಠ -52 ಡಿಗ್ರಿ ಸೆ.ಗೆ ಇಳಿಯುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದಕ್ಕೆಲ್ಲ ಕಾರಣ 'ಪೋಲಾರ್ ವರ್ಟೆಕ್ಸ್': ಅಕ್ಷರಶಃ ಅತ್ತಿಂದ ಇತ್ತ ಓಡಾಡುವ ಓಲಾಡುವ ಕುಡುಕರಂತೆ ಬೀಸುವ ಈ ಪ್ರಬಲ ಕುಳಿರ್ಗಾಳಿ ಉತ್ತರ ಧ್ರುವ ಪ್ರದೇಶದಲ್ಲಿನ ಚಂಡಮಾರುತವಾಗಿದೆ. ಪೋಲಾರ್ ವರ್ಟೆಕ್ಸ್ ಪ್ರಭಾವ ಸಾಮಾನ್ಯವಾಗಿ 1,000-2000 ಕಿ.ಮೀಟರ್ ವರೆಗೆ ವ್ಯಾಪ್ತಿಸುತ್ತದೆ. ಸುಂಟರಗಾಳಿಯಂತೆ ಬೀಸುವ ಬಲವಾದ ಮಾರುತ ದ್ರುವ ಪ್ರದೇಶದ ಶೀತಗಾಳಿಯೊಂದಿಗೆ ಅಡ್ಡವಾಗಿ ಸಾಗುತ್ತದೆ.
ಮಂಗಳಗ್ರಹಕ್ಕಿಂತಲೂ ಶೀತದ ವಾತಾವರಣ, ಅಲಾಸ್ಕಾ, ಅಂಟಾರ್ಟಿಕಾ ವಾತಾವರಣಕ್ಕೆ ಅಮೆರಿಕದ ವಾತಾವರಣವನ್ನು ಹೋಲಿಸಲಾಗುತ್ತಿದೆ. ಇತ್ತ ಸ್ವಿಟ್ಜರ್ಲೆಂಡ್, ಬ್ರಿಟನ್ನಿನಲ್ಲೂ ಪ್ರಬಲ ಚಳಿ ಮಾರುತ ಬೀಸುತ್ತಿದೆ. ಉತ್ತರ ಭಾರತದ ಕೆಲವು ಭಾಗ, ಜಮ್ಮು ಮತ್ತು ಕಾಶ್ಮೀರದಲ್ಲೂ ಪರಿಸ್ಥಿತಿ ಚಳಿ ಚಳಿ.. [ಬೆಚ್ಚಿಬೀಳಿಸಿದ ಕುಳಿರ್ಗಾಳಿ ಗ್ಯಾಲರಿ]

ಜನ ಜೀವನಕ್ಕೆ ಸವಾಲಾದ ಕುಳಿರ್ಗಾಳಿ
ಪ್ರಸ್ತುತ ಕುಡಿಯುವ ನೀರು ಕೂಡ ಪೈಪ್‌ಗಳಲ್ಲಿ ಮಂಜುಗಡ್ಡೆಗಳಾಗಿ ಪರಿವರ್ತನೆಯಾಗಿದೆ. ವಿಮಾನಗಳ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಶಾಲೆ, ಸರ್ಕಾರಿ ಕಚೇರಿಗಳು ಬಂದಾಗಿದ್ದು, ಸಾರ್ವಜನಿಕರು ಮನೆಗಳಿಂದ ಹೊರಗೆ ಬಾರದಂತೆ ಎಚ್ಚರಿಸಲಾಗಿದೆ. ರೈಲು ಸಂಪರ್ಕ, ರಸ್ತೆ ಸಂಪರ್ಕಗಳನ್ನು ಪರಿಸ್ಥಿತಿ ನೋಡಿಕೊಂಡು ನಿಭಾಯಿಸಲಾಗುತ್ತಿದೆ ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ.

ಸ್ಟೇನ್ ಲೆಸ್ ಸ್ಟೀಲ್ ಕ್ಲೌಡ್ ಶುಭ್ರತೆ
ಕೆನಡಾದ ಪ್ರಮುಖ ನಗರಗಳಲ್ಲಿ ಮೈನಸ್ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ನದಿಗಳೆಲ್ಲಾ ಹಿಮದಿಂದ ಹೆಪ್ಪುಗಟ್ಟಿವೆ. ಕಳೆದೆರಡು ದಿನಗಳಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಚಿಕಾಗೋ ಹಾಗೂ ಡೆಟ್ರಾಯಿಟ್ ಗಳಲ್ಲಿ ಪ್ರವಾಸಿಗರು ಬಸ್ ಹಾಗೂ ರೈಲಿನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರ : ಶಿಕಾಗೋದಲ್ಲಿ : ಅನ್ನಿಸ್ ಕಪೂರ್ ಸ್ಟೇನ್ ಲೆಸ್ ಸ್ಟೀಲ್ ಕ್ಲೌಡ್ ಶುಭ್ರತೆ
ನ್ಯೂಯಾರ್ಕಿನಲ್ಲಿ ಜನ ಜೀವನಕ್ಕೆ ಸವಾಲಾದ ಕುಳಿರ್ಗಾಳಿ
ನ್ಯೂಯಾರ್ಕಿನ ಮೇಯರ್ ಬಿಲ್ ಡಿ ಬ್ಲಾಸಿಯೋ ಮಂಜುಗೆಡ್ಡೆ ಸರಿಸಿ ರಸ್ತೆ ಸರಿಪಡಿಸುತ್ತಿದ್ದಾರೆ

ಯಾವ ನಗರ ಎಷ್ಟು ಥಂಡಿ ಇದೆ?
ನ್ಯೂಯಾರ್ಕ್ (-12), ಬೋಸ್ಟನ್(-8), ಬರ್ಮಿಂಗ್ ಹ್ಯಾಮ್ ,ಅಲಾಬಾಮಾ(-14)(1970 ರಲ್ಲಿ -11.7 ಇಲ್ಲಿ ತನಕದ ದಾಖಲೆಯಾಗಿತ್ತು) ಅಟ್ಲಾಂಟಾ (-14.5), ನ್ಯಾಶ್ ವಿಲ್ಲೆ, ಟೆನ್ನಿಸಿ (-16.7), ಲಿಟಲ್ ರಾಕ್, ಅರ್ಕಾನ್ಸಾಸ್ (-13), ವಾಷಿಂಗ್ಟನ್(-17), ಶಿಕಾಗೋ (-24), ಸೈಂಟ್ ಲೂಯಿಸ್ (-25.5)
ಇಂಡಿಯಾನಾ, ಲೋವಾ, ಮೇರಿಲ್ಯಾಂಡ್, ನೆಬ್ರಸ್ಕಾ, ಮಿಚಿಗನ್, ಸೌತ್ ದಕೋಟಾ, ವರ್ಜಿನಿಯಾ, ಸೌತ್ ವರ್ಜಿನಿಯಾ, ಮಿನ್ನೆಸೋಟಾದಲ್ಲೂ ಪರಿಸ್ಥಿತಿ ಮೇಲಿನಂತೆ ಇದೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ
ಶಿಕಾಗೋದಲ್ಲಿನ ಚಳಿ ಬಗ್ಗೆ ಒಂದು ವಿಡಿಯೋ
ನೀರಿನ ಬಾಟಲ್ ಹೇಗೆ ಮಂಜುಗಡ್ಡೆಯಂತೆ ಗಟ್ಟೀಯಾಗುತ್ತದೆ ಎಂಬದನ್ನು ನೋಡಬಹುದಾಗಿದೆ.

ಉತ್ತರ ಭಾರತದಲ್ಲೂ ಶೀತಗಾಳಿ
ಬೆಂಗಳೂರು, ಬಿಲಾಸ್ ಪುರ್, ಭುವನೇಶ್ವರ, ಹೌರ, ಗುವಾಹಟಿ , ಪಟನಾ ಸೇರಿದಂತೆ ದಿಲ್ಲಿಗೆ ಕಡೆಗೆ ಪ್ರಯಾಣ ಬೆಳೆಸಿರುವ ಬಹುತೇಕ ಎಲ್ಲ ರಾಜಧಾನಿ ಎಕ್ಸ್‌ಪ್ರೆಸ್‌ಗಳು ವಿಳಂಬವಾಗಿ ಸಂಚರಿಸಿವೆ. ಉತ್ತರ ಭಾರತದ ಬಹುತೇಕ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಬೀಡುಬಿಟ್ಟಿದ್ದಾರೆ.

ಬ್ರಿಟನ್ ಸ್ವಿಟ್ಜರ್ಲೆಂಡ್ ನಲ್ಲಿ ಚಂಡಮಾರುತ
ಬ್ರಿಟನ್ನಿನಲ್ಲಿ ಹಲವೆಡೆ ಗಂಟೆಗೆ 113 ಕಿ.ಮೀ.ವೇಗದಲ್ಲಿ ಪ್ರಬಲ ಗಾಳಿ ಬೀಸುತ್ತಿದೆ. ವೇಲ್ಸ್, ನೈಋತ್ಯ ಇಂಗ್ಲೆಂಡ್ ಹಾಗೂ ಉತ್ತರ ಐರ್ಲೆಂಡ್ ನಲ್ಲಿ ಪ್ರಬಲ ಚಂಡಮಾರುತ ಬೀಸಿದ್ದು, ಭೀಕರ ಚಂಡಮಾರುತಕ್ಕೆ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
ಚಿತ್ರದಲ್ಲಿ : ಸ್ವಿಟ್ಜರ್ಲೆಂಡ್ ನ Disentisನ ರೈಲು ನಿಲ್ದಾಣ

ಕಾಶ್ಮೀರದ ಬಸ್ ಟರ್ಮಿನಲ್
ಜಮ್ಮು ಮತ್ತು ಕಾಶ್ಮೀರದ ಬಸ್ ಟರ್ಮಿನಲ್ ನಲ್ಲಿ ಚಳಿ ಕಾಯಿಸುತ್ತಿರುವ ಪ್ರಯಾಣಿಕರು

ಕಾಶ್ಮೀರದಲ್ಲೂ ಕ್ರಿಕೆಟ್ ಹುಚ್ಚು
ಪಹಲ್ ಗಾಮ್ : ಕಾಶ್ಮೀರದ ಗ್ರಾಮೀಣ ಭಾಗದ ಹುಡುಗರು ಹಿಮದಿಂದ ಆವೃತವಾದ ರಸ್ತೆಗಳ ಮೇಲೆ 'ಕೋಲ್ಡ್ ಕ್ರಿಕೆಟ್' ಆಡುತ್ತಿದ್ದಾರೆ.

ಗಡಿ ಭಾಗದ ಯೋಧರನ್ನು ಕಾಡುತ್ತಿದೆ
ಕಾಶ್ಮೀರದ ಗಡಿಭಾಗದ ಯೋಧರು ಚಳಿ ಲೆಕ್ಕಿಸದೆ ಪಹರೆ ಕಾಯುತ್ತಿದ್ದು, ಬಿಡುವಿನ ವೇಳೆಯಲ್ಲಿ ಬೆಂಕಿ ಕಾಯಿಸುತ್ತಿದ್ದಾರೆ.

ನಿತ್ಯ ಜೀವನ ಎಂದಿನಂತೆ ಸಾಗಿದೆ
ಮೈನಸ್ ಡಿಗ್ರಿ ತಾಪಮಾನ ಇದ್ದರೂ ಕಾಶ್ಮೀರಿ ಜನ ಎಂದಿನಂತೆ ದೈನಂದಿನ ಬದುಕು ಸಾಗಿಸುತ್ತಿದ್ದಾರೆ.












Click it and Unblock the Notifications