ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಇಸ್ರೇಲ್ ಹಾಗೂ ಲೆಬನಾನ್ ದೇಶಗಳು 10 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದ್ದಾರೆ. ಗಡಿಭಾಗದಲ್ಲಿ ಕಳೆದ ಹಲವು ವಾರಗಳಿಂದ ತೀವ್ರಗೊಂಡಿದ್ದ ಉದ್ವಿಗ್ನತೆಯ ನಡುವೆ ಈ ಅನಿರೀಕ್ಷಿತ ರಾಜತಾಂತ್ರಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.

ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ (Joseph Aoun) ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರೊಂದಿಗೆ ನಡೆಸಿದ ಮಾತುಕತೆಗಳ ನಂತರ ಟ್ರಂಪ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷರು, ಕದನ ವಿರಾಮವು ಗುರುವಾರ ಸಂಜೆ 5 ಗಂಟೆಯಿಂದ (ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 3:30 ಕ್ಕೆ) ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಯ ಮೊದಲ ಹೆಜ್ಜೆ ಇದಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಆದರೆ, ಈ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಿರುವ ಇಸ್ರೇಲ್ ಅಥವಾ ಹಿಜ್ಬುಲ್ಲಾ ಸಂಘಟನೆಯಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ ಎಂಬುದು ಗಮನಾರ್ಹ.

Donald Trump

"ಪ್ರಪಂಚದಾದ್ಯಂತ 9 ಯುದ್ಧಗಳನ್ನು ಬಗೆಹರಿಸಿದ್ದು ನನ್ನ ಪಾಲಿನ ಹೆಮ್ಮೆಯ ವಿಚಾರ. ಇದು ನನ್ನ 10ನೇ ಯುದ್ಧವಾಗಿದ್ದು, ಬನ್ನಿ ಇದನ್ನು ಆದಷ್ಟು ಬೇಗ ಬಗೆಹರಿಸೋಣ " ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಹುಮ್ಮಸ್ಸಿನಿಂದ ಬರೆದುಕೊಂಡಿದ್ದಾರೆ. ಇದೇ ವಾರಾಂತ್ಯದಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳು ಭೇಟಿಯಾಗಿದ್ದು, ಬರೋಬ್ಬರಿ 34 ವರ್ಷಗಳ ಬಳಿಕ ನಡೆದ ಮೊದಲ ಮುಖಾಮುಖಿ ಸಭೆ ಇದಾಗಿದೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಸಮ್ಮುಖದಲ್ಲಿ ಈ ಮಹತ್ವದ ಮಾತುಕತೆಗಳು ನಡೆದಿವೆ.

ಲೆಬನಾನ್ ಹಾಗೂ ಇಸ್ರೇಲ್ ನಾಯಕರೊಂದಿಗಿನ ಮಾತುಕತೆಗಳನ್ನು ಶಾಂತಿಯತ್ತ ಇಟ್ಟ ಹೆಜ್ಜೆ ಎಂದು ಕರೆದಿರುವ ಟ್ರಂಪ್, ಎರಡು ದೇಶಗಳ ನಡುವೆ ಶಾಶ್ವತ ಒಪ್ಪಂದವನ್ನು ತರಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಜಂಟಿ ಪಡೆಗಳ ಮುಖ್ಯಸ್ಥ ಡಾನ್ ಕೇನ್ ಅವರಿಗೆ ವಿಶೇಷ ಜವಾಬ್ದಾರಿ ವಹಿಸಿರುವುದಾಗಿ ತಿಳಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಟ್ರಂಪ್, 1983ರ ನಂತರ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಮೊದಲ ಅರ್ಥಪೂರ್ಣ ಮಾತುಕತೆಗಾಗಿ ನೆತನ್ಯಾಹು ಮತ್ತು ಔನ್ ಅವರನ್ನು ಶೀಘ್ರದಲ್ಲೇ ಶ್ವೇತಭವನಕ್ಕೆ ಆಹ್ವಾನಿಸುವುದಾಗಿಯೂ ಹೇಳಿದ್ದಾರೆ. "ಉಭಯ ದೇಶಗಳು ಶಾಂತಿಯನ್ನು ಬಯಸುತ್ತಿವೆ, ಮತ್ತು ಅದು ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಮಾರ್ಚ್ 2ರಂದು ಉತ್ತರ ಇಸ್ರೇಲ್‌ನ ಹೈಫಾ ಬಳಿಯ ಕ್ಷಿಪಣಿ ರಕ್ಷಣಾ ನೆಲೆಯ ಮೇಲೆ ರಾಕೆಟ್‌ಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿದ ನಂತರ ಈ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಬೈರೂತ್‌ನ ಉಪನಗರಗಳು ಸೇರಿದಂತೆ ದಕ್ಷಿಣ ಲೆಬನಾನ್‌ನ ಹಲವು ಗ್ರಾಮಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಜೊತೆಗೆ ಬಿಖಾ ಕಣಿವೆ ಮತ್ತು ದಕ್ಷಿಣ ಲೆಬನಾನ್‌ನ ಹಳ್ಳಿಗಳನ್ನು ತೊರೆಯುವಂತೆ ಜನರಿಗೆ ಎಚ್ಚರಿಕೆ ನೀಡಿತ್ತು.

AI Wife: ಇಹಲೋಕ ಬಿಟ್ಟು ಡಿಜಿಟಲ್ ಲೋಕಕ್ಕೆ ಬಾ, ನನ್ನ ಸೇರು: ಎಐ ಪತ್ನಿಯ ಪ್ರೇಮಪಾಶಕ್ಕೆ ಸಿಲುಕಿ ಅಮೆರಿಕ ವ್ಯಕ್ತಿ ಆತ್ಮಹತ್ಯೆ
AI Wife: ಇಹಲೋಕ ಬಿಟ್ಟು ಡಿಜಿಟಲ್ ಲೋಕಕ್ಕೆ ಬಾ, ನನ್ನ ಸೇರು: ಎಐ ಪತ್ನಿಯ ಪ್ರೇಮಪಾಶಕ್ಕೆ ಸಿಲುಕಿ ಅಮೆರಿಕ ವ್ಯಕ್ತಿ ಆತ್ಮಹತ್ಯೆ

ಸದ್ಯ ಘೋಷಣೆಯಾಗಿರುವ ಈ 10 ದಿನಗಳ ಕದನ ವಿರಾಮವು ಎರಡೂ ದೇಶಗಳ ನೈಜ ಉದ್ದೇಶಗಳನ್ನು ಅರಿಯಲು ಮತ್ತು ಮುಂದಿನ ಶಾಂತಿ ಮಾತುಕತೆಗಳಿಗೆ ವೇದಿಕೆ ಸಿದ್ಧಪಡಿಸಲು ಒಂದು ಪರೀಕ್ಷಾ ಅವಧಿಯಾಗಿ ಕಾರ್ಯನಿರ್ವಹಿಸಲಿದೆ. ಈ ಅವಧಿಯಲ್ಲಿ ಎರಡೂ ಕಡೆಯವರು ನಿಯಮಗಳನ್ನು ಉಲ್ಲಂಘಿಸದೆ, ಸಂವಹನ ಮಾರ್ಗಗಳನ್ನು ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬುದರ ಮೇಲೆ ಭವಿಷ್ಯದ ಶಾಂತಿ ಒಪ್ಪಂದ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+