Iran: ಇರಾನ್‌ಗೆ ಶಾಕ್ ಮೇಲೆ ಶಾಕ್ ಕೊಟ್ಟ ಅಮೆರಿಕ!
ಅಮೆರಿಕ & ಇರಾನ್ ನಡುವೆ ನಡೆಯುತ್ತಿರುವ ಫೈಟಿಂಗ್ ಒಂದೆರಡು ರೀತಿಯಲ್ಲ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಜೊತೆಗಾರರಿಗೆ ಇರುವ ಏಕೈಕ ದೊಡ್ಡ ಶತ್ರು ರಾಷ್ಟ್ರ ಅಂದ್ರೆ ಅದು ಇರಾನ್. ಹೀಗಾಗಿಯೇ ಪದೇ ಪದೇ ಇರಾನ್ ಜೊತೆಗೆ ಅಮೆರಿಕ & ಸ್ನೇಹಿತರ ಬಡಿದಾಟ ನಡೆಯುತ್ತಲೇ ಇರುತ್ತದೆ. ಈಗಾಗಲೇ ಸಾವಿರಾರು ನಿರ್ಬಂಧ ಹೇರಿ ಇರಾನ್ ದೇಶ ವಿಲವಿಲ ಎನ್ನುವಂತೆ ಮಾಡಿರುವ ಅಮೆರಿಕ ಇದೀಗ ಮತ್ತೊಂದು ಶಾಕ್ ಕೊಟ್ಟಿದೆ!
ಇಸ್ರೇಲ್ & ಇರಾನ್ ನಡುವೆ ದೊಡ್ಡದಾಗಿ ಗಲಾಟೆ ನಡೆದು ಕೆಲವೇ ಕೆಲವು ದಿನಗಳು ಕಳೆದಿವೆ ಅಷ್ಟೇ. ಹೀಗಿದ್ದಾಗ ಅಮೆರಿಕ ಮತ್ತೊಮ್ಮೆ ರೊಚ್ಚಿಗೆದ್ದು ಕೂತಿದ್ದು, ಇರಾನ್ ಜೀವ ಹಿಂಡಿ ಹಿಪ್ಪೆ ಮಾಡಲು ಸಜ್ಜಾಗಿದೆ. ಮಧ್ಯಪ್ರಾಚ್ಯ ಭಾಗದ ತನ್ನ ಪ್ರಮುಖ ಶತ್ರು ಇರಾನ್‌ಗೆ ಇದೀಗ ಅಮೆರಿಕದ ಆಡಳಿತ ಕರೆಂಟರ್ ಶಾಕ್ ಕೊಡಲು ಸಜ್ಜಾಗಿದೆ. ಇರಾನ್ ಆರ್ಥಿಕವಾಗಿ ಬೀದಿಗೆ ಬಿದ್ದು ಪರದಾಡುವ ಸಮಯದಲ್ಲೇ, ಮತ್ತಷ್ಟು ನಿರ್ಬಂಧಗಳು ಇರಾನ್ ಬೆನ್ನಿಗೆ ಬೀಳಲಿವೆ.

ಇರಾನ್ ಮೇಲೆ ಏನೆಲ್ಲಾ ನಿರ್ಬಂಧ?
ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ದೇಶಗಳು ಬದುಕು ಕಟ್ಟಿಕೊಂಡಿದ್ದೇ ಪೆಟ್ರೋಲ್ & ಡೀಸೆಲ್ ಆಧಾರದಲ್ಲಿ. ಅದರಲ್ಲೂ ಇರಾನ್ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ಬರುವುದೇ ಈ ರೀತಿ ಪೆಟ್ರೋಲ್ & ಡೀಸೆಲ್ ಮಾರಾಟ ಮಾಡುವ ಮೂಲಕ. ಹೀಗಿದ್ದಾಗ ಅಮೆರಿಕ ಇದೀಗ ಹೊಸ ಬಾಂಬ್ ಇಟ್ಟು ಇರಾನ್ ಆರ್ಥಿಕತೆ ಅಲ್ಲಾಡಿ ಹೋಗುವಂತೆ ಮಾಡಿದೆ. ಇರಾನ್ ನರಳುವ ರೀತಿ ಪ್ಲಾನ್ ಮಾಡಿ, ಪೆಟ್ರೋಲ್ & ಡೀಸೆಲ್ ಉತ್ಪನ್ನಗಳು ಸೇರಿದಂತೆ, ಇರಾನ್ ಮೂಲಕ ಬರುವ ವಸ್ತುಗಳಿಗೆ ನಿರ್ಬಂಧ ಹೇರಲಾಗಿದೆ.
ಇರಾನ್ ಉಸಿರು ಬಿಗಿ ಹಿಡಿಯುವಂತೆ ಮಾಡಿರುವ ಅಮೆರಿಕ ಹೌಥಿ ಬಂಡುಕೋರರಿಗೆ ಕೂಡ ಭಾರಿ ಆಘಾತ ನೀಡಿದೆ. ಯಾಕಂದ್ರೆ ಇಸ್ರೇಲ್ & ಹೌಥಿ ನಡುವೆ ದೊಡ್ಡ ಕಿರಿಕ್ ಆಗುತ್ತಿದ್ದು, ಇದೇ ಬೆನ್ನಲ್ಲಿ ಅಮೆರಿಕ ಇದೀಗ ಬಂಡುಕೋರರಿಗೆ ಕೂಡ ಶಾಕ್ ಕೊಟ್ಟಿದೆ. ಇದೆಲ್ಲ ಪ್ರತಿದಿನ ಮತ್ತಷ್ಟು ಹೆಚ್ಚಾಗುತ್ತಿದ್ದು, ಇರಾನ್ & ಅಮೆರಿಕ ನಡುವಿನ ಶತ್ರುತ್ವ ಇನ್ನಷ್ಟು ಗಟ್ಟಿಯಾಗ್ತಿದೆ.
ಸಿರಿಯಾ ಬಂಡುಕೋರರ ಜೊತೆ ಇರಾನ್ ದೋಸ್ತಿ?
ಇರಾನ್ ಈಗ ಸಿರಿಯಾ ನಾಯಕತ್ವದಲ್ಲಿ ಆದ ಬದಲಾವಣೆ ಬಗ್ಗೆ ವಾಸ್ತವವಗಿ ಚಿಂತಿಸಲು ಶುರು ಮಾಡಿದೆ. ಈ ಕಾರಣಕ್ಕೆ, ಅಸ್ಸಾದ್ ಸರ್ಕಾರ ಬಿದ್ದು ಹೋಗಿ ಸಿರಿಯಾ ನೆಲದಿಂದ ಅಸ್ಸಾದ್ ಓಡಿ ಹೋದ ನಂತರ ಅಧಿಕಾರಕ್ಕೆ ಬಂದ ಸಿರಿಯಾ ಬಂಡಾಯ ಸೇನೆ ಆಡಳಿತದ ಜೊತೆಗೆ ಮಾತುಕತೆಗೆ ಇರಾನ್ ಮುಂದಾಗಿದೆ. ಈ ಮೂಲಕ, ಮಧ್ಯಪ್ರಾಚ್ಯದಲ್ಲಿ ತನ್ನ ಸ್ನೇಹವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಇರಾನ್‌ನ ಆಡಳಿತ ಮುಂದಾಗಿದೆ ಎನ್ನಲಾಗ್ತಿದೆ.












Click it and Unblock the Notifications