US Earthquake: 24 ಗಂಟೆಗಳಲ್ಲಿ ಮತ್ತೆ ಟೋಂಗಾ ಬಳಿ ಕಂಪಿಸಿದ ಭೂಮಿ!
24 ಗಂಟೆಗಳಲ್ಲಿ ಮತ್ತೆ ಅಮೆರಿಕಾದ ಟೊಂಗಾ ಪ್ರದೇಶದಲ್ಲಿ ಎರಡನೇ ಬಾರಿಗೆ ಬೃಹತ್ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಇಂದು ಎರಡನೇ ಬಾರಿಗೆ ಟೊಂಗಾ ಪ್ರದೇಶದ ಬಳಿ 6.0 ತೀವ್ರತೆಯಲ್ಲಿ ಭೂಕಂಪವಾಗಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಪ್ರಕಾರ ಶುಕ್ರವಾರ ದಕ್ಷಿಣ ಪೆಸಿಫಿಕ್ ಮಹಾಸಾಗರದ ಟೊಂಗಾ ಬಳಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. USGS ಪ್ರಕಾರ ಭೂಕಂಪದ ಕೇಂದ್ರಬಿಂದು ಟೋಂಗಾದ ನೈಋತ್ಯಕ್ಕೆ ಸುಮಾರು 280 ಕಿಮೀ (174 ಮೈಲುಗಳು) 167.4 ಕಿಮೀ (104 ಮೈಲುಗಳು) ಆಳದಲ್ಲಿದೆ.
ಭೂಕಂಪದ ನಂತರ ಯುಎಸ್ ವೆಸ್ಟ್ ಕೋಸ್ಟ್, ಬ್ರಿಟಿಷ್ ಕೊಲಂಬಿಯಾ ಅಥವಾ ಅಲಾಸ್ಕಾಕ್ಕೆ ಯಾವುದೇ ಸುನಾಮಿ ಬೆದರಿಕೆ ಇಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ಇಲಾಖೆ ಹೇಳಿದೆ. ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಕೂಡ ಆಸ್ಟ್ರೇಲಿಯಾಕ್ಕೆ ಸುನಾಮಿ ಅಪಾಯವಿಲ್ಲ ಎಂದು ಹೇಳಿದೆ.

ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಆರಂಭದಲ್ಲಿ ಫಿಜಿ ದ್ವೀಪಗಳ ದಕ್ಷಿಣ ಪ್ರದೇಶದ ಬಳಿ 7 ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ ವರದಿಯಾಗಿದೆ.












Click it and Unblock the Notifications