ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!
ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಕೋವಿಡ್-19 ನಿಂದ ಅಮೇರಿಕಾ ಮತ್ತು ಯೂರೋಪ್ ಸ್ಮಶಾನ ಸದೃಶ್ಯವಾಗಿದೆ. ಲಕ್ಷಾಂತರ ಜನರ ಜೀವ ನುಂಗಿರುವ ಈ ಕೊರೊನಾ ವೈರಸ್ ಹರಡಲು ಶುರುವಾಗಿದ್ದು ಹೇಗೆ.? ಈ ಪ್ರಶ್ನೆಗೆ ನಿಖರವಾದ ಉತ್ತರ ಲಭ್ಯವಾಗಿಲ್ಲ.
Recommended Video
ಆದರೆ, ಚೀನಾದ ಹ್ಯುಬೇ ಪ್ರಾಂತ್ಯದಲ್ಲಿರುವ ವುಹಾನ್ ನಗರದಲ್ಲೇ ಕೊರೊನಾ ವೈರಸ್ ಜನ್ಮತಾಳಿದ್ದು ಎನ್ನಲಾಗಿದೆ. ವುಹಾನ್ ನಲ್ಲಿರುವ ಹುವನಾನ್ ಸೀ ಫುಡ್ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕು ಪ್ರಾಣಿಗಳಿಂದ ಮನುಷ್ಯನಿಗೆ ತಗುಲಿದೆ ಅಂತ ಇಲ್ಲಿಯವರೆಗೂ ಹೇಳಲಾಗಿತ್ತು.
ಆದ್ರೀಗ, ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಸೋರಿಕೆ ಆಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ವೈರಾಣುಗಳ ಕುರಿತು ಚೀನಾ ನಡೆಸುತ್ತಿದ್ದ ಸಂಶೋಧನೆಗೆ ವಿಶ್ವದ ದೊಡ್ಡಣ್ಣ ಅಮೇರಿಕಾ ಹಣ ನೀಡಿತ್ತು ಎಂಬ ಸಂಗತಿಯನ್ನು ಡೈಲಿ ಮೇಲ್ ವರದಿ ಮಾಡಿದೆ.

3.7 ಮಿಲಿಯನ್ ಡಾಲರ್ ನೀಡಿದ್ದ ಅಮೇರಿಕಾ
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೊರೊನಾ ವೈರಸ್ ಕುರಿತು ಹಲವು ಪ್ರಯೋಗಗಳನ್ನು ಮಾಡಲು, ಅಲ್ಲಿಂದ 1000 ಮೈಲಿ ದೂರ ಇರುವ ಯುನ್ನಾನ್ ಗುಹೆಗಳಿಂದ ಬಾವಲಿಗಳನ್ನು ಹಿಡಿದು ತರಲಾಗಿತ್ತು. ಈ ಪ್ರಯೋಗಕ್ಕೆ ಯು.ಎಸ್ ಸರ್ಕಾರ 3.7 ಮಿಲಿಯನ್ ಡಾಲರ್ ಹಣ ನೀಡಿತ್ತು ಎಂದು ಡೈಲಿ ಮೇಲ್ ವರದಿ ಪ್ರಕಟಿಸಿದೆ.

ವೈರಸ್ 'ಸೋರಿಕೆ'ಯಾಗಿದ್ದು ಎಲ್ಲಿಂದ.?
ಯುನ್ನಾನ್ ಗುಹೆಗಳಲ್ಲಿನ ಬಾವಲಿಗಳಲ್ಲಿದ್ದ ಕೊರೊನಾ ವೈರಸ್ ವಂಶವಾಹಿನಿಗೂ ಕೋವಿಡ್-19 ಜಿನೋಮ್ಗೂ ತಾಳೆಯಾಗಿದೆ. ಹೀಗಾಗಿ, ಕೊರೊನಾ ವೈರಸ್ 'ಸೋರಿಕೆ'ಯ ಮೂಲ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಲ್ಯಾಬ್ ಹೊರತು ಹುವನಾನ್ ಸೀ ಫುಡ್ ಮಾರುಕಟ್ಟೆ ಅಲ್ಲ ಎಂಬುದೀಗ ಬಟಾ ಬಯಲಾಗಿದೆ.

ಬಾವಲಿಗಳ ಮೇಲೆ ವೈರಸ್ ಪ್ರಯೋಗ
ಅಸಲಿಗೆ, ಹುವನಾನ್ ಸೀ ಫುಡ್ ಮಾರುಕಟ್ಟೆ, ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಕೇವಲ 20 ಮೈಲಿ ದೂರದಲ್ಲಿದೆ. ಡೈಲಿ ಮೇಲ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಯು.ಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಧನಸಹಾಯ ಮಾಡಿದ್ದ ಪ್ರಾಜೆಕ್ಟ್ ಗಾಗಿ, ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಲ್ಯಾಬ್ ಗಳಲ್ಲಿ ವಿಜ್ಞಾನಿಗಳು ಬಾವಲಿಗಳ ಮೇಲೆ ವೈರಸ್ ಪ್ರಯೋಗ ನಡೆಸುತ್ತಿದ್ದರು.

ಲ್ಯಾಬ್ ನಲ್ಲಿ ಹುಟ್ಟಿತಾ ಕೋವಿಡ್-19.?
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಶೋಧನೆಯ ಭಾಗವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಲ್ಯಾಬ್ ನಲ್ಲಿ ವಿಜ್ಞಾನಿಗಳು ಕೋವಿಡ್-19 ಅನ್ನು ಹುಟ್ಟುಹಾಕಿ, ಅದನ್ನ ಮೂರು ದಿನಗಳ ಹಿಂದೆಯಷ್ಟೇ ಹುಟ್ಟಿದ್ದ ಹಂದಿ ಮರಿಗಳಿಗೆ ಇಂಜೆಕ್ಟ್ ಮಾಡಿದ್ದರು. ಹೀಗಾಗಿ, ಲ್ಯಾಬ್ ನಿಂದಲೇ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂಬ ವಾದ ಈಗ ಕೇಳಿಬರುತ್ತಿದೆ.

ಲ್ಯಾಬ್ ಗಳಿಂದಲೇ ಸೋರಿಕೆ
ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಕೋವಿಡ್-19 ಇದ್ದ ರಕ್ತ ವಿಜ್ಞಾನಿಯೊಬ್ಬರ ಮೇಲೆ ಸ್ಪ್ರೇ ಆಗಿ, ಅಲ್ಲಿಂದ ಅದು ಸ್ಥಳೀಯವಾಗಿ ಹಬ್ಬಿದೆ ಎಂದು ಹೇಳುವವರೂ ಇದ್ದಾರೆ. ಇನ್ನು, ಸೀ ಫುಡ್ ಮಾರ್ಕೆಟ್ ನಿಂದ ಕೇವಲ 3 ಮೈಲಿ ದೂರದಲ್ಲಿ ಇರುವ ವುಹಾನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನಲ್ಲೂ ಕೊರೊನಾ ವೈರಸ್ ಹರಡುವಿಕೆ ಕುರಿತು ಬಾವಲಿಗಳು ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗುತ್ತಿತ್ತಂತೆ. ಹೀಗಾಗಿ, ಚೀನಾದ ಲ್ಯಾಬ್ ಗಳಿಂದಲೇ 'ಕೊರೊನಾ ವೈರಸ್ ಸೋರಿಕೆ'ಯಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ ಎಂದು ವರದಿಯಾಗಿದೆ.

1500 ಬಗೆಯ ಡೆಡ್ಲಿ ವೈರಸ್ ಇದೆ.!
ಕೊರೊನಾ ವೈರಸ್ ಮಾತ್ರ ಅಲ್ಲ.. ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ 1500 ಬಗೆಯ ಡೆಡ್ಲಿ ವೈರಸ್ ಗಳನ್ನು ಇಡಲಾಗಿದ್ಯಂತೆ. ಈ ಬಗ್ಗೆ 2018 ರಲ್ಲಿ ಸ್ವತಃ ಚೈನಾ ಡೈಲಿ ಟ್ವೀಟ್ ಮಾಡಿತ್ತು. ಆದ್ರೀಗ, ಇದೇ ಟ್ವೀಟ್ ಡಿಲೀಟ್ ಆಗಿದೆ.

ಅಸಹ್ಯವಾಗುತ್ತದೆ.!
''ವುಹಾನ್ ಇನ್ಸ್ಟಿಟ್ಯೂಟ್ ನಲ್ಲಿ ಕ್ರೂರ ಪ್ರಯೋಗಗಳಿಗೆ ಯು.ಎಸ್ ಸರ್ಕಾರ ಧನ ಸಹಾಯ ನೀಡುತ್ತಿದೆ ಎಂದು ತಿಳಿಯಲು ನನಗೆ ಅಸಹ್ಯವಾಗಿದೆ. ಇಂತಹ ಪ್ರಯೋಗಗಳಿಂದಲೇ ಕೊರೊನಾ ವೈರಸ್ ಜಾಗತಿಕವಾಗಿ ಹರಡಲು ಕಾರಣವಾಗಿರಬಹುದು. ಚೀನಾದ ಪ್ರಯೋಗಾಲಯಗಳಲ್ಲಿನ ಸಂಶೋಧನೆಗಳು ಅಮೇರಿಕಾದ ಅಧಿಕಾರಿಗಳಿಂದ ಯಾವುದೇ ಮೇಲ್ವಿಚಾರಣೆ ಹೊಂದಿಲ್ಲ'' ಎಂದು ಯು.ಎಸ್ ಕಾಂಗ್ರೆಸ್ ಮ್ಯಾನ್ ಮ್ಯಾಟ್ ಗೆಟ್ಜ್ ಹೇಳಿದ್ದಾರೆ.

ಪ್ರಯೋಗಕ್ಕೆ ಒಳಗಾದ ಪ್ರಾಣಿಗಳು ಮಾರುಕಟ್ಟೆಗೆ.!
''ವೈರಸ್ ಸೋಂಕಿಗೆ ಒಳಗಾದ ಅಥವಾ ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ಮತ್ತು ಚೀನಾದ ಲ್ಯಾಬ್ ಗಳಲ್ಲಿ ಪ್ರಯೋಗಕ್ಕೊಳಗಾದ ಪ್ರಾಣಿಗಳನ್ನು ಬಳಿಕ ಜನರ ಆಹಾರಕ್ಕಾಗಿ ಅಲ್ಲಿನ ಮಾಂಸ ಮಾರುಕಟ್ಟೆಗೆ ಮಾರಾಟ ಮಾಡಬಹುದು'' ಎಂದು ಯು.ಎಸ್.ಪ್ರೆಶರ್ ಗ್ರೂಪ್ ವೈಟ್ ಕೋಟ್ ವೇಸ್ಟ್ ಅಧ್ಯಕ್ಷ ಆಂಥೋಣಿ ಬೆಲ್ಲೋಟಿ ಹೇಳಿದ್ದಾರೆ.

ಇದು ಚೀನಾ ಸೃಷ್ಟಿಸಿದ ಜೈವಿಕ ಅಸ್ತ್ರ.?
ಕೊರೊನಾ ವೈರಸ್ ಔಟ್ ಬ್ರೇಕ್ ಆದಾಗಿನಿಂದಲೂ ಅದರ ಮೂಲದ ಬಗ್ಗೆ ಹಲವಾರು ಮಾಹಿತಿಗಳು ಹೊರಬೀಳುತ್ತಿವೆ. ಅದರಲ್ಲೂ ವುಹಾನ್, ಅಲ್ಲಿನ ಮಾಂಸ ಮಾರುಕಟ್ಟೆ ಮತ್ತು ವೈರಾಲಜಿ ಲ್ಯಾಬ್ ವಿವಾದದ ಕೇಂದ್ರಬಿಂದುವಾಗಿದೆ. ಇನ್ನು, ಕೊರೊನಾ ವೈರಸ್ ಸ್ವತಃ ಚೀನಾ ಸೃಷ್ಟಿಸಿದ ಜೈವಿಕ ಅಸ್ತ್ರ ಎಂದೇ ಹಲವರು ನಂಬಿದ್ದಾರೆ. ಆದ್ರೆ, ಇದೆಲ್ಲವನ್ನೂ ಚೀನಾ ಸರ್ಕಾರ ತಳ್ಳಿಹಾಕಿದೆ.

ವುಹಾನ್ ವಿಜ್ಞಾನಿಗಳ ಹೇಳಿಕೆ
''ಕೊರೊನಾ ವೈರಸ್ ಸೋರಿಕೆ ಲ್ಯಾಬ್ ನಿಂದ ಆಗಿಲ್ಲ'' ಅಂತ ಫೆಬ್ರವರಿಯಲ್ಲಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಡೆಪ್ಯೂಟಿ ಡೈರೆಕ್ಟರ್ ಶೀ ಝೆಂಗ್ಲಿ ಹೇಳಿದ್ದರು. ಹಾಗೇ, ''ಅತ್ಯಾಧುನಿಕ ಗುಣಮಟ್ಟ ಮತ್ತು ಸುರಕ್ಷತೆ ವುಹಾನ್ ಲ್ಯಾಬ್ ನಲ್ಲಿದೆ. ಹೀಗಾಗಿ, ಲ್ಯಾಬ್ ನಿಂದ ವೈರಸ್ ಸೋರಿಕೆ ಸಾಧ್ಯವೇ ಇಲ್ಲ'' ಎಂದು ಡಾ.ಕೀಶ್ ಕೂಡ ಹೇಳಿದ್ದಾರೆ.

ಸೀ ಫುಡ್ ಮಾರ್ಕೆಟ್ ಒಂದೇ ಮೂಲ ಅಲ್ಲ.!
ಯಾರು ಏನೇ ಹೇಳಿದರೂ, ಕೊರೊನಾ ವೈರಸ್ ಸೋಂಕಿಗೆ ತುತ್ತಾದ ಮೊದಲ 41 ಜನರ ಪೈಕಿ 13 ಮಂದಿ ವುಹಾನ್ ಸೀ ಫುಡ್ ಮಾರ್ಕೆಟ್ ಕಡೆ ಕಾಲಿಟ್ಟರಲಿಲ್ಲ ಎಂಬ ಸಂಗತಿ ವುಹಾನ್ ಜಿನ್ಯಿನ್ಟಾನ್ ಆಸ್ಪತ್ರೆ ವೈದ್ಯ ಕಾವೋ ಬಿನ್ ಕೈಗೊಂಡ ಅಧ್ಯಯನದಲ್ಲಿ ಕಂಡುಬಂದಿದೆ. ಅಲ್ಲಿಗೆ, ವುಹಾನ್ ಸೀ ಫುಡ್ ಮಾರ್ಕೆಟ್ ಒಂದರಿಂದಲೇ 'ಕೊರೊನಾ ವೈರಸ್' ಹಬ್ಬಿರಲು ಸಾಧ್ಯವೇ ಇಲ್ಲ.! ಹೀಗಾಗಿ, ಇದು 'ಲ್ಯಾಬ್ ಸೃಷ್ಟಿಯ ಅವಾಂತರ' ಎಂಬುದು ಅರಿಯದ ವಿಚಾರವಾಗಿ ಉಳಿದಿಲ್ಲ.












Click it and Unblock the Notifications