Donald Trump: ಚೀನಾ ಮೇಲೆ 104% ಆಮದು ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್

ಯುಎಸ್‌ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್ ಚೀನಾಗೆ ದೊಡ್ಡ ತಿರುಗೇಟು ಕೊಡಲು ಮುಂದಾಗಿದ್ದರೆ. ಎರಡೂ ದೇಶಗಳ ನಡುವೆ ತೆರಿಗೆ ಯುದ್ಧ ತಾರಕಕ್ಕೇರಿದೆ. ಚೀನಾದ ಮೇಲಿನ ಸುಂಕವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಚೀನಾದ ಮೇಲೆ ಸದ್ಯ ಅಮೆರಿಕ 104% ಸುಂಕ ವಿಧಿಸಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಚೀನಾದ ವಸ್ತುಗಳ ಮೇಲೆ 50% ಸುಂಕ ವಿಧಿಸಿದ್ದಕ್ಕೆ ಸಿಟ್ಟಿಗೆದ್ದ ಚೀನಾ ಅಮೆರಿಕ ವಸ್ತುಗಳ ಮೇಳೆ 34% ಆಮದು ಸುಂಕ ವಿಧಿಸಿ ತಿರುಗೇಟು ಕೊಟ್ಟಿತ್ತು. ಇದು ಡೊನಾಲ್ಡ್ ಟ್ರಂಪ್‌ರನ್ನು ಕೆರಳುವಂತೆ ಮಾಡಿದ್ದು ಚೀನಾ ಮೇಲೆ ವಿಧಿಸಿದ್ದ ಆಮದು ಸುಂಕವನ್ನು 50% ರಿಂದ 104% ಕ್ಕೆ ಏರಿಕೆ ಮಾಡಿದ್ದಾರೆ.

us trump raises tariffs on china to 104 percent effective wednesday

ಅಧ್ಯಕ್ಷ ಟ್ರಂಪ್ ಚೀನಾಕ್ಕೆ ಅಮೆರಿಕದ ಸರಕುಗಳ ಮೇಲೆ ವಿಧಿಸಿರುವ 34 ಪ್ರತಿಶತ ಸುಂಕವನ್ನು ಹಿಂದಕ್ಕೆ ಪಡೆಯಲು 24 ಗಂಟೆಗಳ ಕಾಲಾವಕಾಶ ನೀಡಿದ್ದರು, ಇಲ್ಲದಿದ್ದರೆ ಚೀನಾದ ಸರಕುಗಳಿಗೆ 104 ಪ್ರತಿಶತ ಸುಂಕ ವಿಧಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಚೀನಾ ಸರ್ಕಾರ ಟ್ರಂಪ್ ಆದೇಶಕ್ಕೆ ಮಣಿಯದ ಕಾರಣ ಡೊನಾಲ್ಡ್ ಟ್ರಂಪ್ ಸುಂಕ ಏರಿಕೆಯನ್ನು ಘೋಷಿಸಿದರು.

ಕಳೆದ ತಿಂಗಳವರೆಗೆ ಅಮೆರಿಕ ಚೀನಾದ ಮೇಲೆ 10 ಪ್ರತಿಶತ ಸುಂಕ ವಿಧಿಸುತ್ತಿತ್ತು. ಈ ಬ್ಗಗೆ ಮಾತನಾಡಿದ್ದ ಯುಎಸ್ ಅಧ್ಯಕ್ಷ ಟ್ರಂಪ್ ಅಮೆರಿಕದ ಆರ್ಥಿಕತೆಯಿಂದ ಶತಕೋಟಿ ಮತ್ತು ಶತಕೋಟಿ ಡಾಲರ್‌ಗಳನ್ನು ಚೀನಾ ದೋಚಿದೆ ಎಂದರು. ಬಳಿಕ ಪರಸ್ಪರ ಸುಂಕ ಕ್ರಮವನ್ನು ಘೋಷಿಸಿದರು. ಇದರಲ್ಲಿ ಅಮೆರಿಕವು ಇತರ ದೇಶಗಳು ರಾಷ್ಟ್ರವು ಅಮೆರಿಕಕ್ಕೆ ವಿಧಿಸಿದ ಸುಂಕದ ಸರಿಸುಮಾರು ಅರ್ಧದಷ್ಟು ವಿಧಿಸುತ್ತದೆ. ಚೀನಾಕ್ಕೆ ಇದು ಹೆಚ್ಚುವರಿ 34 ಪ್ರತಿಶತವಾಗಿತ್ತು.

ಅಧ್ಯಕ್ಷ ಟ್ರಂಪ್ ಅವರ ಘೋಷಣೆಯ ಕೆಲವೇ ನಿಮಿಷಗಳ ನಂತರ, ಶ್ವೇತಭವನವು ಅಮೆರಿಕವು ಇಡೀ ಜಗತ್ತಿಗೆ ಹೆಚ್ಚುವರಿಯಾಗಿ 10 % ರಷ್ಟು ಪರಸ್ಪರವಲ್ಲದ ಸುಂಕವನ್ನು ವಿಧಿಸಲಿದೆ ಎಂದು ಹೇಳಿದೆ.

ಮಂಗಳವಾರ ಘೋಷಣೆ ಮಾಡಿರುವ ಹೆಚ್ಚುವರಿ ಶೇ. 50 ಸುಂಕವು ಚೀನಾಕ್ಕೆ ಮಾತ್ರ ಅನ್ವಯವಾಗುತ್ತದೆ. ಚೀನಾ ಈಗ ಶೇ. 104 ರಷ್ಟು ತೆರಿಗೆಯನ್ನು ಕಟ್ಟಬೇಕಾಗಿದೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಸುಮಾರು ಶೇ.100 ರಷ್ಟು ಏರಿಕೆಯಾಗಿದೆ. ಆದರೂ ಚೀನಾ ಜೊತೆ ಸಮನ್ವಯ ಸಾಧಿಸಲು ಟ್ರಂಪ್ ಇನ್ನೂ ಅವಕಾಶ ಕೊಟ್ಟಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದು, "ಚೀನಾ ಕೂಡ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ, ಆದರೆ ಅದನ್ನು ಹೇಗೆ ಪ್ರಾರಂಭಿಸಬೇಕೆಂದು ಅವರಿಗೆ ತಿಳಿದಿಲ್ಲ. ನಾವು ಅವರ ಕರೆಗಾಗಿ ಕಾಯುತ್ತಿದ್ದೇವೆ." ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+