US Military: ಇರಾನ್ ನೆಲದಲ್ಲಿ ಸೇನಾ ಕಾರ್ಯಾಚರಣೆಗೆ ಅಮೆರಿಕ ಪ್ಲಾನ್, ಪರಮಾಣು ಆತಂಕ ಶುರು

ಮಧ್ಯಪ್ರಾಚ್ಯ ಭಾಗ ಯಾವ ಕ್ಷಣದಲ್ಲಿ ಹೊತ್ತಿ ಉರಿಯುತ್ತೋ, ಆ ಮೂಲಕ ಯಾವಾಗ ರಣಭೀಕರ ಕಾಳಗ ಶುರುವಾಗುತ್ತೋ ಗೊತ್ತಿಲ್ಲ. ಈಗಾಗಲೇ, ಭಾರಿ ದೊಡ್ಡ ಪ್ರಮಾಣದಲ್ಲಿ ಸೇನೆ ಕಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸದ್ದಡಗಿಸಲು ಪ್ಲಾನ್ ಮಾಡಿದ್ದಾರೆ. ಈ ಸೇನಾ ಕಾರ್ಯಾಚರಣೆ ಬಗ್ಗೆ ಸ್ವತಃ ಅಮೆರಿಕದ ಮಿತ್ರ ರಾಷ್ಟ್ರಗಳಲ್ಲೇ ಭಾರಿ ಗೊಂದಲ ಮೂಡಿದೆ. ಹೀಗಿದ್ದರೂ ತಮ್ಮ ಹಠ ಬಿಡದೆ, ಅದನ್ನು ಮಾಡೇ ಮಾಡುತ್ತೇನೆ ಅಂತಿದ್ದಾರೆ ಟ್ರಂಪ್ ಅವರು. ಎಲ್ಲಾ ಗೊಂದಲಗಳ ನಡುವೆ, ಅಕಸ್ಮಾತ್ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧವು ಶುರು ಆದರೆ ಪರಮಾಣು ಬಾಂಬ್ ಆತಂಕ ಗ್ಯಾರಂಟಿ ಎನ್ನಲಾಗುತ್ತಿದೆ.

ಇರಾನ್ ಈಗಾಗಲೇ ದೊಡ್ಡ ದೊಡ್ಡ ಪರಮಾಣು ಸ್ಥಾವರ ನಿರ್ಮಿಸಿದ್ದು, ಆ ಸ್ಥಾವರಗಳ ಒಳಗಡೆ ಪರಮಾಣು ಬಾಂಬ್ ತಯಾರಿಕೆಗೆ ಯತ್ನ ಮಾಡುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬಂದಿದೆ. ಆದರೆ ಈವರೆಗೂ ಇರಾನ್ ಬಳಿ ಪರಮಾಣು ಬಾಂಬ್ ಇದೆಯಾ? ಅಥವಾ ಪರಮಾಣು ಬಾಂಬ್ ಇಲ್ಲವಾ? ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಹೀಗಿದ್ದಾಗ ಅಮೆರಿಕ ದಿಢೀರ್ ಎಂದು ಇರಾನ್ ಮೇಲೆ ಸೇನಾ ಕಾರ್ಯಾಚರಣೆಗೆ ಮುಂದಾದರೆ ಪರಿಸ್ಥಿತಿ ಭೀಕರವಾಗಲಿದೆ ಎಂಬ ಚರ್ಚೆ ಶುರುವಾಗಿದ್ದು, ಈ ಪೈಕಿ ಪರಮಾಣು ಬಾಂಬ್ ಬಳಕೆಯದ್ದೇ ದೊಡ್ಡ ಭಯ ಆವರಿಸಿದೆ ಈಗ.

US Military

ಪರಮಾಣು ಯುದ್ಧ ಆತಂಕ ಹೆಚ್ಚುತ್ತಿದೆ

ಅಮೆರಿಕ ಇಡೀ ಜಗತ್ತಿನಲ್ಲೇ ಮೊದಲ ಬಾರಿಗೆ ಪರಮಾಣು ಬಾಂಬ್ ಸಂಶೋಧನೆ ಮಾಡಿದ್ದು, ಆ ನಂತರ ರಷ್ಯಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಪರಮಾಣು ಬಾಂಬ್ ಸಂಶೋಧನೆ ಮಾಡಿ ಇಡೀ ಜಗತ್ತಿನಲ್ಲಿ ಸಾವಿರಾರು ಬಾಂಬ್ ಇಟ್ಟುಕೊಂಡಿವೆ. ಅದೇ ರೀತಿಯಾಗಿ ರಷ್ಯಾ ಮತ್ತು ಚೀನಾ ಸಹಾಯದಿಂದ ಇರಾನ್ ಕೂಡ ಪರಮಾಣು ಬಾಂಬ್ ಸಂಶೋಧನೆ ಸಾಹಸಕ್ಕೆ ಕೈಹಾಕಿದೆ. ಆದರೆ ಪದೇ ಪದೇ ಇದು ಹಾಳಾಗುತ್ತಿದೆ ಎಂಬ ಮಾತು ಇದೆ, ಮತ್ತೊಂದು ಕಡೆ ಇರಾನ್ ಈಗಾಗಲೇ ತನ್ನ ಬಳಿ ಪರಮಾಣು ಬಾಂಬ್ ಸಿದ್ಧಮಾಡಿ ಇಟ್ಟುಕೊಂಡಿದೆ ಎಂಬ ಆರೋಪಗಳು ಕೂಡ ಇವೆ. ಈ ಎಲ್ಲಾ ಚರ್ಚೆಗಳ ನಡುವೆ ಇದೀಗ ಮತ್ತೆ ಪರಮಾಣು ಯುದ್ಧದ ಆತಂಕ ಶುರುವಾಗಿದೆ.

ಅಮೆರಿಕ ಅಧ್ಯಕ್ಷರ ಕೈಯಲ್ಲಿ ಎಲ್ಲಾ ಇದೆ!

ಇರಾನ್ ವಿಚಾರವಾಗಿ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಗೊಳ್ಳುವ ನಿರ್ಧಾರ ಅಂತಿಮವಾಗಲಿದೆ. ಇರಾನ್ ಮೇಲೆ ದಾಳಿ ಮಾಡಬೇಕಾ? ಬೇಡವಾ? ಎಂಬುದನ್ನು ಡೊನಾಲ್ಡ್ ಟ್ರಂಪ್ ಅವರು ನಿರ್ಧರಿಸಲಿದ್ದಾರೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕೂಡ ಇರಾನ್ ವಿಚಾರದಲ್ಲಿ ಗಂಭೀರ ಚರ್ಚೆಗಳು ಶುರುವಾಗಿದ್ದು, ಯುದ್ಧ ಮಾಡದೇ ಇರುವುದೇ ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಇಸ್ರೇಲ್ ಮತ್ತು ಅಮೆರಿಕ ಈ ವಿಚಾರದಲ್ಲಿ ಬೇರೆಯದ್ದೇ ಪ್ಲಾನ್ ಮಾಡಿ ಮುಂದೆ ನುಗ್ಗಿವೆ, ಹೀಗಾಗಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+