ಯುಎಸ್‌ ಮಾರಣಾಂತಿಕ ಕೊಟ್ಟಿಗೆ: ಟೆಕ್ಸಾಸ್‌ನ ಫಾರ್ಮ್‌ನಲ್ಲಿ ಬೆಂಕಿ- 18,000 ಕ್ಕೂ ಹೆಚ್ಚು ಹಸುಗಳು ಸಾವು

ಇತ್ತೀಚೆಗೆ ಅಮೆರಿಕಾದಲ್ಲಿ ಹಸುಗಳ ಕೊಟ್ಟಿಗೆಗಳಲ್ಲಿ ಅಗ್ನಿ ಅವಘಡದಿಂದಾಗಿ ನೂರಾರು ಸಂಖ್ಯೆಯಲ್ಲಿ ಹಸುಗಳು ಸಾವನ್ನಪ್ಪುತ್ತಿರುವುದು ವರದಿಗಳಿಂದ ಬಹಿರಂಗವಾಗಿದೆ. ಮತ್ತೆ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದೆ.

ಟೆಕ್ಸಾಸ್‌ನಲ್ಲಿ ಮಂಗಳವಾರ ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸ್ಫೋಟದಿಂದಾಗಿ ಬೆಂಕಿ ಹೊತ್ತಿ ಉರಿದಿದೆ. ಇದರ ಪರಿಣಾಮ ಕೊಟ್ಟಿಗೆಯಲ್ಲಿದ್ದ 18,000 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಈ ಘಟನೆಯು ಯುಎಸ್‌ನಲ್ಲಿ ದಾಖಲಾದ ಮಾರಣಾಂತಿಕ ಬೆಅಗ್ನಿ ಅವಘಡಗಳ ಪಟ್ಟಿಗೆ ಸೇರುತ್ತದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಜಮೀನಿನ ಮಾಲೀಕತ್ವದ ಹೊಂದಿರುವ ಕುಟುಂಬ ಘಟನೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

US: Texas Farm Fire - Over 18,000 Cows Killed

ಕ್ಯಾಸ್ಟ್ರೋ ಕೌಂಟಿ ಶೆರಿಫ್‌ನ ಕಛೇರಿಯು ಹಂಚಿಕೊಂಡ ಚಿತ್ರಗಳ ಪ್ರಕಾರ ಕಟ್ಟಡದ ಮೇಲೆ ಆಕಾಶದೆತ್ತರಕ್ಕೆ ಜ್ವಾಲೆ ಹರಡಿರುವುದನ್ನು ಕಾಣಬಹುದು. ಅಗ್ನಿಶಾಮಕ ದಳದವರು ಉರಿಯುತ್ತಿರುವ ಕಟ್ಟಡದೊಳಗೆ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ಜಮೀನಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.

ಪ್ರತಿ ವರ್ಷ ನೂರಾರು ಸಾವಿರ ಕೃಷಿ ಪ್ರಾಣಿಗಳನ್ನು ಕೊಲ್ಲುವ ಕೊಟ್ಟಿಗೆಯ ಬೆಂಕಿಯನ್ನು ತಡೆಗಟ್ಟಲು ಫೆಡರಲ್ ಕಾನೂನುಗಳಿಗೆ ಕರೆ ನೀಡಲಾಗಿದೆ. ಹಳೆಯ US ಪ್ರಾಣಿ ಸಂರಕ್ಷಣಾ ಗುಂಪುಗಳಲ್ಲಿ ಒಂದಾದ ಅನಿಮಲ್ ವೆಲ್ಫೇರ್ ಇನ್ಸ್ಟಿಟ್ಯೂಟ್ (AWI) ಅನ್ನು ಕೊಟ್ಟಿಗೆಗಳಲ್ಲಿ ಅಗ್ನ ಅವಘಡಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಹಾಗೂ ಮಾಃಇತಿ ಹರಡಲು ಕರೆ ನೀಡಿದೆ.

ಕೆಲವು US ರಾಜ್ಯಗಳು ಮಾತ್ರ ಅಂತಹ ಕಟ್ಟಡಗಳಿಗೆ ಅಗ್ನಿಶಾಮಕ ಸಂರಕ್ಷಣಾ ಕೋಡ್‌ಗಳನ್ನು ಅಳವಡಿಸಿಕೊಂಡಿವೆ. ಇಂತಹ ಅಗ್ನಿ ಅವಘಡಗಳಿಂದ ಪ್ರಾಣಿಗಳನ್ನು ರಕ್ಷಿಸುವ ಯಾವುದೇ ಫೆಡರಲ್ ನಿಯಮಗಳಿಲ್ಲ ಎಂದು AWI ಅನ್ನು ಉಲ್ಲೇಖಿಸಿ ರಾಯಿಟರ್ಸ್ ಹೇಳಿದೆ.

US: Texas Farm Fire - Over 18,000 Cows Killed

2013ರಲ್ಲಿ AWI ಇಂತಹ ಘಟನೆಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದ ನಂತರ ಕೊಟ್ಟಿಗೆಯಲ್ಲಿನ ಬೆಂಕಿಯಿಂದಾಗಿ ಜಾನುವಾರುಗಳು ಸಾಯುವುದು ಅತ್ಯಂತ ವಿನಾಶಕಾರಿಯಾಗಿದೆ. ಕಳೆದ ದಶಕದಲ್ಲಿ ಸುಮಾರು 6.5 ಮಿಲಿಯನ್ ಕೃಷಿ ಪ್ರಾಣಿಗಳು ಇಂತಹ ಬೆಂಕಿಯಲ್ಲಿ ಸಾವನ್ನಪ್ಪಿವೆ, ಅವುಗಳಲ್ಲಿ ಹೆಚ್ಚಿನವು ಕೋಳಿ ಎಂದು ಹೇಳಲಾಗುತ್ತದೆ.

ಅಮೆರಿಕಾ ಕೊಟ್ಟಿಗೆಯಲ್ಲಿ ಬೆಂಕಿ

ಕ್ಯಾಸ್ಟ್ರೋ ಕೌಂಟಿ ಶೆರಿಫ್ ಕಚೇರಿಯ ಹೇಳಿಕೆಯ ಪ್ರಕಾರ, ಸಾವಿರಾರು ಡೈರಿ ಹಸುಗಳ ಕೊಟ್ಟಿಗೆಯಲ್ಲಿ ಬೆಂಕಿ ವೇಗವಾಗಿ ಹರಡಿದೆ. ಸೌಲಭ್ಯದಲ್ಲಿರುವ ಯಂತ್ರಗಳು ಮೀಥೇನ್ ಅನಿಲವನ್ನು ಹೊತ್ತಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಸ್ಥಳೀಯ ಸುದ್ದಿವಾಹಿನಿ ಕೆಎಫ್‌ಡಿಎಗೆ ಮಾತನಾಡಿದ ಶೆರಿಫ್ ಸಾಲ್ ರಿವೇರಾ, ಹಾಲುಕರೆಯುವ ಪ್ರದೇಶಕ್ಕೆ ಹಸುಗಳನ್ನು ಇರಿಸಿದ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ. ಹೆಚ್ಚಿನ ಜಾನುವಾರುಗಳು ಸಾವನ್ನಪ್ಪಿವೆ ಎಂದು ಹೇಳಿದರು. ಕೆಲವು ಉಳಿದುಕೊಂಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕೆಲವು ಹೆಚ್ಚು ಗಾಯಗೊಂಡಿವೆ, ಅವುಗಳಿಗೆ ಚಿಕಿತ್ಸೆ ನೀಡಲಾಘುತ್ತಿದೆ "ಎಂದು ಶೆರಿಫ್ ರಿವೆರಾ ಹೇಳಿದರು ಎಂದು ಬಿಬಿಸಿ ಉಲ್ಲೇಖಿಸಿದೆ.

US: Texas Farm Fire - Over 18,000 Cows Killed

"ಇದು ಸಾಮಾನ್ಯ ಜ್ಞಾನವಾಗಿದೆ. ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಫಾರ್ಮ್‌ಗಳಿಗೆ ತಿಳಿಸಲಾಗುತ್ತದೆ. ಅದನ್ನು ಬಲವಾಗಿ ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಹಸುಗಳ ಜೀವ ಹಾನಿಯನ್ನು ತಪ್ಪಿಸಿದಂತಾಗುತ್ತದೆ'' ಎಂದು BBC ಗೆ AWI ಯ ಕೃಷಿ ಪ್ರಾಣಿ ಕಾರ್ಯಕ್ರಮದ ನೀತಿ ಸಹವರ್ತಿ ಅಲ್ಲೀ ಗ್ರ್ಯಾಂಗರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+