ಉಕ್ರೇನ್‌ಗೆ ಮತ್ತೊಂದು ಆಘಾತ ನೀಡಿದ ಅಮೆರಿಕ, ಯುದ್ಧದಲ್ಲಿ ಉಕ್ರೇನ್ ಇದೀಗ ಅನಾಥ!
ಯುರೋಪ್ ಸ್ಥಿತಿ ಕೆಂಡದ ಮೇಲೆ ಬಿದ್ದಿರುವ ಹಪ್ಪಳದಂತೆ ಆಗಿದ್ದು, ಯಾವ ಕ್ಷಣದಲ್ಲಿ ಸುಟ್ಟು ಹೋಗುತ್ತೆ ಅಂತಾ ಜನರು ಚಿಂತೆಯಲ್ಲಿ ಮುಳುಗಿದ್ದಾರೆ. ಯಾಕಂದ್ರೆ ರಷ್ಯಾ & ಉಕ್ರೇನ್‌ನ ನಡುವೆ ಶುರುವಾಗಿರುವ ಯುದ್ಧ ದಿನದಿಂದ ದಿನಕ್ಕೆ ದೊಡ್ಡ ತಿರುವು ಪಡೆಯುತ್ತಿದೆ. ಇದರ ಜೊತೆಗೆ ಕಗ್ಗಂಟಾಗಿರುವ ಈ ಯುದ್ಧಕ್ಕೆ ಬ್ರೇಕ್ ಹಾಕಲು ಸಾಧ್ಯವೇ ಆಗುತ್ತಿಲ್ಲ. ಇಷ್ಟೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಉಕ್ರೇನ್‌ಗೆ ನೀಡಿದೆ ಅಮೆರಿಕ.
ರಷ್ಯಾ & ಉಕ್ರೇನ್ ಯುದ್ಧ ಆರಂಭವಾಗಲು ಒಂದು ಲೆಕ್ಕಕ್ಕೆ ಅಮೆರಿಕ ಕಾರಣ ಎಂಬ ಭಾರಿ ಗಂಭೀರ ಆರೋಪ ಇದೆ. ಯಾಕಂದ್ರೆ ಉಕ್ರೇನ್‌ಗೆ 'ನ್ಯಾಟೋ' ಸದಸ್ಯತ್ವ ಕೊಡಿಸಲು ಬೆಂಬಲ ನೀಡಿದ್ದ ಅಮೆರಿಕ, ಹಾಗೇ ಉಕ್ರೇನ್‌ನ ಗಡಿಯನ್ನು ರಷ್ಯಾ ವಿರುದ್ಧ ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರಷ್ಯಾ ಕೂಡ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಸುಮಾರು 3 ವರ್ಷಗಳಿಂದಲೂ ರಷ್ಯಾ & ಉಕ್ರೇನ್ ಬಡಿದಾಡಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಉಕ್ರೇನ್‌ಗೆ ಕೈಕೊಟ್ಟಿರುವ ಅಮೆರಿಕ ಇದೀಗ ಮತ್ತೊಂದು ಶಾಕ್ ನೀಡಿದೆ.

ಉಕ್ರೇನ್‌ಗೆ ನೀಡುತ್ತಿದ್ದ ಗುಪ್ತಚರ ಮಾಹಿತಿ ಬಂದ್!
ಡೊನಾಲ್ಡ್ ಟ್ರಂಪ್ ಸರ್ಕಾರ ಉಕ್ರೇನ್ ವಿರುದ್ಧ ತನ್ನ ನೀತಿಯನ್ನು ದಿನದಿಂದ ದಿನಕ್ಕೆ ಭಾರಿ ಬಿಗಿ ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಉಕ್ರೇನ್‌ಗೆ ನೀಡುತ್ತಿದ್ದ ಹಣದ ನೆರವು ಬಂದ್ ಮಾಡಿದ್ದ ಡೊನಾಲ್ಡ್ ಟ್ರಂಪ್ ಆಡಳಿತ, ಈಗ ಉಕ್ರೇನ್ ಜೊತೆಗೆ ಅಮೆರಿಕ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದಿದೆ. ಇದು ಭಾರಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿ, ಅಮೆರಿಕ ಕೈಗೊಂಡಿರುವ ನಿರ್ಧಾರದ ಬಗ್ಗೆ ಎಲ್ಲಾ ಕಡೆಯೂ ಚರ್ಚೆ ಶುರುವಾಗಿದೆ. ಅದರಲ್ಲೂ ಈ ರೀತಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೈಗೊಂಡಿರುವ ನಿರ್ಧಾರ ಯುರೋಪ್ ದೇಶಗಳಲ್ಲೂ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಅಮೆರಿಕದ ನೆರವು ದಿಢೀರ್ ಸ್ಥಗಿತ
ಉಕ್ರೇನ್‌ಗೆ ಈಗಾಗಲೇ ಸುಮಾರು 350 ಬಿಲಿಯನ್ ಡಾಲರ್ ನೆರವನ್ನ ಅಮೆರಿಕ ನೀಡಿದೆ ಅಂತಾ ಹೇಳಿಕೊಳ್ಳುತ್ತಿದೆ. ಶಸ್ತ್ರಾಸ್ತ್ರಗಳು ಸೇರಿದಂತೆ ಮಾನವೀಯ ನೆರವು ಹೀಗೆ ಹಲವು ರೀತಿಯಲ್ಲಿ ಅಮೆರಿಕ ಸಹಾಯ ಮಾಡಿತ್ತು. ಜೋ ಬೈಡನ್ ಸರ್ಕಾರ ಈ ರೀತಿ ಲಕ್ಷ ಲಕ್ಷ ಕೋಟಿ ರೂಪಾಯಿ ಹಣವನ್ನು ಉಕ್ರೇನ್‌ಗೆ ನೀಡಿತ್ತು. ಇಷ್ಟೆಲ್ಲದರ ನಡುವೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಉಕ್ರೇನ್ ವಿರುದ್ಧ ಗರಂ ಆಗಿದ್ದರು.
ಉಕ್ರೇನ್ ರಾಜಧಾನಿ ರಷ್ಯಾ ವಶಕ್ಕೆ?
ರಷ್ಯಾ ಸೇನೆ ಉಕ್ರೇನ್‌ನ ಹಲವು ಭಾಗಗಳನ್ನು ತನ್ನ ವಶಕ್ಕೆ ಪಡೆಯಲು ಮುಂದಾದ ನಂತರ ಉಕ್ರೇನ್ ಸೇನೆ ತನ್ನ ರಾಜಧಾನಿ ರಕ್ಷಣೆಗೆ ಓಡಿ ಹೋಗಿದೆ. ಈಗ ಉಕ್ರೇನ್ ರಾಜಧಾನಿ ಕೀವ್ ಬಿಟ್ಟರೆ ಉಳಿದ ಭಾಗದಲ್ಲಿ ಉಕ್ರೇನ್ ಸೈನಿಕರು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಪಕ್ಕಾ ಪ್ಲಾನ್ ಮಾಡಿ, ಕೀವ್ ನಗರವನ್ನು ಕೂಡ ಸಂಪೂರ್ಣ ವಶಕ್ಕೆ ಪಡೆಯಲು ಈಗ ರಷ್ಯಾ ಪ್ಲಾನ್ ಮಾಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಉಕ್ರೇನ್ ದೇಶವನ್ನು ರಷ್ಯಾ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಕೂಡ ನಡೆದಿದೆ ಎಂಬ ಮಾತು ಹರಿದಾಡುತ್ತಿದೆ.












Click it and Unblock the Notifications