ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿದ ಅಮೆರಿಕ; 800 ಕೋಟಿ ಡಾಲರ್ ಸೇನಾ ನೆರವು ಘೋಷಣೆ
ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಇಸ್ರೇಲ್ ಪರ ನಿಂತಿದೆ. ಇಸ್ರೇಲ್‌ಗೆ ನೆರವಿನ ಹಸ್ತ ಚಾಚಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಬರೋಬ್ಬರಿ 800 ಕೋಟಿ ಡಾಲರ್ ಮೌಲ್ಯದ ತುರ್ತು ಸೇನಾ ನೆರವನ್ನು ಘೋಷಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಸೇನಾ ನೆರವಿನ ಪ್ಯಾಕೇಜ್ ಅನ್ನು ಅನುಮೋದಿಸಿದ್ದು, ಪ್ಯಾಲೇಸ್ತಿನನ ಅಮಾಸ ಉಗ್ರರು ದಾಳಿ ನಡೆಸಿರುವ ಇಸ್ರೇಲ್‌ಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಇಸ್ರೇಲ್ ಮೇಲಿನ ದಾಳಿಯ ಮಾಹಿತಿ ತಿಳಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯೂಗೆ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಗಾಜಾದಿಂದ ನಡೆದಿದ್ದ ಹಮಾಸರ ದಾಳಿಯನ್ನು ಖಂಡಿಸಿದ್ದರು. ಇಸ್ರೇಲ್ ಮತ್ತು ಅಮೆರಿಕ ನಡುವೆ ವ್ಯತಿರಿಕ್ತ ಅಭಿಪ್ರಾಯಗಳು ಬಂದಿರುಬ ನಡುವೆಯೂ ಹಿಂದಿನ ತಿಂಗಳು ಉಭಯ ನಾಯಕರು ಭೇಟಿಯಾಗಿ ಪರಸ್ಪರ ಸಹಕಾರ ನೀಡುಬ ಮಾತುಗಳನ್ನಾಡಿದ್ದರು.
ಇಸ್ರೇಲ್ ಪ್ರಧಾನಿ ಜೊತೆ ಚರ್ಚೆ ಬಳಿಕ ಪ್ರತಿಕ್ರಿಯಿಸಿದ್ದ ಜೋ ಬೈಡೆನ್, ಇಸ್ರೇಲ್ ಸರ್ಕಾರ ಹಾಗೂ ಅಲ್ಲಿನ ಜನರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಬೆಂಜಮಿನ್ ನೇತಾನ್ಯೂ ಅವರಿಗೆ ಸ್ಪಷ್ಟವಾಗಿ ಅಮೆರಿಕ ನಿಲುವನ್ನು ತಿಳಿಸಿದ್ದರು. ಅದರ ಬೆನ್ನಲ್ಲೇ ಈಗ 8 ಬಿಲಿಯನ್ ಡಾಲರ್ ಸೇನಾ ನೆರವನ್ನು ಅಮೆರಿಕ ಘೋಷಿಸಿದೆ.
ಇಸ್ರೇಲ್‌ಗೆ ತನ್ನನ್ನು ಹಾಗೂ ತನ್ನ ಜನರನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಇಸ್ರೇಲ್‌ನ ಈ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಬಳಸಿಕೊಳ್ಳುವ ಯಾವುದೇ ದೇಶ ಅಥವಾ ಗುಂಪು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡುತ್ತದೆ ಎಂದು ಜೋ ಬೈಡೆನ್ ಹೇಳಿದ್ದರು.
ಗಾಜಾ ಪಟ್ಟಿಯ ಕಡೆಯಿಂದ ಇಸ್ರೇಲ್ ಮೇಲೆ 5000 ರಾಕೆಟ್ಗಳ ದಾಳಿ ನಡೆಸಲಾಗಿದೆ ಹೀಗಾಗಿ ಇಸ್ರೇಲ್ ಯುದ್ಧವನ್ನೇ ಘೋಷಣೆ ಮಾಡಿದೆ. ಬೆಳಗ್ಗೆಯಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭವಾಗಿದ್ದು, ದಿಗ್ಭಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್ ಉಡಾಯಿಸಲಾಗಿದೆ. ಇಸ್ರೇಲ್‌ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಎಚ್ಚರಿಕೆ ನೀಡಿವೆ.
ದಕ್ಷಿಣ ಇಸ್ರೇಲ್‌ನ 22 ಸ್ಥಳಗಳಲ್ಲಿ ಹಮಾಸ್ ಉಗ್ರಗಾಮಿಗಳು ಅಚ್ಚರಿಯ ನುಸುಳುವಿಕೆ ನಡೆಸಿದ 12 ಗಂಟೆಗಳ ನಂತರವೂ ಹೋರಾಟ ಮುಂದುವರಿದಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಇಸ್ರೇಲ್‌ನ ಮೇಲೆ ವ್ಯಾಪಕವಾದ ಹಮಾಸ್ ದಾಳಿಯ ನಂತರ ಇಸ್ರೇಲ್‌ನ ಪ್ರತಿ ದಾಳಿಯಿಂದ ಕನಿಷ್ಠ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 1,610 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಹೇಳಿದೆ.












Click it and Unblock the Notifications