US-Iran War: ಹಾರ್ಮುಜ್ ಜಲಸಂಧಿ ತೆರೆಯುವ ಇರಾನ್ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್: ಯುದ್ಧದಲ್ಲಿ ಲಾಭದ ಲೆಕ್ಕಾಚಾರ!
US-Iran War: ಅಮೆರಿಕ - ಇರಾನ್ ನಡುವಿನ ಸಂಘರ್ಷವು ದಿನೇ ದಿನ ಮಿನಿ ಸೀರಿಯಲ್‌ನ ರೀತಿ ಮುಂದುವರಿಯುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಪ್ರಾರಂಭವಾದ ಅಮೆರಿಕ, ಇಸ್ರೇಲ್ Vs ಇರಾನ್ ದೇಶಗಳ ನಡುವಿನ ಯುದ್ಧವು ಸುದೀರ್ಘ ಅವಧಿಗೆ ಮುಂದುವರಿದುಕೊಂಡು ಬಂದಿದೆ. ಈ ಯುದ್ಧದ ಪರಿಣಾಮವು ಇಂದಿಗೂ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ನಿರಂತರವಾಗಿ ಮುಂದುವರಿದಿದೆ.
ಯುದ್ಧವನ್ನು ಕೊನೆಗೊಳಿಸಲು ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್‌ನ ದೇಶವು ಪ್ರಸ್ತಾಪಿಸಿದೆಯಾದರೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊಂಡುತನವನ್ನು ಮುಂದುವರಿಸಿದ್ದಾರೆ. ಈ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಿರಸ್ಕರಿಸಿದ್ದಾರೆ. ಆದರೆ ಈ ಕ್ಷಣದಲ್ಲಿ ಟೆಹ್ರಾನ್‌ನ ಷರತ್ತುಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಕಾಯುವುದರಿಂದ ವಾಷಿಂಗ್ಟನ್‌ಗೆ ಹೆಚ್ಚಿನ ಲಾಭವಿದೆ ಎಂದೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

"ನಾನು ಇರಾನ್‌ನ ಪ್ರಸ್ತಾಪವನ್ನು ತಿರಸ್ಕರಿಸುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ ಇರಾನ್ "ತುಂಬಾ ನಷ್ಟ ಅನುಭವಿಸುತ್ತಿರುವುದರಿಂದ' ಒಪ್ಪಂದವನ್ನು ಬಯಸುತ್ತದೆ ಎಂದು ವಾದಿಸಿದ್ದಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಾರೆ, ಅದು ಸರಿ ಎಂದು ನಾನು ಭಾವಿಸುತ್ತೇನೆ' ಎಂದೂ ಎಂದು ಟ್ರಂಪ್ ಹೇಳಿದ್ದಾರೆ. "ನಾನು ಸಹ ಒಪ್ಪಂದ ಮಾಡಿಕೊಳ್ಳಲು ಬಯಸುತ್ತೇನೆ. ಆದರೆ ಆ ಒಪ್ಪಂದ ಸ್ವೀಕಾರಾರ್ಹವಲ್ಲ' ಅಂತಲೂ ಯುಟರ್ನ್ ತೆಗೆದುಕೊಂಡಿದ್ದಾರೆ.
ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇರಾನ್ ತನ್ನ ಪ್ರಸ್ತಾಪಕ್ಕೆ ಟ್ರಂಪ್‌ನಿಂದ ಆರಂಭಿಕ ಪ್ರತಿಕ್ರಿಯೆಯನ್ನು ನೋಡಿದ್ದೇವೆ. ಆದರೆ ಮಧ್ಯವರ್ತಿಗಳ ಮೂಲಕ ಇನ್ನೂ ಪ್ರತಿಕ್ರಿಯೆಯನ್ನು ಪಡೆದಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ರಾಜತಾಂತ್ರಿಕ ಪ್ರಯತ್ನಗಳಲ್ಲಿ, ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹೊರತಾಗಿ ಇರಾನ್ ಮತ್ತು ಅಮೆರಿಕದ ನಡುವಿನ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುವಲ್ಲಿ ಕತಾರ್ ಪಾತ್ರ ವಹಿಸಿದೆ.
ಪಾಕಿಸ್ತಾನದ ನಂತರ ಇದೀಗ ಕತಾರ್ ಸಹ ಹೆಚ್ಚು ಆಸಕ್ತಿ ತೋರಿಸುತ್ತಿದೆ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಳಿಗೆಗೊಂದು ಹೇಳಿಕೆ ಕೊಡುತ್ತಿರುವುದರಿಂದಲೇ ತಿಂಗಳುಗಳೇ ಕಳೆದರೂ ಈ ಯುದ್ಧ ತಾರ್ಕಿಕ ಅಂತ್ಯ ಕಾಣುತ್ತಿಲ್ಲ.
ಇರಾನ್‌ನ ಏಳು ದಿನಗಳ ಪ್ರಸ್ತಾವನೆಯಲ್ಲಿ ವಾಷಿಂಗ್ಟನ್ ಇರಾನಿನ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ತೆಗೆದುಹಾಕುವುದು, ಇರಾನಿನ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ಮನ್ನಾ ಮಾಡುವುದು, ಮುಟ್ಟುಗೋಲು ಹಾಕಿಕೊಂಡಿರುವ ಇರಾನಿನ ಸ್ವತ್ತುಗಳಲ್ಲಿ ಅಂದಾಜು 12 ಶತಕೋಟಿಯನ್ನು ಬಿಡುಗಡೆ ಮಾಡುವುದು ಮತ್ತು ಲೆಬನಾನ್ ಮತ್ತು ಯೆಮೆನ್ ಸೇರಿದಂತೆ ವ್ಯಾಪಕವಾದ ಪ್ರಾದೇಶಿಕ ಕದನ ವಿರಾಮ ಸೇರಿದಂತೆ ಹಲವು ಪ್ರಮುಖ ವಿಷಯಗಳು ಸೇರಿವೆ. ಇದಾದ ನಂತರ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುತ್ತದೆ ಮತ್ತು ಅಂತಿಮ ಒಪ್ಪಂದದ ಕುರಿತು ಅಮೆರಿಕದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸುತ್ತದೆ ಎಂದು ಹೇಳಲಾಗಿದೆ.
ಇತ್ತೀಚಿನ ಪ್ರಸ್ತಾವನೆಗಳು ಎರಡೂ ದೇಶಗಳು ಸಹಿ ಮಾಡಿದ ಜೂನ್‌ನ ತಿಳುವಳಿಕೆ ಒಪ್ಪಂದಕ್ಕೆ (MoU) ಹೋಲುತ್ತವೆ. ಆದರೆ ಒಪ್ಪಂದದ ನಿಯಮಗಳ ಮೇಲಿನ ವ್ಯತ್ಯಾಸಗಳಿಂದಾಗಿ ಕಳೆದ ತಿಂಗಳು ಒಪ್ಪಂದವು ಕುಸಿದುಬಿತ್ತು, ಇದು ದಾಳಿಗಳಲ್ಲಿ ಹೆಚ್ಚಳಕ್ಕೆ ಕಾರಣವಾಯಿತು, ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಮತ್ತು ಸುತ್ತಮುತ್ತ, ಇದು ಇರಾನಿನ ದಿಗ್ಬಂಧನದಲ್ಲಿದೆ.
ಡೊನಾಲ್ಡ್ ಟ್ರಂಪ್ ಅವರ ಲೆಕ್ಕಾಚಾರವು ತುಂಬಾ ಸರಳವಾಗಿ ಕಾಣುತ್ತದೆ. ನೌಕಾ ದಿಗ್ಬಂಧನ ಮತ್ತು ಆರ್ಥಿಕ ಪ್ರತ್ಯೇಕತೆಯ ಸಂಯೋಜನೆಯು ಅಂತಿಮವಾಗಿ ಇರಾನ್ ಅನ್ನು ಸಾಕಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದು ಅವರು ನಂಬುತ್ತಾರೆ, ಇರಾನ್‌ನ ಇತ್ತೀಚಿನ ಪ್ರಸ್ತಾಪವು ಅಮೆರಿಕಗೆ ಹೆಚ್ಚೇನು ಲಾಭ ತಂದುಕೊಡುವ ಸಾಧ್ಯತೆ ಇಲ್ಲ ಎನ್ನುವ ಲೆಕ್ಕಾಚಾರವೂ ಇದೆ.


Click it and Unblock the Notifications
