ಅಮೆರಿಕ ವಿರುದ್ಧ ರಿವೇಂಜ್, ಉತ್ತರ ಕೊರಿಯಾ ಮಾಡಿದ್ದೇನು ಗೊತ್ತಾ?

ಜಗತ್ತು ನಾಶವಾಗಿ ಹೋಗಲು ಏನು ಬೇಕೋ ಅದೆಲ್ಲವನ್ನು ಆಧುನಿಕ ಮಾನವ ಈಗ ಶುರು ಮಾಡಿದ್ದಾನೆ. ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ಕಚ್ಚಾಡುತ್ತಿದ್ದರೆ, ನಾವೂ ಕಮ್ಮಿ ಇಲ್ಲ ಎಂಬಂತೆ ಇಸ್ರೇಲ್ ಹಾಗೂ ಹಮಾಸ್ ಬಡಿದಾಟ ಶುರು ಮಾಡಿವೆ. ಇದೇ ಸಮಯದಲ್ಲಿ ಈ ಕಿರಾತಕ ಕಿಮ್ ಜಾಂಗ್ ಉನ್ ಕೂಡ, ನಂದೂ ಒಂದು ಕೊಡುಗೆ ಇರಲಿ ಅಂತಾ ಯುದ್ಧದ ಹಿಂಸಾಚಾರಕ್ಕೆ ದೊಡ್ಡ ಗಿಫ್ಟ್ ಕೊಟ್ಟಿದ್ದಾನೆ!

ಹೌದು, ಕಿಮ್ ಜಾಂಗ್ ಉನ್ ಅಂದ್ರೆ ಕೇವಲ ಒಬ್ಬ ಸರ್ವಾಧಿಕಾರಿ ಅಲ್ಲ. ಕಿಮ್ ಹೆಸರಲ್ಲಿ ಪರಮಾಣು ಅಸ್ತ್ರಗಳು ಕೂಡ ಬೆರೆತು ಹೋಗಿವೆ ಅಂತಾ ಕಾಣುತ್ತೆ. ಯಾಕಂದ್ರೆ ಈತ ಇಡೀ ಜಗತ್ತಿನಲ್ಲಿ ಸೃಷ್ಟಿಸಿರುವ ಭಯ ಅಷ್ಟಿಷ್ಟಲ್ಲ. ಪದೇ ಪದೆ ನ್ಯೂಕ್ಲಿಯರ್ ವೆಪನ್ಸ್ ಪರೀಕ್ಷೆಯ ಮೂಲಕ ಕಿಮ್ ಜಾಂಗ್ ಉನ್ ಭಯ ಹುಟ್ಟಿಸುತ್ತಿದ್ದ. ಇದೀಗ ಇನ್ನೂ ಒಂದು ಹೆಜ್ಜೆಯನ್ನ ಮುಂದಿಟ್ಟಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ, ರಷ್ಯಾ ಸೇನೆಗೆ ಬರೋಬ್ಬರಿ ಸಾವಿರಾರು ಕಂಟೇನರ್ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದಾನಂತೆ.

US Claims North Korea Supplied 1,000 Containers of Arms to Russia for Ukraine Conflict

ಗೆಳೆಯನಿಗೆ ಗಿಫ್ಟ್ ಕೊಟ್ಟ ಸರ್ವಾಧಿಕಾರಿ!

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚಡ್ಡಿ ದೋಸ್ತ್‌ಗಳ ರೀತಿ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಇದ್ದರೂ, ಇಬ್ಬರ ಸ್ನೇಹಕ್ಕೆ ಯಾವುದೇ ಕೊರತೆ ಇಲ್ಲ. ಹೀಗಾಗಿಯೇ ಉತ್ತರ ಕೊರಿಯಾಗೆ ಏನು ಬೇಕೋ ಅದನ್ನು ರಷ್ಯಾದ ಅಧ್ಯಕ್ಷ ಪುಟಿನ್ ಕೊಡುತ್ತಾರೆ, ಇನ್ನು ರಷ್ಯಾಗೆ ಏನು ಬೇಕೋ ಅದನ್ನು ಕಿಮ್ ಜಾಂಗ್ ಉನ್ ಸಪ್ಲೈ ಮಾಡ್ತಿದ್ದಾನೆ. ಈ ಮೂಲಕ ಇಬ್ಬರ ದಯೆಯಿಂದ ಜಗತ್ತು ಭಯದಲ್ಲಿ ಮುಳುಗಿದೆ. ಈ ಬಗ್ಗೆ ಸ್ವತಃ ಅಮೆರಿಕದ ಶ್ವೇತಭವನ ಗಂಭೀರ ಆರೋಪ ಮಾಡಿದೆ.

ಉಕ್ರೇನ್ ಯುದ್ಧಕ್ಕೆ ಉತ್ತರ ಕೊರಿಯಾ ಅಸ್ತ್ರ?

ಅಷ್ಟಕ್ಕೂ ಈಗ ಅಮೆರಿಕ ಮಾಡಿರುವ ಆರೋಪದ ಪ್ರಕಾರ 1 ಸಾವಿರ ಕಂಟೇನರ್ ಅಸ್ತ್ರಗಳನ್ನ ಉತ್ತರ ಕೊರಿಯಾ ಇದೀಗ ರಷ್ಯಾಗೆ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ. ಉತ್ತರ ಕೊರಿಯಾ ಗಡಿಯ ಭಾಗ ರಷ್ಯಾ ಜೊತೆಗೆ ಹೊಂದಿಕೊಂಡಿದೆ. ಹೀಗಾಗಿ ಅಲ್ಲಿಂದಲೇ ಉತ್ತರ ಕೊರಿಯಾ 1 ಸಾವಿರ ಕಂಟೇನರ್ ಶಸ್ತ್ರಾಸ್ತ್ರಗಳನ್ನು ರಷ್ಯಾ ಸೇನೆಗೆ ಕಳುಹಿಸಿ ಕೊಟ್ಟಿರಬಹುದು ಎನ್ನಲಾಗಿದೆ. ಇದನ್ನು ಉಕ್ರೇನ್ ವಿರುದ್ಧ ರಷ್ಯಾ ಬಳಸಲಿದೆ ಎಂದು ಅಮೆರಿಕ ಆರೋಪಿಸಿದೆ. ಅಲ್ಲದೆ ಈ ಮೊದಲೇ ಉತ್ತರ ಕೊರಿಯಾ ವಿರುದ್ಧ ಬುಸುಗುಡುತ್ತಿದ್ದ ಅಮೆರಿಕ ಇದೀಗ ಮತ್ತಷ್ಟು ರೊಚ್ಚಿಗೆದ್ದಿದೆ.

US Claims North Korea Supplied 1,000 Containers of Arms to Russia for Ukraine Conflict

ಏನ್ ಇದು ಸರ್ವಾಧಿಕಾರಿ ಗೋಳು?

ರಷ್ಯಾ & ಉಕ್ರೇನ್ ಯುದ್ಧ ಪರಿಣಾಮ ಹೇಗಿದೆ ಅಂದ್ರೆ ಜಗತ್ತು ಈಗಾಗಲೇ 2 ಭಾಗವಾಗಿ ಹೋಗಿದೆ. ಕೆಲವು ದೇಶಗಳು ರಷ್ಯಾ ಪರ ನಿಂತರೆ ಹಲವು ದೇಶಗಳು ಅಮೆರಿಕ ಜೊತೆ ಸೇರಿವೆ. ಹೀಗಾಗಿ ಎರಡೂ ಬಣ ನಡುವೆ ಕಿತ್ತಾಟ ಜೋರಾಗಿದೆ. ಈ ಸಂದರ್ಭದಲ್ಲೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬೆಂಕಿ ಇಟ್ಟಿದ್ದಾನೆ. ರಷ್ಯಾಗೆ ಭೇಟಿ ಕೊಟ್ಟು, ಪುಟಿನ್ ಜೊತೆ ಚರ್ಚಿಸಿದ್ದ ಕಿಮ್ ಜಾಂಗ್ ಉನ್ ವಿರುದ್ಧ ಈಗಾಗಲೇ ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಾಯಕರು ಗುಡುಗಿದ್ದರು. ಇದೀಗ ಕಿಮ್ ತನ್ನ ಸೇನೆಯಲ್ಲಿ ಇರುವ ಅಸ್ತ್ರಗಳನ್ನು ರಷ್ಯಾಗೆ ಕೊಟ್ಟಿದ್ದಾನೆ ಎಂದು ಅಮೆರಿಕ ಆರೋಪಿಸಿದೆ.

ಒಟ್ನಲ್ಲಿ ಕಿಮ್ ಜಾಂಗ್ ಉನ್ ವಿರುದ್ಧ ಅಮೆರಿಕ ಈಗ ಮಾಡಿರುವುದು ಆರೋಪ ಅಷ್ಟೇ, ಈ ಬಗ್ಗೆ ಸೂಕ್ತ ಸಾಕ್ಷ್ಯ ಇಲ್ಲ. ಹೀಗಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ರಷ್ಯಾಗೆ ಶಸ್ತ್ರಾಸ್ತ್ರವನ್ನ ಕೊಟ್ಟಿರುವ ಗ್ಯಾರಂಟಿಯೂ ಇಲ್ಲ ಅನ್ನೋ ವಾದ ಕೂಡ ಕೇಳಿಬಂದಿದೆ. ಇದೆಲ್ಲಾ ಏನೇ ಇದ್ರು ಇವರ ಈ ತಿಕ್ಕಾಟದಲ್ಲಿ ಜಗತ್ತು ಬಡವಾಗುತ್ತಿದೆ. ಅಮೆರಿಕ & ರಷ್ಯಾದ ಕಿತ್ತಾಟದಲ್ಲಿ ಭೂಮಿಗೆ ಕಂಟಕ ಎದುರಾಗಿದೆ, ಮನುಷ್ಯ ಕುಲವೇ ನಾಶವಾಗುವ ಹಂತ ತಲುಪುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+