Ukraine War: ಉಕ್ರೇನ್ ಯುದ್ಧ ನಿಲ್ಲಿಸದೇ ಇದ್ದರೆ ಚೀನಾ ವಿರುದ್ಧ ಭಾರಿ ತೆರಿಗೆ ಹೇರಿಕೆ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲುತ್ತಿಲ್ಲ ಎಂಬ ಚಿಂತೆಯ ನಡುವೆ ಕಿತಾಪತಿ ಮಾಡಲು ಈಗ ಟ್ರಂಪ್ ಎಂಟ್ರಿ ಕೊಟ್ಟೇ ಬಿಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿಚಾರದಲ್ಲಿ ಕಿರಿಕಿರಿ ಮಾಡಿ, ತನ್ನದೇ ಬುಡಕ್ಕೆ ಬೆಂಕಿ ಇಟ್ಟುಕೊಂಡಿದ್ದು ಆಗಿದೆ. ಇದೀಗ ಮತ್ತೊಮ್ಮೆ ಚೀನಾ ದೇಶವನ್ನು ಕೆಣಕಲು ಮುಂದಾಗಿರುವ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ತೆರಿಗೆ ಯುದ್ಧ ಶುರುವಾಗುವ ಭಯ ಕೂಡ ಆವರಿಸಿದೆ!
ರಷ್ಯಾ & ಉಕ್ರೇನ್ ಯುದ್ಧವನ್ನು ನಿಲ್ಲಿಸುವುದು ಯಾರು? ಹೀಗೆಲ್ಲಾ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ದೇಶಗಳನ್ನ ಸಮಾಧಾನ ಮಾಡುವುದು ಯಾರು? ಹೀಗೆ ಜಗತ್ತಿನ ಮೂಲೆ ಮೂಲೆಗೆ ಹಬ್ಬಿದೆ ಟ್ರಿಲಿಯನ್ ಡಾಲರ್ ಪ್ರಶ್ನೆ. 3ನೇ ಮಹಾಯುದ್ಧವು ಎಲ್ಲಿ ಶುರುವಾಗುತ್ತೋ? ಈ ರಷ್ಯಾ & ಉಕ್ರೇನ್ ಯುದ್ಧವೇ 3ನೇ ಮಹಾಯುದ್ಧದ ಬೆಂಕಿಗೆ ಎಲ್ಲಿ ಪೆಟ್ರೋಲ್ ಸುರಿಯುತ್ತೋ? ಎಂಬ ಪ್ರಶ್ನೆ ಪ್ರಪಂಚವನ್ನ ಈಗ ಕಾಡುತ್ತಿದೆ ಎನ್ನಬಹದು. ಹೀಗಿದ್ದಾಗಲೇ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿ, ಇಡೀ ಜಗತ್ತು ಮತ್ತೊಂದು ತೆರಿಗೆ ಯುದ್ಧಕ್ಕೆ ಸಿದ್ಧವಾಗುವಂತೆ ಮುನ್ಸೂಚನೆ ನೀಡಿದ್ದಾರೆ.

ಟ್ರಂಪ್ ಮತ್ತೆ ಕಿರಿಕ್ ಶುರು ಮಾಡಿದ್ರಾ?
ಅಂದಹಾಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕೆಲವು ದಿನಗಳ ಹಿಂದೆ ಚೀನಾ ಪ್ರವಾಸ ಮಾಡಿ ಬಂದಿದ್ದಾರೆ. ಚೀನಾ ಅಧ್ಯಕ್ಷರ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ. ಅಮೆರಿಕ ಮಾಡುತ್ತಿರುವ ಕಿರಿಕ್ ತಪ್ಪಿಸಲು ಏಷ್ಯಾದಿಂದ ಬಲಿಷ್ಠ ದೇಶಗಳು ಚೀನಾದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದವು. ಈ ಘಟನೆಯ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಹೊಸ ಆಟ ಶುರು ಮಾಡಿದ್ದು, ರಷ್ಯಾ & ಚೀನಾ ವಿರುದ್ಧ ಬೇರೆ ಬೇರೆ ದೇಶಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಈಗ ಟ್ರಂಪ್ ಆ ರೀತಿಯ ಐಡಿಯಾ ಕೊಟ್ಟಿದ್ದಾರೆ!
ನ್ಯಾಟೋ ದೇಶಗಳಿಂದಲೂ ತೆರಿಗೆ ವಾರ್?
ಅಂದಹಾಗೆ ಉಕ್ರೇನ್ ಯುದ್ಧ ನಿಲ್ಲಿಸಲು ಚೀನಾ ಮುಂದಾಗಬೇಕು, ಈ ಬಗ್ಗೆ ಮಾತುಕತೆ ನಡೆಸಬೇಕು ಅಂದ್ರೆ ಕೂಡಲೇ ಚೀನಾ ವಿರುದ್ಧ ಹೆಚ್ಚಿನ ತೆರಿಗೆ ಹೇರಿಕೆ ಮಾಡಿ ಅಂತಾ ನ್ಯಾಟೋ ದೇಶಗಳಿಗೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ. ಈ ಮೂಲಕ ಮತ್ತೊಂದು ತೆರಿಗೆ ಯುದ್ಧ ನಡೆಸಲು ಟ್ರಂಪ್ ಸಿದ್ಧವಾದಂತೆ ಕಾಣುತ್ತಿದೆ. ಈಗಾಗಲೇ ಭಾರತದ ವಿರುದ್ಧ ಇದೇ ಟ್ರಂಪ್ ತೆರಿಗೆಯ ಯುದ್ಧ ಸಾರಿದ್ದು, ಇದೀಗ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಆದರೆ ಈ ಬಗ್ಗೆ ನ್ಯಾಟೋ ದೇಶಗಳು ಯಾವ ನಿರ್ಧಾರ ಕೈಗೊಳ್ಳುತ್ತವೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications