Donald Trump Shot: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೇಲೆ ಗುಂಡಿನ ದಾಳಿ, ವೈರಲ್ ವಿಡಿಯೋ

Donald Trump Shot: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೇಲೆ ಗುಂಡಿ ದಾಳಿಯಾಗಿದೆ. ಕೂಡಲೇ ಅವರನ್ನು ಸ್ಥಳಾಂತರಿಸಲಾಗಿದೆ. ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಅಮೆರಿಕದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾಗಲೂ ಡೊನಾಲ್ಡ್‌ ಟ್ರಂಪ್ ಮೇಲೆ ಗುಂಡಿನ ದಾಳಿಯಾಗಿತ್ತು. ಆ ಸಂದರ್ಭದಲ್ಲಿ ಅವರ ಕಿವಿಗಳಿಗೆ ಗಾಯವಾಗಿತ್ತು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೇಲೆ ಎರಡನೇ ಬಾರಿ ಗುಂಡಿನ ದಾಳಿಯಾಗಿದೆ. ಶ್ವೇತಭವನದ ವರದಿಗಾರರ ಭೋಜನಕೂಟದಲ್ಲಿ (ಡಿನ್ನರ್ ಪಾರ್ಟಿ)ಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಶನಿವಾರ ನಡೆದ ಶ್ವೇತಭವನದ ವರದಿಗಾರರ ಭೋಜನಕೂಟವನ್ನು ಆಯೋಜಿಸಲಾಗಿತ್ತು. ಇನ್ನೇನು ಡಿನ್ನರ್ ಪಾರ್ಟಿ ಶುರುವಾಯಿತು ಎನ್ನುವ ಸಂದರ್ಭದಲ್ಲಿಯೇ ಡೊನಾಲ್ಡ್‌ ಟ್ರಂಪ್‌ನ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಯಾವುದೇ ಗಾಯವಾಗಿಲ್ಲ. ಅಮೆರಿಕದ ಅಧಿಕಾರಿಗಳ ಪ್ರಕಾರ, ಡೊನಾಲ್ಡ್‌ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

Donald Trump

ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಬುಲೆಟ್‌ಪ್ರೂಫ್ (Bulletproof - ಗುಂಡಿನ ದಾಳಿಯನ್ನು ತಡೆಯುವ ಅಥವಾ ಗುಂಡು ತೂರಿ ಹೋಗದ ಸಾಮರ್ಥ್ಯ ಹೊಂದಿರುವ ವಸ್ತು) ಜಾಕೆಟ್ ಧರಿಸಿದ್ದರು. ಹೀಗಾಗಿ ಅವರಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಭದ್ರತಾ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಕಾರ್ಯಕ್ರಮದ ಪ್ರವೇಶ ದ್ವಾರದ ಬಳಿ ಭದ್ರತಾ ತಪಾಸಣಾ ನಡೆಯುವಾಗಲೇ ಈ ಘಟನೆ ಸಂಭವಿಸಿದೆ.ಸೋಷಿಯಲ್

Donald Trump Shot: ವಿಡಿಯೋ ಹಂಚಿಕೊಂಡ ಟ್ರಂಪ್

ಇನ್ನು ತಮ್ಮ ಮೇಲೆ ನಡೆದಿರುವ ಗುಂಡಿ ದಾಳಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಪ್ರತಿಕ್ರಿಯೆ ನೀಡಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರು ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಆರೋಪಿಯೊಬ್ಬ ಓಡುತ್ತಾ ಬಂದಾಗ ಪೊಲೀಸರು ಹೇಗೆ ಪ್ರತಿಕ್ರಿಯಿಸಿದರು ಎನ್ನುವುದು ಅದರಲ್ಲಿ ಕಾಣಿಸುತ್ತದೆ. ಅಲ್ಲದೆ ನೆಲದ ಮೇಲೆ ಮುಖ ಕೆಳಗಾಗಿ ಮಲಗಿರುವ ವ್ಯಕ್ತಿಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಶನಿವಾರ ರಾತ್ರಿ 8:30ರ ಸುಮಾರಿಗೆ ಗುಂಡಿನ ಸದ್ದು ಕೇಳಿ ಬಂದಿದ್ದು. ನೂರಾರು ಪತ್ರಕರ್ತರು, ರಾಜಕೀಯ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವೇದಿಕೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತು ಇತರರನ್ನು ತಕ್ಷಣವೇ ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಕೆಲವರು "ಕೆಳಗೆ ಮಲಗಿ" ಎಂದು ಕೂಗಿದ ಧ್ವನಿಯೂ ವೈರಲ್‌ ವಿಡಿಯೋದಲ್ಲಿ ಇದೆ. ಇನ್ನು ಘಟನೆಯ ಬಳಿಕ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಭದ್ರತಾ ಸಿಬ್ಬಂದಿಯ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+