Russia & Ukraine: ಉಕ್ರೇನ್ ಯುದ್ಧದ ಬೆಂಕಿಗೆ ನೀರು ಹಾಕಲು ಡೊನಾಲ್ಡ್ ಟ್ರಂಪ್ ಕಡೆಯಿಂದ ವಿಶೇಷ ರಾಯಭಾರಿ ಎಂಟ್ರಿ!

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಹಿಂಗೆ ಬಿಟ್ಟರೆ ಇನ್ನೇನು 4ನೇ ವರ್ಷವನ್ನ ಕೂಡ ಮುಗಿಸಿಬಿಡಲಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧವನ್ನು ಘೋಷಣೆ ಮಾಡಿದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಕಳೆದ 3 ವರ್ಷಗಳಿಂದ ಏನಾದರೂ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಹೀಗಿದ್ದಾಗಲೇ, ಉಕ್ರೇನ್ ಯುದ್ಧದ ಬೆಂಕಿಗೆ ನೀರು ಹಾಕಲು ಡೊನಾಲ್ಡ್ ಟ್ರಂಪ್ ಕಡೆಯಿಂದ ವಿಶೇಷ ರಾಯಭಾರಿ ಎಂಟ್ರಿ ಕೊಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ನಂತರ ಹಲವು ಸಮಸ್ಯೆಗಳು ಕಾಡುತ್ತಿದ್ದವು, ಈ ಪೈಕಿ ರಷ್ಯಾ & ಉಕ್ರೇನ್ ಯುದ್ಧ ಕೂಡ ಒಂದಾಗಿತ್ತು. ಹೀಗಾಗಿ ತಾವು ಅಧಿಕಾರಕ್ಕೆ ಬಂದ ಆರಂಭದಲ್ಲೇ ಡೊನಾಲ್ಡ್ ಟ್ರಂಪ್ ಅವರು ಒಂದು ಮಾತು ಕೊಟ್ಟಿದ್ದರು. ರಷ್ಯಾ & ಉಕ್ರೇನ್ ಯುದ್ಧವನ್ನ 24 ಗಂಟೆಯಲ್ಲಿ ನಿಲ್ಲಿಸುವ ಮಾತು ಆಡಿದ್ದರು. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ತಮ್ಮ ಮಾತು ಉಳಿಸಿಕೊಳ್ಳಲು ಆಗುತ್ತಿಲ್ಲ. ಪರಿಸ್ಥಿತಿ ಕೂಡ ಅಷ್ಟೇ ಕಠಿಣವಾಗಿದ್ದು, ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ಆರ್ಥಿಕವಾಗಿ ಕೂಡ ಜಗತ್ತಿಗೆ ಸಮಸ್ಯೆ ಮಾಡುತ್ತಿದೆ. ಹೀಗಾಗಿ ಇದೀಗ ಟ್ರಂಪ್ ಅವರ ಆಪ್ತನೇ ಅಖಾಡ ಪ್ರವೇಶ ಮಾಡಿದ್ದಾರೆ.

US Special Envoy Engages with Putin on Russia-Ukraine Conflict

ಯುದ್ಧ ಪರಿಣಾಮ ನರಳಾಡಿದ ಪ್ರಜೆಗಳು

ರಷ್ಯಾ & ಉಕ್ರೇನ್ ಯುದ್ಧದ ಭೀಕರತೆಗೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣವೂ ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆಯೇ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ನರಳಾಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ರಷ್ಯಾ & ಉಕ್ರೇನ್ ಇನ್ನಷ್ಟು ಅಸ್ತ್ರಗಳನ್ನು ತೆಗೆದುಕೊಂಡಿವೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ.

ರಷ್ಯಾ ನೆಲಕ್ಕೆ ಡೊನಾಲ್ಡ್ ಟ್ರಂಪ್ ಎಂಟ್ರಿ?

ಉಕ್ರೇನ್‌ ಸಂಘರ್ಷದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು, ಸೇಂಟ್ ಪೀಟರ್ಸ್‌ಬರ್ಗ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ಕೂಡ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ವಿಟ್ಕಾಫ್ ಅವರನ್ನು ಸ್ವಾಗತಿಸುತ್ತಿರುವ ವಿಡಿಯೋ ರಷ್ಯಾ ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದಾಗಿ ರಷ್ಯಾಗೆ ಬರುತ್ತಾರಾ? ಎಂಬ ಕುತೂಹಲವು ಕೂಡ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+