US Election: ಕಮಲಾ, ನಿನ್ನನ್ನು ವಜಾ ಮಾಡಲಾಗಿದೆ ಎಂದ ಟ್ರಂಪ್!
US Election: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿವೆ. ಕೊನೆಯ ಹಂತದ ರಾಜಕೀಯ ಕಸರತ್ತು ನಡೆದಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಸ್ಪರ್ಧಿಗಳಾಗಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ವಾಕ್ಸಮರ ಮುಂದುವರಿದಿದೆ. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಕಮಲಾ ಹ್ಯಾರಿಸ್ ಸ್ವಲ್ಪ ಮುಂಚೂಣಿಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಇದು ಡೊನಾಲ್ಡ್ ಟ್ರಂಪ್ ಎದೆಬಡಿತ ಹೆಚ್ಚಿಸಿದೆ.
ನವೆಂಬರ್ 5ಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕ ವಿಶ್ವದ ದೊಡ್ಡಣ್ಣ ಅಂತಲೇ ಫೇಮಸ್. ಹೀಗಾಗಿ, ಅಮೆರಿಕದ ಚುನಾವಣೆ ಇಡೀ ವಿಶ್ವದ ವಿವಿಧ ರಾಷ್ಟ್ರಗಳಿಗೂ ಇಂಪಾರ್ಟೆಂಟ್. ಇಲ್ಲಿ ಯಾರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನುವುದರ ಮೇಲೆಯೇ ವಿಶ್ವದ ವಿವಿಧ ವಿದ್ಯಾಮಾನ್ಯಗಳು ನಿರ್ಧರಿತವಾಗುತ್ತವೆ. ಇದೀಗ ಅಂತಿಮ ಹಂತದ ಚುನಾವಣೆ ಪ್ರಚಾರದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಕಮಲಾ ನಿಮ್ಮನ್ನು (Kamala, you are fired) ವಜಾ ಮಾಡಲಾಗಿದೆ ಎಂದಿದ್ದಾರೆ.

US presidential election: ಟ್ರಂಪ್ ಮಾತು ವ್ಯಂಗ್ಯ ಭರಿತವಾಗಿ ಅಮೆರಿಕಾದಲ್ಲಿ ಟ್ರೋಲ್ ಸೃಷ್ಟಿ ಮಾಡಿದೆ. ಸಾಮಾನ್ಯವಾಗಿ ಕೆಲಸದಿಂದ ತೆಗೆದು ಹಾಕುವ ಸಂದರ್ಭದಲ್ಲಿ ಬಾಸ್‌ಗಳು ಅವರ ಉದ್ಯೋಗಿಗಳಿಗೆ ಬಳಸುವ ಪದವಿದು. ಯಾರಾದರು ಸರಿಯಾಗಿ ಕೆಲಸ ಮಾಡದೆ ಇದ್ದರೆ, ಇಲ್ಲ ದೊಡ್ಡ ತಪ್ಪು ಮಾಡಿದರೆ you are fired ಅಂತ ಬಳಸಲಾಗುತ್ತೆ. ನಿನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬರ್ಥದಲ್ಲಿ ಇದೇ ಮಾತನ್ನು ಟ್ರಂಪ್ ಉಪಯೋಗಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ 57 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮತಚಲಾಯಿಸಿದ್ದಾರೆ. ಇನ್ನು 2020ರ ಚುನಾವಣೆಯಲ್ಲಿ ಒಟ್ಟು ಚಲಾವಣೆಗೆಗೊಂಡ ಮತಗಳಿಗಿಂತಲೂ ಇದು
ಆರಂಭಿಕ ಅಥವಾ ಮೇಲ್-ಇನ್ ಮತದಾನದ ಮೂಲಕ ತಮ್ಮ ಮತಗಳನ್ನು ಚಲಾಯಿಸಿದ್ದಾರೆ, 2020 ರ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇಕಡಾ 35 ಕ್ಕಿಂತ ಹೆಚ್ಚು.

ಚುನಾವಣಾ ಪ್ರಚಾರದ ಬಗ್ಗೆ ಬೇಸರ: ಸಾಮಾನ್ಯವಾಗಿ ಅಮೆರಿಕದ ಚುನಾವಣೆ ಪ್ರಚಾರಗಳು, ಸಭೆಗಳು ಘನತೆಯಿಂದ ಕೂಡಿರುತ್ತೆ. ಭಾರತದಲ್ಲಿ ಚುನಾವಣೆ ಸಂದರ್ಭಗಳಲ್ಲಿ ನಡೆಯುವ ಬರೀ ಬೈಗುಳದ ಪ್ರಚಾರ ಸಭೆಗಳು ಅದಾಗಿರಲ್ಲ. ಅಲ್ಲಿ ಯಾರು ಅಧಿಕಾರಕ್ಕೆ ಬಂದರೆ ಏನು ಮಾಡಲಿದ್ದಾರೆ. ಅವರ ಯೋಜನೆಗಳು ಏನು ಎನ್ನುವುದು ಚರ್ಚೆಯಾಗುತ್ತೆ. ಆದರೆ, ಈ ಬಾರಿ ಎಲ್ಲವೂ ತದ್ವಿರುದ್ಧವಾಗಿದೆ. ಈ ಬಾರಿ ಅಮೆರಿಕದ ಚುನಾವಣೆಯಲ್ಲಿ ಕೊಳಕು ಮಾತು, ವೈಷಮ್ಯ ಹಾಗೂ ಜನಾಂಗೀಯ ನಿಂದನೆಯ ಆರೋಪಗಳೇ ಕೇಳಿ ಬಂದಿವೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಸಭೆಗಳ ಬಗ್ಗೆ ಈ ಬಾರಿ ಅಮೆರಿಕನ್ನರಿಗೆ ಬೇಸರವಾಗಿದೆಯಂತೆ. 10ರಲ್ಲಿ 7 ಜನ ಈ ಬಾರಿಯ ಅಮೆರಿಕ ಚುನಾವಣೆಯ ಪ್ರಚಾರದ ಬಗ್ಗೆ ಆತಂಕ ಅಥವಾ ಬೇಸರ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈಚೆಗೆ ಡೆಮಾಕ್ರಟಿಕ್ ಪಕ್ಷದಿಂದ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಅವಹೇಳನ ಮಾಡಲಾಗಿದೆ ಎನ್ನಲಾಗಿತ್ತು. ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕಸ (ಗಾರ್ಬೇಜ್) ಅಂತ ಹೇಳಲಾಗಿತ್ತು. ಈ ವಿಷಯದಿಂದ ಕಮಲಾ ಅವರು ಅಂತರ ಕಾಪಾಡಿಕೊಂಡಿದ್ದರು.












Click it and Unblock the Notifications