ಭಾರತ - ಚೀನಾ ಈ ವಿಚಾರದಲ್ಲಿ ಎರಡೂ ಒಂದೇ ಎಂದ ಅಮೆರಿಕ!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೇಲೆ ಹೊಸ ಮಾದರಿಯ ಆರ್ಥಿಕ ನೀತಿಯನ್ನು ಜಾರಿ ಮಾಡುತ್ತಿದ್ದಾರೆ. ಆದರೆ, ಭಾರತ ಹಾಗೂ ಅಮೆರಿಕದ ನಡುವೆ ಸಂಬಂಧ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಭಾರತದ ಮೇಲೆ ದೊಡ್ಡ ಮಟ್ಟದ ಟ್ಯಾಕ್‌ ಹಾಕುವುದಿಲ್ಲ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಭಾರತದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ನಾವು ತೆರಿಗೆ ವಿಚಾರದಲ್ಲಿ ಎಲ್ಲಾ ದೇಶಗಳನ್ನು ಸಮಾನವಾಗಿ ಕಾಣುತ್ತೇವೆ. ಅಲ್ಲದೆ ಅಮೆರಿಕಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ವಿಷಯದ ಬಗ್ಗೆ ಸ್ಪಷ್ಟಪಡಿಸಿದ್ದೀನಿ ಎಂದು ಡೊನಾಲ್ಡ್‌ ಟ್ರಂಪ್ ಅವರು ಹೇಳಿದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಟ್ಯಾಕ್ಸ್‌ ವಾರ್ ಶುರು ಮಾಡಿದ್ದು. ವಿವಿಧ ದೇಶಗಳ ಮೇಲೆ ಮನಸೋಇಚ್ಛೆ ಟ್ಯಾಕ್ಸ್‌ ಹಾಕುತ್ತಿದ್ದಾರೆ. ವಿಪರೀತ ಟ್ಯಾಕ್ಸ್‌ನಿಂದಾಗಿ ವಿವಿಧ ದೇಶಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿವೆ. ಕೆನಡಾ, ಮೆಕ್ಸಿಕೋ ಹಾಗೂ ಚೀನಾದ ಮೇಲೆ ಈಗಾಗಲೇ ವಿಪರೀತ ಟ್ಯಾಕ್ಸ್‌ ಹಾಕಲಾಗಿದೆ. ಆದರೆ, ಇದೀಗ ಡೊನಾಲ್ಡ್‌ ಟ್ರಂಪ್ ಸರ್ಕಾರದ ಕಣ್ಣು ಇದೀಗ ಭಾರತದ ಮೇಲೆಯೂ ಬಿದ್ದಿದೆ. ಭಾರತ ಹಾಗೂ ಚೀನಾಗೆ ಸಮಾನವಾಗಿ ಟ್ಯಾಕ್ಸ್‌ ಹಾಕುವುದಾಗಿ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿರುವುದು ಆಘಾತಕ್ಕೆ ಕಾರಣವಾಗಿದೆ. ಭಾರತ ಹಾಗೂ ಅಮೆರಿಕದ ನಡುವೆ ಸಂಬಂಧ ಉತ್ತಮವಾಗಿದೆ. ಹೀಗಾಗಿ ಭಾರತದ ಮೇಲೆ ಅಮೆರಿಕ ಟ್ಯಾಕ್ಸ್ ವಾರ್‌ ಶುರು ಮಾಡುವುದಿಲ್ಲ ಎಂದೇ ನಿರೀಕ್ಷೆ ಮಾಡಲಾಗಿತ್ತು.

US President Donald Trump Says He Will Tax India and China Equally

ಇದೀಗ ಹೊಸ ಶಾಕ್‌ವೊಂದನ್ನು ಡೊನಾಲ್ಡ್‌ ಟ್ರಂಪ್‌ ಅವರು ಕೊಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ಮೇಲೆ ಸಮಾನವಾದ ತೆರಿಗೆಯನ್ನು ಶೀಘ್ರ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅಮೆರಿಕದ ಮೇಲೆ ವಿವಿಧ ದೇಶಗಳು ಯಾವ ಮಾದರಿಯ ತೆರಿಗೆಯನ್ನು ವಿಧಿಸುತ್ತಿದೆಯೋ ಅದೇ ಮಾದರಿಯನ್ನು ನಾವೂ ಅನುಸರಿಸುತ್ತೇವೆ. ಈ ರೀತಿ ನೋಡಿದರೆ ಅಮೆರಿಕದ ವಸ್ತುಗಳ ಮೇಲೆ ಭಾರತ ಅಗತ್ಯಕ್ಕಿಂತ ಹೆಚ್ಚು ಟ್ಯಾಕ್ಸ್‌ ವಿಧಿಸುತ್ತಿದೆ ಎಂದು ಅಮೆರಿಕ ಹೇಳಿದೆ.

ಅವರು ನಮಗೆ (ಭಾರತ ಹಾಗೂ ಚೀನಾ) ನಮ್ಮ ದೇಶದ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿದ್ದಾರೆ. ಅದೇ ರೀತಿ ನಾವು ಸಹ ಈ ದೇಶದ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತೇವೆ.

ಭಾರತಕ್ಕೆ ವಿನಾಯಿತಿ ಇಲ್ಲ: ಇನ್ನು ಟ್ಯಾಕ್ಸ್‌ನಿಂದ ಭಾರತಕ್ಕೆ ವಿನಾಯಿತಿ ಸಿಗಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಯಾವುದೇ ಕಾರಣಕ್ಕೂ ಭಾರತಕ್ಕೆ ಟ್ಯಾಕ್ಸ್‌ ವಿನಾಯಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಇನ್ನು ಭಾರತದ ಸರಾಸರಿ ಟ್ಯಾಕ್ಸ್‌ ಸುಮಾರು 17% ರಷ್ಟಿವೆ. ಇದನ್ನು ಇತ್ತೀಚಿನ ದಿನಗಳಲ್ಲಿ ಕ್ರಮೇಣ ಕಡಿಮೆ ಮಾಡಲಾಗಿದೆ. ಇನ್ನು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ವಿಸ್ಕಿ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ತೆರಿಗೆ ಶುಲ್ಕವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+