Israel: ಇಸ್ರೇಲ್ & ಗಾಜಾ ಯುದ್ಧ ನಿಲ್ಲಿಸಲು ಕೊನೆಯ ಪ್ರಯತ್ನ!
ಇಸ್ರೇಲ್ & ಗಾಜಾ ನಡುವೆ ಭಾರಿ ಘೋರ ಕಾಳಗ ನಡೆಯುವ ಸಮಯದಲ್ಲೇ ಅಮೆರಿಕ ಮಧ್ಯ ಪ್ರವೇಶ ಮಾಡಿದೆ. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ಅಮೆರಿಕದ ವಿರುದ್ಧ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ದಿಢೀರ್ ಇಸ್ರೇಲ್‌ಗೆ ಎಂಟ್ರಿಯನ್ನ ಕೊಟ್ಟಿದ್ದಾರೆ. ಅಲ್ಲದೆ ಗಾಜಾ ಜೊತೆಗಿನ ಯುದ್ಧ ನಿಲ್ಲಿಸಲು ಇದೀಗ ಅಂತಿಮ ಹಂತದಲ್ಲಿ, ಮಹತ್ವದ ಮಾತುಕತೆ ನಡೆಯುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ನಡೆಸಿರುವ ಮಾತುಕತೆ ಎಂತಹದ್ದು? ಬನ್ನಿ ತಿಳಿಯೋಣ.
ಹೌದು, ಕಳೆದ 10 ತಿಂಗಳಿಂದ ಕೂಡ ಇಸ್ರೇಲ್ & ಗಾಜಾ ನಡುವೆ ಭೀಕರ ಯುದ್ಧ & ಹಿಂಸೆ ನಡೆಯುತ್ತಿದೆ. ಮೊದಲಿಗೆ ಹಮಾಸ್ ಕಡೆಯಿಂದ ಭಾರಿ ದೊಡ್ಡ ಮಟ್ಟದಲ್ಲಿ ಕ್ಷಿಪಣಿ ದಾಳಿ ಆಗಿದೆ ಅಂತಾ ಇಸ್ರೇಲ್ ರೊಚ್ಚಿಗೆದ್ದು, ಮರು ದಾಳಿ ಆರಂಭ ಮಾಡಿತ್ತು. ಈ ರೀತಿ ಆರಂಭ ಆದ ಅಟ್ಯಾಕ್ ಇದೀಗ ದೊಡ್ಡ ಮಟ್ಟದಲ್ಲಿ ಘರ್ಜಿಸುತ್ತಿದೆ. ಈ ಕಾರಣಕ್ಕೆ ಹಿಂದೆ ಸರಿಯಬಾರದು ಹೋರಾಟ ನಡೆಸಬೇಕು ಅಂತಿದೆ ಇಸ್ರೇಲ್. ಹಮಾಸ್ ವಿರುದ್ಧವೇ ಕಾರ್ಯಾಚರಣೆ ನಡೆಸಲು ಹೋಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ಅಮೆರಿಕ ಕೂಡ ಮಧ್ಯ ಪ್ರವೇಶ ಮಾಡಿ, ಯುದ್ಧ ನಿಲ್ಲಿಸಲು ಮಹತ್ವದ ಚರ್ಚೆ ಆರಂಭಿಸಿದೆ.

40,000ಕ್ಕೂ ಹೆಚ್ಚು ಜನರ ಸಾವು?
2023ರ ಅಕ್ಟೋಬರ್ ಮೊದಲನೇ ವಾರ ಆರಂಭವಾದ ಯುದ್ಧ ಎರಡೂ ದೇಶಗಳ ನಡುವೆ ದ್ವೇಶದ ಕಿಚ್ಚು ಹೊತ್ತಿಸಿದೆ. ಅದರಲ್ಲೂ ಗಾಜಾ ನಗರ ಈಗ ನರಕವಾಗಿ ಹೋಗಿದೆ. ಹೀಗೆ, ಹಮಾಸ್ & ಇಸ್ರೇಲ್ ಸೇನೆ ನಡುವೆ ಆರಂಭವಾದ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ಹೀಗಾಗಿ, ಇಸ್ರೇಲ್ ಸೇನೆ ನಡೆಸುತ್ತಿರುವ ಘೋರ ಕಾರ್ಯಾಚರಣೆ ಫಲವಾಗಿ ಈವರೆಗೂ ಸುಮಾರು 40 ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್ ಅವರು ಇದೀಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಗೆ, ಯುದ್ಧ ನಿಲ್ಲಿಸುವ ಚರ್ಚೆ ಆರಂಭಿಸಿದ್ದಾರೆ.
ಜೀವನದ ಮೇಲೆ ನಂಬಿಕೆಯೇ ಇಲ್ಲ...
ಒಟ್ನಲ್ಲಿ ಗಾಜಾ ಜನರಿಗೆ ಜೀವ & ಜೀವನದ ಮೇಲೆ ನಂಬಿಕೆಯೇ ಕಳೆದು ಹೋಗಿದೆ. ಯಾಕಂದ್ರೆ ಹಮಾಸ್ & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಗಾಜಾ ನಗರವೇ ನಾಶವಾಗಿ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ, ಮತ್ತೊಮ್ಮೆ ಭೀಕರ ದಾಳಿ ಆರಂಭ ಮಾಡಿದೆ ಇಸ್ರೇಲ್ ಸೇನೆ. ಗಾಜಾ ಪಟ್ಟಿ ನಗರದ ಬೇರೆ ಬೇರೆ ಭಾಗ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿರುವ ಇಸ್ರೇಲ್ ಸೇನೆ, ಸಾವಿರಾರು ಜನರ ಸಾವಿಗೂ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಯುದ್ಧವು ಭಾರಿ ಸಂಚಲನ ಸೃಷ್ಟಿ ಮಾಡುತ್ತಿದೆ.












Click it and Unblock the Notifications