US Election 2024: ಒಬಾಮಾ ತವರು ರಾಜ್ಯ ಗೆದ್ದ ಕಮಲಾ ಹ್ಯಾರಿಸ್
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು ಇನ್ನು ಕೆಲವು ಗಂಟೆಗಳಲ್ಲಿ ಶ್ವೇತಭವನ ಪ್ರವೇಶಿಸುವುದು ಯಾರು ಎನ್ನುವುದು ಘೋಷಣೆಯಾಗುವ ಸಾಧ್ಯತೆ ಇದೆ. ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ಸದ್ಯದ ಟ್ರೆಂಡ್ ಪ್ರಕಾರ ಡೊನಾಲ್ಡ್ ಟ್ರಂಪ್ ಮುನ್ನಡೆ ಪಡೆದುಕೊಂಡಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತವರು ರಾಜ್ಯ ಹವಾಯಿಯಲ್ಲಿ ಕಮಲಾ ಹ್ಯಾರಿಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹವಾಯಿ ರಾಜ್ಯವು ಡೆಮಾಕ್ರಟಿಕ್ ಪಕ್ಷದ ಭದ್ರಕೋಟೆಯಾಗಿದೆ. ಕಳೆದ 10 ಚುನಾವಣೆಯಲ್ಲಿ ಇಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್ ಹವಾಯಿಯಲ್ಲಿ ಗೆಲುವು ಸಾಧಿಸುವಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪಾತ್ರ ಮುಖ್ಯವಾಗಿದೆ. ಹವಾಯಿಯಲ್ಲಿ ಕಮಲಾ ಹ್ಯಾರಿಸ್ ಗೆಲುವು ಸಾಧಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಘೋಷಿಸಿದೆ.

40 ವರ್ಷಗಳ ಹಿಂದೆ 1984ರಲ್ಲಿ ಇಲ್ಲಿ ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೇಗನ್ ಗೆಲುವು ಸಾಧಿಸಿದ್ದು ಕೊನೆಯ ಬಾರಿ, ಅದಾದ ಬಳಿಕ ಹವಾಯಿ ಸ್ಟೇಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ಪ್ರಾಬಲ್ಯ ಸಾಧಿಸಿದೆ. ರಾಜ್ಯ ಶಾಸಕಾಂಗದ ಎರಡೂ ಚೇಂಬರ್‌ಗಳಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ಸ್ಥಾನಗಳ ಮೇಲೆ ಡೆಮಾಕ್ರಾಟಿಕ್ ನಿಯಂತ್ರಣ ಹೊಂದಿದೆ. ರಾಜ್ಯದಾದ್ಯಂತ ಎಲ್ಲಾ ಚುನಾಯಿತ ಕಚೇರಿಗಳನ್ನು ಮತ್ತು ಹವಾಯಿಯ ಎರಡು ಯುಎಸ್ ಹೌಸ್ ಸೀಟುಗಳನ್ನು ಡೆಮಾಕ್ರಟಿಕ್ ಹಿಡಿದುಕೊಂಡಿದ್ದು, ಪಕ್ಷದ ಭದ್ರಕೋಟೆಯಾಗಿದೆ.
ಅಮೆರಿಕದ ನೈಋತ್ಯ ಭಾಗದಲ್ಲಿ ನೆಲೆಗೊಂಡಿರು ಹವಾಯಿ ಒಂದು ದ್ವೀಪ ರಾಜ್ಯ. ಅಮೆರಿಕದ ಏಕೈಕ ದ್ವೀಪ ರಾಜ್ಯವಾಗಿದ್ದು, ಉಷ್ಣವಲಯವಾಗಿದೆ. ಇಲ್ಲಿನ ಒಟ್ಟಾರೆ ಜನಸಂಖ್ಯೆಯಲ್ಲಿ 37 ಪ್ರತಿಶತ ಮತದಾರರು ಏಷ್ಯನ್ ಎಂದು ಗುರುತಿಸಲಾಗಿದೆ. 25 ಪ್ರತಿಶತ ಬಿಳಿಯ ಜನಾಂಗಕ್ಕೆ ಸೇರಿದವರಾಗಿದ್ದು, 10 ಪ್ರತಿಶತ ಸ್ಥಳೀಯ ಹವಾಯಿ ಅಥವಾ ಫೆಸಿಫಿಕ್ ಐಲ್ಯಾಂಡರ್ ಗಳಾಗಿದ್ದು, 28 % ಹಿಸ್ಪಾನಿಕ್ ಅಥವಾ ಇತರೆ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಯುಎಸ್‌ಗೆ ಅಧಕ್ಷರನ್ನು ಕೊಟ್ಟ ರಾಜ್ಯ
ಇದೇ ಹವಾಯಿಯ ಹೊನೊಲುಲುವಿನಲ್ಲಿ ಬರಾಕ್ ಒಬಾಮ 4 ಆಗಸ್ಟ್ 1961 ರಂದು ಜನಿಸಿದರು. 2009 ರಿಂದ 2017 ರವರೆಗೆ 44 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಒಬಾಮಾ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಯುಎಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಆಗಿದ್ದರು.












Click it and Unblock the Notifications