ಕಳೆದ 24 ಗಂಟೆಗಳಲ್ಲೇ 9,200ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್!

ವಾಶಿಂಗ್ ಟನ್, ಮಾರ್ಚ್.23: ಚೀನಾದಲ್ಲಿ ಹುಟ್ಟಿದರೂ ಕೊರೊನಾ ವೈರಸ್ ಎಂಬ ಮಹಾಮಾರಿ ಬೇರೆ ರಾಷ್ಟ್ರಗಳಲ್ಲೆ ಅತಿಹೆಚ್ಚು ಜನರನ್ನು ಬಲಿ ಪಡೆಯುತ್ತಿದೆ. ಇತ್ತೀಚಿಗಷ್ಟೇ ಸಾವು ಮಂದಿ ಸೋಂಕಿತರ ಸಂಖ್ಯೆಯಲ್ಲಿ ಪುಟ್ಟ ರಾಷ್ಟ್ರ ಇಟಲಿ ಕೂಡಾ ಡ್ರ್ಯಾಗನ್ ರಾಷ್ಟ್ರವನ್ನು ಹಿಂದಿಕ್ಕಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲೂ ಕೂಡಾ ಅಂಥದ್ದೇ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಮಹಾಮಾರಿಗೆ ನಲುಗಿರುವ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲೇ 9,139ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಭಾರತದಲ್ಲೇ 400ರ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರು!
ಇನ್ನು, ಭಾನುವಾರ ಒಂದೇ ದಿನ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 112ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಇದುವರೆಗೂ ಮಾರಕ ರೋಗಕ್ಕೆ ಬಲಿಯಾದವರ ಸಂಖ್ಯೆ 414ಕ್ಕೆ ಏರಿಕೆಯಾಗಿದೆ. ಇನ್ನು, ಸೋಂಕಿತರ ಸಂಖ್ಯೆ 33,346ಕ್ಕೆ ಏರಿಕೆಯಾಗಿದೆ.

USA Break China Record In Coronavirus Spreading Cases

ವಿಶ್ವದಲ್ಲಿ ಕೊರೊನಾ ವೈರಸ್ ಗೆ 14,611 ಮಂದಿ ಬಲಿ:
ಜಾಗತಿಕ ವಲಯದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಗೆ ಇದುವರೆಗೂ 14,611 ಮಂದಿ ಪ್ರಾಣ ಬಿಟ್ಟಿದ್ದು, 3,36,638ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಇನ್ನು, 97,636 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅಚ್ಚರಿಯ ವಿಚಾರ ಎಂದರೆ ಕೊರೊನಾ ವೈರಸ್ ಪಾಲಿನ ಮಾತೃಭೂಮಿ ಎನಿಸಿರುವ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಸೋಂಕಿತ ಪ್ರಕರಣ ಕೂಡಾ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+