ಅಮೆರಿಕ ಚುನಾವಣೆಯಲ್ಲಿ ಕೊನೆ ಕ್ಷಣದ ಕಸರತ್ತು: ಕೊಳಕು ಜೋಕ್ಸ್, ನಾಜಿ & ಫ್ಯಾಸಿಸ್ಟ್ ಮಾತು!
US Presidential Election: ಅಮೆರಿಕ ಚುನಾವಣೆಗೆ ಇನ್ನೊಂದು ವಾರವೂ ಬಾಕಿ ಇಲ್ಲ. ನವೆಂಬರ್ 5ಕ್ಕೆ ಅಮೆರಿಕ ಚುನಾವಣೆ ನಡೆಯಲಿದೆ. ಈ ನಡುವೆ ಅಲ್ಲಿನ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕ್ ಪಕ್ಷದ ನಡುವೆ ಇನ್ನಿಲ್ಲದ ಮುಸುಕಿನ ಗುದ್ದಾಟ ನಡೆದಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿ ಉಳಿದಿರುವಾಗಲೇ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ನಡುವೆ ತೀವ್ರ ವಾಗ್ದಾಳಿ ಮುಂದುವರಿದಿದೆ. ಕೊಳಕು ಜೋಕ್‌ಗಳು ಹರಿದಾಡ್ತಿವೆ ಎನ್ನುವ ಮಾತು ಇದೆ.
ಅಮೆರಿಕ ಚುನಾವಣೆ ಎಂದರೆ ಹಲವು ಕಾರಣಗಳಿಗೆ ಇಂಪಾರ್ಟೆಂಟ್. ಅಮೆರಿಕದ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಅಭಿವೃದ್ಧಿ ಹಾಗೂ ಪ್ರಗತಿಯ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ನಾವು ಅಧಿಕಾರಕ್ಕೆ ಬಂದರೆ ಏನು ಮಾಡ್ತೀವಿ ಎಂದು ಎರಡೂ ಪಕ್ಷಗಳು ಜನರ ಮುಂದೆ ಅವರ ಭವಿಷ್ಯದ (ಅಧಿಕಾರಕ್ಕೆ ಬಂದರೆ ಅನುಷ್ಠಾನ ಮಾಡುವ) ಯೋಜನೆಗಳ ಬಗ್ಗೆ ಮಾತನಾಡ್ತಾರೆ. ಆದರೆ, ಈ ಬಾರಿಯ ಅಮೆರಿಕ ಚುನಾವಣೆ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗ್ತಿದೆ.

ಸಾಮಾನ್ಯವಾಗಿ ಅಮೆರಿಕ ಚುನಾವಣೆ ನಡೆಯುವ ಮುನ್ನ ಡಿಬೆಟ್‌ಗಳಿರ್ತವೆ. ಅಲ್ಲಿ ದ್ವಿಪಕ್ಷಿಯ ಪದ್ಧತಿಯಿದ್ದು, ಎರಡು ಪಕ್ಷಗಳ ಅಭ್ಯರ್ಥಿಗಳು ಅವರು ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿ ಏನೆಲ್ಲ ಮಾಡಲಿದ್ದಾರೆ. ವಿದೇಶಾಂಗ ನೀತಿ ಹೇಗಿರಲಿದೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅಮೆರಿಕದ ನಿಲುವು ಏನಾಗಿರಲಿದೆ ಎನ್ನುವಂತಹ ಗಂಭೀರವಾದ ಚರ್ಚೆಗಳು ನಡೆಯುತ್ತವೆ. ಆದರೆ, ಈ ಬಾರಿ ಚುನಾವಣಾ ಕಣದಲ್ಲಿ ಇರುವವರು ಆ ಲೆಕ್ಕಾಚಾರಗಳನ್ನೇಲ್ಲ ತಲೆಕೆಳಗಾಗಿ ಮಾಡಿದ್ದಾರಂತೆ.
ಇದೀಗ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಪ್ರತಿಸ್ಪರ್ಧಿ ಪಕ್ಷ ಮಾತನಾಡಿರುವ ಮಾತುಗಳಿಗೆ ರಿಪಬ್ಲಿಕನ್ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ ವ್ಯಾನ್ಸ್ ಅವರು ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾರೆ. ಮಾಜಿ ಅಧ್ಯಕ್ಷ ಹಾಗೂ ಹಾಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಮಾಡಿದ ಜನಾಂಗೀಯ ಮತ್ತು ಅಸಭ್ಯ ಟೀಕೆಗಳಿಗೆ ತೀವ್ರವಾಗಿ ಕಿಡಿಕಾರಿದ್ದಾರೆ.

ನನಗೆ ನಿಮ್ಮ ಹಾಸ್ಯದಲ್ಲಿ ಹಾಸ್ಯ ಎನ್ನುವುದೇ ಕಾಣಿಸಲಿಲ್ಲ (ಡೆಮಾಕ್ರಟಿಕ್ ಪಕ್ಷವನ್ನು ಉದ್ದೇಶಿಸಿ). ಅದು ಹಾಸ್ಯ ಅಲ್ಲ ಎನ್ನುವುದು ನಿಮಗೂ ಗೊತ್ತು ನಮಗೂ (ಜನರನ್ನು ಉದ್ದೇಶಿಸಿ) ಗೊತ್ತು. ಅದೊಂದು ಮೂರ್ಖತನದ ಜನಾಂಗೀಯ ಜೋಕ್ ಆಗಿತ್ತು ಎಂದಿದ್ದಾರೆ. ಅಲ್ಲದೆ ಅಮೆರಿಕದಲ್ಲಿ ನಾವು ಪ್ರತಿ ಸಣ್ಣ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು ನಿಲ್ಲಿಸಬೇಕು ಎಂದೂ ಹೇಳಿದ್ದಾರೆ.
ನಾಜಿಗಳಿಗೆ ಹೋಲಿಕೆ ತೀವ್ರ ಆಕ್ರೋಶ: ಇನ್ನು ಈಚೆಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಡೆಮಾಕ್ರಟಿಕ್ ಪಕ್ಷವು ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು, ನಾಜಿಗಳಿಗೆ ಹೋಲಿಕೆ ಮಾಡಿತ್ತು. ಇದಕ್ಕೆ ಟ್ರಂಪ್ ಅವರು ತೀವ್ರ ಆಕ್ರೋಶ ಭರಿತರಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಕಮಲಾ ಹ್ಯಾರಿಸ್ ಅವರಿಗೆ ಯಾರೆಲ್ಲ ವೋಟ್ ಮಾಡುವುದಿಲ್ಲವೋ ಅವರೆಲ್ಲ ನಾಜಿಗಳಂತೆ. ನಾನೇನು ನಾಜಿಯಲ್ಲ. ನಾನೂ ಸಹ ನಾಜಿಗಳನ್ನು ವಿರೋಧಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಅವರನ್ನು ಫ್ಯಾಸಿಸ್ಟ್ ಎಂದಿರುವುದಕ್ಕೂ ಕಿಡಿಯಾಗಿದ್ದಾರೆ.












Click it and Unblock the Notifications