Trump Tariffs: ಭಾರತ & ಅಮೆರಿಕ ತೆರಿಗೆ ಒಪ್ಪಂದ ಅಂತಿಮ ಹಂತದಲ್ಲಿ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಜೊತೆಗೆ ತೆರಿಗೆ ಯುದ್ಧಕ್ಕೆ ಮುಂದಾಗಿದ್ದು, ದೊಡ್ಡ ಚರ್ಚೆ ಸೃಷ್ಟಿ ಮಾಡಿದ್ದರು. ಅದರಲ್ಲೂ ಭಾರತ & ಅಮೆರಿಕ ನಡುವೆ ಇರುವ ಗಟ್ಟಿ ಬಾಂಧವ್ಯ ಇನ್ನೇನು ಹಾಳಾಗಿ ಹೋಗಲಿದೆ ಅನ್ನೋ ಆತಂಕ ಕೂಡ ಆವರಿಸಿತ್ತು. ಹೀಗಿದ್ದಾಗ ಎರಡೂ ದೇಶಗಳ ನಡುವೆ ಮಹತ್ವದ ಮಾತುಕತೆ ಆರಂಭ ಆಗಿತ್ತು. ಹಲವು ದಿನಗಳ ಕಾಲ ನಡೆದಿರುವ ಈ ಚರ್ಚೆ ಇದೀಗ ಭರ್ಜರಿ ಸಕ್ಸಸ್ ಕೊಟ್ಟಂತೆ ಕಾಣುತ್ತಿದೆ.
ಅಮೆರಿಕ ಮೈತುಂಬಾ ಸಾಲ ಮಾಡಿಕೊಂಡಿದ್ದು, ಪರದಾಡುವ ಪರಿಸ್ಥಿತಿಗೆ ತಲುಪಿಬಿಟ್ಟಿದೆ. ಆರ್ಥಿಕವಾಗಿ ಬೀದಿಗೆ ಬೀಳುವ ಭಯದಲ್ಲಿ ಅಮೆರಿಕ ಮನಸ್ಸಿಗೆ ಬಂದ ರೀತಿಯಲ್ಲಿ ನಿರ್ಧಾರನ ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಅಮೆರಿಕ ಕೂಡ ಭಾರಿ ಪ್ರಮಾಣದಲ್ಲಿ ವಸ್ತುಗಳನ್ನು ರಫ್ತು ಮಾಡುತ್ತದೆ. ಹೀಗಿದ್ದಾಗಲೂ ಡೊನಾಲ್ಡ್ ಟ್ರಂಪ್ ಆಡಳಿತ ದಿಢೀರ್ ಬೇರೆ ಬೇರೆ ದೇಶಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿರುವುದು ತಲ್ಲಣ ಎಬ್ಬಿಸಿತ್ತು. ಅದರಲ್ಲೂ ಭಾರತ & ಅಮೆರಿಕ ನಡುವೆ ಕೂಡ ಟ್ಯಾಕ್ಸ್ ವಾರ್ ಶುರು ಆಗೇ ಹೋಯ್ತು ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ಒಪ್ಪಂದ ನಡೆದು, ದೋಸ್ತಿ ಇನ್ನಷ್ಟು ಗಟ್ಟಿಯಾಗುವುದು ಗ್ಯಾರಂಟಿ ಆಗಿದೆ.

ದಿಢೀರ್ ಡೆಡ್‌ಲೈನ್ ಮುಂದೆ ಹಾಕಿತ್ತು!
ಹೌದು, ಭಾರತ ನಮ್ಮ ಕಾರುಗಳ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಇದೇ ಕಾರಣಕ್ಕೆ ನಾವು ಕೂಡ ಹೆಚ್ಚಿನ ತೆರಿಗೆ ಹಾಕುತ್ತಿದ್ದೇವೆ ಅಂತಾ ಅಮೆರಿಕ ಹೆಚ್ಚಿನ ತೆರಿಗೆ ನಿರ್ಧಾರ ಕೈಗೊಂಡಿತ್ತು. ಅಲ್ಲದೆ ಹಲವು ಕಾರಣ ನೀಡಿ, ತನ್ನ ನಿರ್ಧಾರ ಸಮರ್ಥನೆ ಮಾಡಿಕೊಂಡಿತ್ತು ಇದೇ ದೊಡ್ಡಣ್ಣ ಅಮೆರಿಕ. ಹೀಗಿದ್ದಾಗ ಇದೇ ತಿಂಗಳ ಆರಂಭದಿಂದ ಅಂದ್ರೆ ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಘೋಷಣೆ ಮಾಡಿದ್ದ ಹೊಸ ತೆರಿಗೆ ನೀತಿಯನ್ನ ದಿಢೀರ್ ಮುಂದೆ ಹಾಕಲಾಗಿತ್ತು. ಆದರೆ, ಈ ಎಲ್ಲಾ ತಿಕ್ಕಾಟಗಳ ನಂತರ ಭಾರತ ಮತ್ತು ಅಮೆರಿಕ ಮಹತ್ವದ ಒಪ್ಪಂದಕ್ಕೆ ಬಂದಿವೆ.
ಅಂತೂ ಇಂತೂ ಡೀಲ್ ಫಿಕ್ಸ್!
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತದ ಜೊತೆಗೆ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳ ಜೊತೆಗೂ ಟ್ಯಾಕ್ಸ್ ವಾರ್ ಮಾಡಲು ಮುಂದಾಗಿದ್ದರು. ಹೀಗಿದ್ದಾಗ ಅಮೆರಿಕ ಹಾಗೂ ಚೀನಾ ನಡುವೆ ಆಗಾಗ ತೆರಿಗೆ ಯುದ್ಧ ನಡೆಯುತ್ತಲೇ ಬಂದಿತ್ತು. ಈ ಹಿಂದೆಯೂ ಡೊನಾಲ್ಡ್ ಟ್ರಂಪ್ ಚೀನಾ ಜೊತೆ ತೆರಿಗೆ ಕಿರಿಕ್ ಮಾಡಿದ್ದರು. ಆದರೆ ಈ ಬಾರಿ ಟ್ರಂಪ್ ಅವರು ಜಗತ್ತಿನ ಹಲವು ದೇಶಗಳ ಜೊತೆಗೆ ಕಿರಿಕ್ ತೆಗೆದು, ಭಾರಿ ದೊಡ್ಡ ವಿವಾದ ಮಾಡಿಕೊಂಡಿದ್ದರು. ಹೀಗಾಗಿ, ಸಂಚಲನ ಸೃಷ್ಟಿಯಾಗಿ ಖುದ್ದು ಅಮೆರಿಕಗೆ ಇದರಿಂದ ಭಾರಿ ನಷ್ಟವಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಭಾರತದ ಜೊತೆಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಖುದ್ದು ಟ್ರಂಪ್ ಮಾಹಿತಿ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಇದೀಗ ಹೇಳಿರುವಂತೆ, ಭಾರತದ ಜೊತೆಗೆ ಮಹತ್ವದ ಚರ್ಚೆ ಅಂತಿಮ ಹಂತ ತಲುಪಿದೆ. ಹಾಗೇ ಶೀಘ್ರದಲ್ಲೇ ಅಮೆರಿಕ & ಭಾರತದ ನಡುವೆ ತರಿಗೆ ಒಪ್ಫಂದ ಕೂಡ ಏರ್ಪಡಲಿದೆ ಎಂದಿದ್ದಾರೆ. ಇದು ಭಾರತಕ್ಕೆ ಹಾಗೂ ಅಮೆರಿಕದ ಉದ್ಯಮಗಳಿಗೆ ಭಾರಿ ಖುಷಿ ನೀಡಿದೆ. ಹಾಗೇ ಟ್ರಂಪ್ ಅವರ ಈ ನಡೆಯಿಂದ ಎರಡೂ ದೇಶಗಳ ಬಾಂಧವ್ಯ ಇನ್ನಷ್ಟು & ಮತ್ತಷ್ಟು ಸುಧಾರಿಸುವ ನಿರೀಕ್ಷೆ ಕೂಡ ಮೂಡಿದೆ. ಅಲ್ಲದೆ ಷೇರು ಮಾರುಕಟ್ಟೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications