US Military: ಇರಾನ್ ಮೇಲೆ ಹಿಂದೆಂದೂ ಕಂಡಿರದ ಸೇನಾ ಕಾರ್ಯಾಚರಣೆಗೆ ಅಮೆರಿಕ & ಇಸ್ರೇಲ್ ತಂತ್ರ?

ಇರಾನ್ ವಿರುದ್ಧ ಅಮೆರಿಕ ಸೇಡಿಗೆ ಸೇಡು ಗ್ಯಾರಂಟಿ ಎಂದು ಗುಡುಗಿದೆ, ಮಧ್ಯಪ್ರಾಚ್ಯ ಭಾಗದಲ್ಲಿ ಈಗ ಅಮೆರಿಕ ಮತ್ತು ಇಸ್ರೇಲ್‌ಗೆ ಉಳಿದಿರುವ ಏಕೈಕ ಶತ್ರು ಎಂದರೆ ಅದು ಇರಾನ್ ಮಾತ್ರ. ಹೀಗಿದ್ದಾಗ ತನ್ನ ಶತ್ರುವಿಗೆ ಪಾಠ ಕಲಿಸಬೇಕು ಅಂತಾ ಅಮೆರಿಕ ಮುಂದೆ ನುಗ್ಗಿದೆ, ಹಾಗೇ ಇಸ್ರೇಲ್ ಕೂಡ ಈಗ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಇರಾನ್ ಎಚ್ಚರಿಕೆ ನೀಡಿ ಇಸ್ರೇಲ್ ಮೇಲೆ ದಾಳಿ ಮಾಡುವ ಪ್ರಸ್ತಾಪ ಮಾಡಿತ್ತು. ತಕ್ಷಣವೇ ಅಲರ್ಟ್ ಆಗಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕ ಸೇನೆಯ ಬೃಹತ್ ಹಡಗನ್ನು ನೇರವಾಗಿ ಇರಾನ್ ಕಡೆಗೆ ಕಳುಹಿಸಿದ್ದರು. ಇದೀಗ ಅಮೆರಿಕ ಸೇನೆಯ ಶಸ್ತ್ರಾಸ್ತ್ರಗಳ ಭಂಡಾರವೇ ಇರಾನ್ ಕಡೆಗೆ ನುಗ್ಗಿ ಬರುತ್ತಿದೆ.

ಅಮೆರಿಕ ಸೇನೆ ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಎಂಬ ಹೆಸರು ಗಳಿಸಿದ್ದು, ಅತ್ಯಾಧುನಿಕ ಮತ್ತು ಅತ್ಯಂತ ವಿನಾಶಕಾರಿ ಅಸ್ತ್ರಗಳನ್ನು ಅಮೆರಿಕ ತನ್ನ ಸೇನೆಯಲ್ಲಿ ಇಟ್ಟುಕೊಂಡಿದೆ. ಇದೀಗ ಇರಾನ್‌ಗೆ ಪಾಠ ಕಲಿಸಲು ಆ ಎಲ್ಲಾ ವಿನಾಶಕಾರಿ ಅಸ್ತ್ರಗಳನ್ನು ಬಳಕೆ ಮಾಡುತ್ತಾ? ಎಂಬ ಪ್ರಶ್ನೆ ಮೂಡಿದೆ. ಅದಲ್ಲೂ ಪದೇ ಪದೇ ಇಸ್ರೇಲ್ ವಿಚಾರವಾಗಿ ಕಿರಿಕ್ ಮಾಡುತ್ತಿರುವ ಇರಾನ್‌ಗೆ ಈ ಬಾರಿ ಏನಾದರೂ ಮಾಡಿ ಸರಿಯಾದ ಪಾಠ ಕಲಿಸಬೇಕು ಎಂಬುದು ಟ್ರಂಪ್ ಅವರ ಉದ್ದೇಶ. ಹೀಗಾಗಿಯೇ ಜಗತ್ತಿನಾದ್ಯಂತ ಮತ್ತೊಂದು ಮಹಾಯುದ್ಧ, ಅಂದರೆ 3ನೇ ಮಹಾಯುದ್ಧದ ಭೀತಿ ಮೂಡಿದೆ.

US Military

ಯುದ್ಧದ ಆತಂಕ ಮತ್ತಷ್ಟು ಹೆಚ್ಚಾಯ್ತು

ಮಧ್ಯಪ್ರಾಚ್ಯ ಕಡೆಗೆ ಅಮೆರಿಕ ಸೇನೆಯ F-15E ಸ್ಟ್ರೈಕ್ ಈಗಲ್ ಜೆಟ್‌ಗಳು & ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್ ಹೊರಟು ಬರುತ್ತಿವೆ. ಮತ್ತೊಂದು ಕಡೆ, ಇದೇ ಸಮಯಲ್ಲಿ ಅಮೆರಿಕ ದಿಢೀರ್ ಮಧ್ಯಪ್ರಾಚ್ಯದಲ್ಲಿ ತನ್ನ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಕೂಡ ಬಲಪಡಿಸಿದೆ. ಹೀಗಾಗಿ ಏನೋ ದೊಡ್ಡದಾಗಿ ಕಾರ್ಯಾಚರಣೆ ನಡೆಯುವ ಮುನ್ಸೂಚನೆ ಸಿಗುತ್ತಿದೆ. ಆ ದಿಕ್ಕಿನಲ್ಲಿ ದೊಡ್ಡದಾದ ಸೈನ್ಯವೇ ಹೊರಟಿದೆ, ಏನಾಗುತ್ತದೆ ಎಂದು ಕಾದು ನೋಡುತ್ತೇವೆ. ಇರಾನ್ ಕಡೆಗೆ ನಮಗೆ ದೊಡ್ಡ ಪಡೆ ಹೋಗುತ್ತಿದೆ. ನಾನು ಏನೂ ಆಗುವುದನ್ನ ನೋಡಲು ಬಯಸುವುದಿಲ್ಲ ಆದರೆ ನಾವು ಅವರನ್ನ ತುಂಬಾ ಹತ್ತಿರದಿಂದ ನೋಡುತ್ತಿದ್ದೇವೆ ಎಂದಿದ್ದರು ಟ್ರಂಪ್. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಈಗ ಯುದ್ಧ ಆತಂಕ ಹೆಚ್ಚಾಗಿದೆ.

ಅತ್ಯಾಧುನಿಕ ವಿಮಾನಗಳ ಬಳಕೆಗೆ ಸಿದ್ಧತೆ?

ಜನವರಿ 18 ಭಾನುವಾರವೇ ಅಮೆರಿಕ ವಾಯುಪಡೆಯ ಒಟ್ಟು 12, F-15E ಸ್ಟ್ರೈಕ್ ಈಗಲ್ ಜೆಟ್‌ಗಳನ್ನು ಯುಕೆ ನೆಲದಿಂದ ಜೋರ್ಡಾನ್‌ನ ವಾಯು ನೆಲೆಗಳಿಗೆ ಮತ್ತು KC-135 ವೈಮಾನಿಕ ಇಂಧನ ತುಂಬುವ ವಿಮಾನಗಳು ಸೇರಿದಂತೆ C-130 ಸರಕು ವಿಮಾನಗಳನ್ನು ಇರಾನ್‌ಗೆ ಹತ್ತಿರದಲ್ಲೇ ನಿಯೋಜಿಸಲಾಗಿದೆ ಎಂಬ ವರದಿ ಇನ್ನಷ್ಟು ತಲ್ಲಣ ಎಬ್ಬಿಸಿದೆ. ಕಳೆದ ವರ್ಷ ಇರಾನ್ ಜೊತೆಗಿನ 12 ದಿನಗಳ ಸಂಘರ್ಷದ ವೇಳೆ ಇರಾನ್‌ನ ಡ್ರೋನ್ ದಾಳಿ ಎದುರಿಸಲು ಅಮೆರಿಕ ಮತ್ತು ಇಸ್ರೇಲ್, ಬಹುಪಯೋಗಿ ಯುದ್ಧ ಜೆಟ್ F-15E ಬಳಸಿದ್ದರು. ಈಗ ಮತ್ತೆ ಇರಾನ್ ವಿರುದ್ಧ ಕಾರ್ಯಾಚರಣೆ ಬಗ್ಗೆ ಮಾತು ಕೇಳಿಬರುತ್ತಿರುವಾಗ ಈ ವಿಮಾನಗಳು ಇರಾನ್‌ಗೆ ಹತ್ತಿರವೇ ಬಂದು ನಿಂತಿವೆ ಎನ್ನಲಾಗಿದೆ.

ಅಮೆರಿಕ ಇಷ್ಟೆಲ್ಲಾ ಮಾಡುತ್ತಿರುವಾಗಲೂ ಇರಾನ್ ಮತ್ತೆ ಮತ್ತೆ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿದೆ. ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಈ ಬಗ್ಗೆ ಹೇಳಿಕೆ ನೀಡಿ, ಇರಾನ್ ಯಾವುದೇ ದಾಳಿಗೆ ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಈಗಾಗಲೇ ಇರಾನ್ ಕೂಡ ತನ್ನ ಸೇನೆಯನ್ನು ಹಾಗೂ ತನ್ನ ಬಳಿ ಇರುವ ಕ್ಷಿಪಣಿಗಳನ್ನು ಸಿದ್ಧಮಾಡಿ ಕೊಟ್ಟುಕೊಂಡಿದೆ. ಯಾವುದೇ ಸಮಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಿದರೆ ಅದಕ್ಕೆ ಉತ್ತರ ಕೊಡುತ್ತೇವೆ ಎಂದಿದೆ ಇರಾನ್. ಹೀಗಾಗಿ ತುಂಬಾ ದೊಡ್ಡ, ಭೀಕರ ಯುದ್ಧವೇ ನಡೆಯುವ ಮುನ್ಸೂಚನೆ ಈಗ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+