US Election 2024: ಕಸದ ಗಾಡಿ ಓಡಿಸಿ ವಿರೋಧಿಗಳ ಹೃದಯಕ್ಕೆ ಕಿಚ್ಚು ಹೊತ್ತಿಸಿದ ಡೊನಾಲ್ಡ್ ಟ್ರಂಪ್!
ಶತ್ರುಗಳಿಗೆ ಉತ್ತರ ಬಾಯಲ್ಲ ಅಲ್ಲ, ನಿಮ್ಮ ಕೆಲಸದಲ್ಲಿ ಕೊಡಬೇಕು.. ಅರೆರೆ ಇದು ಯಾವುದೇ ನೀತಿಪಾಠ ಅಲ್ಲ ರೀ, ಅಂದಹಾಗೆ ಅಮೆರಿಕದ ಮಾಜಿ ಅಧ್ಯಕ್ಷ & ಹಾಲಿ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್ ಅವರ ನಡೆಯಿಂದ ಕಂಡುಕೊಂಡಿದ್ದು. ಅಷ್ಟಕ್ಕೂ ತಮ್ಮ ಬಗ್ಗೆ & ತಮ್ಮ ಬೆಂಬಲಿಗರ ಬಗ್ಗೆ ಮಾತನಾಡಿದ್ದ ವಿರೋಧಿಗಳಿಗೆ ಡೊನಾಲ್ಡ್ ಟ್ರಂಪ್ ಇದೀಗ ಕಸದ ಗಾಡಿ ಓಡಿಸುವ ಮೂಲಕ ಸರಿಯಾಗಿ ಉತ್ತರ ನೀಡಿದ್ದಾರೆ!
ದೊಡ್ಡಣ್ಣ ಅಮೆರಿಕದಲ್ಲಿ ಏನೇ ಘಟನೆ ನಡೆದರೂ ಅದು ಜಗತ್ತಿನ ಮೇಲೆ ಪರಿಣಾಮ ಬೀರುತ್ತೆ. ಅಮೆರಿಕದ ಚುನಾವಣೆ ಇಡೀ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯಲು ಆರಂಭ ಮಾಡಿದೆ. ಅಂದಹಾಗೆ ಅಮೆರಿಕದಲ್ಲಿ ಇನ್ನೇನು ಮುಂದಿನ ವಾರವೇ ಅಂದ್ರೆ ನವೆಂಬರ್ 5ಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ 60 ವರ್ಷದ ಕಮಲಾ ಹ್ಯಾರಿಸ್ & 78 ವರ್ಷದ ಡೊನಾಲ್ಡ್ ಟ್ರಂಪ್ ಮುಖಾಮುಖಿ ತಿಕ್ಕಾಟ ಶುರು ಮಾಡಿದ್ದಾರೆ.

ಕಸದ ಗಾಡಿ ಓಡಿಸಿದ್ದು ಏಕೆ?
ಹೀಗೆ ಇಬ್ಬರೂ ಚುನಾವಣೆ ಪ್ರಚಾರದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋಪ ನಡೆಸುತ್ತಿದ್ದಾರೆ. ಕಮಲಾ ಹ್ಯಾರಿಸ್ ಇದೀಗ ಮತ್ತಷ್ಟು ಗಟ್ಟಿಯಾಗಿ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅದೇ ರೀತಿ ಬೈಡನ್ ಅಂದ್ರೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಕೂಡ ಟ್ರಂಪ್ ವಿರುದ್ಧ ಮಾತನಾಡಿದ್ದರು. ಈಗ ಎಲ್ಲರಿಗೂ ಸರಿಯಾಗಿ ಉತ್ತರ ನೀಡಿದ್ದಾರೆ ಡೊನಾಲ್ಡ್ ಟ್ರಂಪ್, ಅದು ಕಸದ ಗಾಡಿಯನ್ನ ಓಡಿಸುವ ಮೂಲಕ!
BREAKING: Donald Trump is riding in a garbage truck less than 24 hours after Joe Biden called his supporters “garbage” pic.twitter.com/KCfW2WsIe0
— America (@america) October 30, 2024
ಟ್ರಂಪ್ ಉತ್ತರಕ್ಕೆ ಬೈಡನ್ ಸೈಲೆಂಟ್?
ಯೆಸ್, ಡೊನಾಲ್ಡ್ ಟ್ರಂಪ್ ಇದೀಗ ಕಸದ ಗಾಡಿಯ ಓಡಿಸುವುದಕ್ಕೂ ಒಂದು ಕಾರಣ ಇದೆ. ತಮ್ಮ ಬೆಂಬಲಿಗರನ್ನು ಅಂದ್ರೆ, ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರನ್ನು 'ಕಸ' ಎಂದು ಕಸಕ್ಕೆ ಹೋಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಸಖತ್ ಆಗಿಯೇ ಉತ್ತರ ನೀಡಿದ್ದಾರೆ ಡೊನಾಲ್ಡ್ ಟ್ರಂಪ್. ಟ್ರಂಪ್ ಬೆಂಬಲಿಗರನ್ನು 'ಕಸ' ಎಂದು ಕಸಕ್ಕೆ ಹೋಲಿಕೆ ಮಾಡಿದ್ದ ಹಿನ್ನೆಲೆ, ಡೊನಾಲ್ಡ್ ಟ್ರಂಪ್ ಕಸದ ಗಾಡಿ ಓಡಿಸಿ ತಕ್ಕ ಉತ್ತರ ನೀಡಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಮತಗಳನ್ನ ಸೆಳೆಯುವಲ್ಲಿ ಕೂಡ ಯಶಸ್ವಿ ಆಗುತ್ತಿದ್ದಾರೆ.
1 ಮಿಲಿಯನ್ ಡಾಲರ್ ಬಹುಮಾನ
ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಅಮೆರಿಕದ ಅತ್ಯಂತ ಪ್ರಭಾವಿ ವ್ಯಕ್ತಿ ಕೂಡ ಆಗಿದ್ದಾರೆ. ಅಲ್ಲದೆ ಜಗತ್ತಿನ ಶ್ರೀಮಂತ ಎಂಬ ಹೆಮ್ಮೆ ಕೂಡ ಎಲಾನ್ ಮಸ್ಕ್ ಹೆಸರಿನಲ್ಲೇ ಇದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ ಈಗ ಎಲ್ಲಾ ರೀತಿಯ ಬೆಂಬಲ ನೀಡುತ್ತಿರುವ ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್, ಸದ್ಯ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಪರವಾಗಿ ನಿಂತು ಗೆಲುವಿಗಾಗಿ ಶ್ರಮಿಸುವವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ನೀಡ್ತಿದ್ದಾರೆ ಎಲಾನ್ ಮಸ್ಕ್.












Click it and Unblock the Notifications