Kim Jong Un: ಅಮೆರಿಕ ಅಧ್ಯಕ್ಷರ ಜೊತೆ ಕಿಮ್ ಜಾಂಗ್ ಉನ್ ಮೀಟಿಂಗ್ ಫಿಕ್ಸ್?
ಅಮೆರಿಕ ಶತ್ರುತ್ವ ಸೃಷ್ಟಿ ಮಾಡಿಕೊಂಡಿರುವ ದೇಶಗಳ ಪೈಕಿ, ಉತ್ತರ ಕೊರಿಯಾ ಕೂಡ ಪ್ರಮುಖ ಸ್ಥಾನ ಪಡೆದಿದೆ. ಒಂದು ಕಾಲದಲ್ಲಿ ಉತ್ತರ ಕೊರಿಯಾ ಮತ್ತು ಅಮೆರಿಕ ದೊಡ್ಡ ಯುದ್ಧವನ್ನೇ ಮಾಡಿದ್ದವು. ಆ ನಂತರ ಅಂತರ ಕಾಯ್ದುಕೊಂಡು ಬಂದಿದ್ದ ಎರಡೂ ದೇಶಗಳ ನಡುವೆ ಆಗಾಗ ತಿಕ್ಕಾಟ ಸಾಮಾನ್ಯವಾಗಿದೆ. ಹೀಗೆ ಇಬ್ಬರ ನಡುವೆ ಫೈಟಿಂಗ್ ನಡೆಯುತ್ತಾ ಇದ್ದಾಗಲೇ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪರಿಸ್ಥಿತಿ ಒಂದಷ್ಟು ಸುಧಾರಣೆ ಕಂಡಿತ್ತು.
ಡೊನಾಲ್ಡ್ ಟ್ರಂಪ್ ಅಧಿಕಾರದಿಂದ ಕೆಳಗೆ ಇಳಿದ ನಂತರ ಜೋ ಬೈಡನ್ ಮತ್ತು ಉತ್ತರ ಕೊರಿಯಾ ನಡುವೆ ಮತ್ತೆ ಸಂಘರ್ಷ ಶುರುವಾಗಿತ್ತು. ಹೀಗೆ ಎರಡೂ ದೇಶಗಳು ಬಡಿದಾಡುವ ಸಮಯದಲ್ಲೇ ಮತ್ತೆ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾರೆ. ಹೀಗಿದ್ದಾಗಲೇ ಡೊನಾಲ್ಡ್ ಟ್ರಂಪ್ ಕೂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಗ್ಗೆ ಮಹತ್ವದ ಹೇಳಿಕೆಯನ್ನ ನೀಡಿದ್ದು, ಸಂಧಾನಕ್ಕೂ ಸೈ ಎಂದಿದ್ದಾರೆ. ಹಾಗಾದ್ರೆ ಅಮೆರಿಕ ಅಧ್ಯಕ್ಷರ ಜೊತೆ ಕಿಮ್ ಜಾಂಗ್ ಉನ್ ಮೀಟಿಂಗ್ ಫಿಕ್ಸ್ ಆಯ್ತಾ?

ಕಿಮ್ & ಟ್ರಂಪ್ ಮೀಟಿಂಗ್ ಫಿಕ್ಸ್?
ಹೌದು, ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ಶತ್ರುಗಳನ್ನು ಕೂಡ ಮಿತ್ರರಾಗಿ ಅಂದ್ರೆ ಸ್ನೇಹಿತರ ಸಾಲಿಗೆ ಸೇರಿಸುತ್ತಿದ್ದಾರೆ. ಅದರಲ್ಲೂ ಅಮೆರಿಕ ಪಾಲಿನ ಪರಮ ಶತ್ರು ಉತ್ತರ ಕೊರಿಯಾ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಇದೀಗ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಟ್ರಂಪ್ ಅವರು ಹೇಳಿದ್ದು ಏನು? ಉ. ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಗೆ ಯಾವಾಗ ಹೈವೋಲ್ಟೇಜ್ ಸಭೆ ನಡೆಸುತ್ತಾರೆ ಟ್ರಂಪ್?












Click it and Unblock the Notifications