Get Updates
Get notified of breaking news, exclusive insights, and must-see stories!

ಡಬಲ್ ಗೇಮ್ ಅಮೆರಿಕ ಈಗ ಚೀನಾ ವಿಷಯದಲ್ಲಿ ಮಾಡ್ತಿರೋದು ಏನು?

ಅಮೆರಿಕದ ಹಣೆಬರಹವೇ ಇಷ್ಟು, ಒಂದು ಕಡೆ ಮಗುವನ್ನು ಕೂಡ ಚಿವುಟಿ ತೊಟ್ಟಿಲನ್ನು ಕೂಡ ತೂಗುತ್ತದೆ. ಹೀಗೆ ಅಮೆರಿಕ ವಿರುದ್ಧ ಇರುವ ಆರೋಪಗಳು ಒಂದಲ್ಲ, ಎರಡಲ್ಲ. ಅದರಲ್ಲೂ ಪಕ್ಕಾ ವ್ಯಾಪಾರಿ ದೇಶ ಅನ್ನೋ ಬಿರುದು ಹೊಂದಿದ ಅಮೆರಿಕ ಈಗ ಭಾರತದ ವಿಚಾರದಲ್ಲಿಯೂ 'ಡಬಲ್ ಗೇಮ್' ಆಡ್ತಾ ಇದೆಯಾ? ಯಾಕಂದ್ರೆ ಇಂಥ ಆರೋಪ ಈಗ ಗಂಭೀರವಾಗಿ ಕೇಳಿಬಂದಿದೆ.

ಭಾರತದ ಜೊತೆಗೆ ಸಂಬಂಧ ಬೆಸೆಯುವ ನಾಟಕ ಮಾಡುತ್ತಾ, ಮತ್ತೊಂದು ಕಡೆ ಚೀನಾದ ಜೊತೆಗೆ ಅಮೆರಿಕ ಉತ್ತಮ ಸಂಬಂಧ ಹೊಂದಿದೆ. ಆದ್ರೆ ಇಲ್ಲಿ ಹಾಳಾಗುತ್ತಿರೋದು ಮಾತ್ರ ಭಾರತ ಹಾಗೂ ಚೀನಾದ ಸ್ನೇಹ ಅನ್ನೋ ಆರೋಪ ಇದೆ. ಅದರಲ್ಲೂ ಭಾರತದ ಗಡಿಯ ಭಾಗದಲ್ಲಿ ಅಮೆರಿಕ ಅಗತ್ಯ ಇರುವ ಕೆಲಸ ಮಾಡಿಸಿಕೊಳ್ಳುತ್ತಾ, ಚೀನಾ ಜೊತೆಗು ಉತ್ತಮ ವ್ಯಾಪಾರ ಸಂಬಂಧ ಹೊಂದುತ್ತಿದೆಯಂತೆ. ಹೀಗೆ ಚೀನಾ & ಭಾರತ ನಡುವೆ ಕಿಚ್ಚು ಹಚ್ಚಿ ಅಮೆರಿಕ ಚಳಿ ಕಾಯಿಸಿಕೊಳ್ಳುತ್ತಿರುವ ಆರೋಪ ಕೇಳಿಬರುತ್ತಿದೆ. ಇಷ್ಟೆಲ್ಲಾ ಆರೋಪಗಳ ಮಧ್ಯೆ ಚೀನಾ ಮತ್ತು ಅಮೆರಿಕ ಅಧ್ಯಕ್ಷರ ನಡುವೆ ಮಹತ್ವದ ಮಾತುಕತೆ ನಡೆದುಬಿಟ್ಟಿದೆ.

US-China Strategic Dialogue: 7 Key Takeaways from Xi Jinping-Joe Biden Meeting Amid Global Tensions

ಅಮೆರಿಕ & ಚೀನಾ ಅಣ್ಣ-ತಮ್ಮ!

ಹೌದು ಇಡೀ ಜಗತ್ತಿನಲ್ಲಿ ಅಮೆರಿಕ ಎಂಬ ದೇಶವನ್ನು ಸಂಪೂರ್ಣವಾಗಿ ನಂಬಿದ ದೇಶವು ನೆಮ್ಮದಿಯಾಗಿ ಉಳಿದಿಲ್ಲ. ಹಾಗೇ ಅಮೆರಿಕದ ಜೊತೆಗೆ ಪೂರ್ತಿ ದ್ವೇಷ ಕಟ್ಟಿಕೊಂಡ ದೇಶ ಕೂಡ ಬದುಕಿಲ್ಲ. ಹೀಗಾಗಿಯೇ ದಡ್ಡಣ್ಣ.. ಅಲ್ಲಲ್ಲ ದೊಡ್ಡಣ್ಣ ಅಮೆರಿಕದ ಸ್ನೇಹವನ್ನು ಊಟಕ್ಕೆ ಇರುವ ಉಪ್ಪಿನಕಾಯಿ ರೀತಿ ಬಳಸಿಕೊಳ್ಳಬೇಕು. ಇದೇ ಕೆಲಸವನ್ನ ಭಾರತ ಕೂಡ ಮಾಡುತ್ತಿದೆ. ಇಷ್ಟೆಲ್ಲಾ ಹುಷಾರಾಗಿ ಇದ್ದರೂ ಈಗ ನೇರವಾಗಿ ಚೀನಾ ಜೊತೆಗೆ ಸಂಬಂಧ ವೃದ್ಧಿಗೆ ಅಮೆರಿಕ ಮುಂದಾಗಿದೆ. ಯಾಕೆ ಗೊತ್ತಾ?

ನಷ್ಟ ಸರಿಮಾಡಲು ಮೀಟಿಂಗ್?

ಅಂದಹಾಗೆ ಭಾರತ & ಚೀನಾದ ಸಂಬಂಧದಲ್ಲಿ ಪರೋಕ್ಷವಾಗಿ ಹುಳಿ ಹಿಂಡುವ ಅಮೆರಿಕ ತಾನು ಮಾತ್ರ ಚೀನಾ ಜೊತೆಗೆ ಉತ್ತಮ ಸ್ನೇಹ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಅದ್ರಲ್ಲೂ ಇತ್ತೀಚಿನ ದಿನದಲ್ಲಿ ಪದೇ ಪದೆ ಅಮೆರಿಕ ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿ ಕೈಹಾಕಿ ಚೀನಾ ರೊಚ್ಚಿಗೇಳುವಂತೆ ಮಾಡುತ್ತಿದೆ. ಹೀಗಾಗಿ ಚೀನಾ ಕೂಡ ಅಮೆರಿಕ ಮುಟ್ಟಿ ಮುಟ್ಟಿ ನೋಡುಕೊಳ್ಳುವಂತೆ ಪರೋಕ್ಷವಾಗಿ ಪೆಟ್ಟು ಕೊಡುತ್ತಿದೆ. ಈ ಪೈಕಿ ಆರ್ಥಿಕವಾಗಿ ಪೂರ್ತಿ ಖಾಲಿ ಆಗಿ ಹೋಗುತ್ತಿರುವ ಅಮೆರಿಕಗೆ ಚೀನಾ ಆರ್ಥಿಕವಾಗಿಯೇ ಪೆಟ್ಟು ಕೊಡುತ್ತಿದೆ. ಈ ಬೆಳವಣಿಗೆ ಬೆನ್ನಲ್ಲಿ ತನಗೆ ವ್ಯಾಪಾರದಲ್ಲಿ ಆಗುತ್ತಿರುವ ನಷ್ಟ ಸರಿಮಾಡಲು ಚೀನಾ ಜೊತೆ ಬಾಂಧವ್ಯ ವೃದ್ಧಿಗೆ ಅಮೆರಿಕ ಮುಂದಾಗಿದೆ.

ವ್ಯಾಪಾರ ಸಂಬಂಧ ಮಾತುಕತೆ!

ಅಮೆರಿಕ ದೇಶದ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಯೋಜಿಸಲಾಗಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆ ವೇಳೆ ಮಹತ್ವದ ಚರ್ಚೆ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾ ಮುಖ್ಯಸ್ಥ ಜಿನ್‌ಪಿಂಗ್ ಅವರು ಮಹತ್ವದ ಮಾತುಕತೆ ನಡೆಸಿದ್ದಾರಂತೆ. ಹಾಗೇ ಈ ಸಮಯದಲ್ಲಿ ಹಳಿತಪ್ಪಿ ಹೋಗುತ್ತಿರುವ ಎರಡು ದೇಶದ ಸಂಬಂಧ ಸರಿ ಮಾಡಲು, ಜೋ ಬೈಡನ್ & ಜಿನ್‌ಪಿಂಗ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ವರದಿ ಹೊರಬಿದ್ದಿದೆ. ಅದರಲ್ಲೂ ಎರಡೂ ದೇಶಗಳ ಆರ್ಥಿಕ ಬೆಳವಣಿಗೆಗೆ ಅಗತ್ಯ ಇರುವ ಅಮಶಗಳ ಕುರಿತು ಮಹತ್ವವಾದ ಚರ್ಚೆಗಳು ನಡೆದಿವೆ.

US-China Strategic Dialogue: 7 Key Takeaways from Xi Jinping-Joe Biden Meeting Amid Global Tensions

ಎಲ್ಲವೂ ಸರಿ ಮಾಡಲು ತಂತ್ರ

ಜಗತ್ತಿನ ಅತಿದೊಡ್ಡ ಉತ್ಪಾದಕ ರಾಷ್ಟ್ರ ಚೀನಾ ಆಗಿದ್ದರೆ ಅಮೆರಿಕ ಜಗತ್ತಿನಲ್ಲೇ ಅತಿಹೆಚ್ಚು ಉತ್ಪನ್ನಗಳನ್ನ ಆಮದು ಮಾಡಿಕೊಳ್ಳುವ ದೇಶ. ಹೀಗಾಗಿ ಎರಡೂ ದೇಶಗಳ ಮಧ್ಯೆ ಭಾರಿ ದೊಡ್ಡ ಸಂಬಂಧ ಇತ್ತು. ಆದರೆ ಯಾವಾಗ ಜೋ ಬೈಡನ್ ಅಧಿಕಾರಕ್ಕೆ ಬಂದರೋ, ಆ ಕ್ಷಣದಿಂದ ಅಮೆರಿಕ, ಚೀನಾ ಸ್ನೇಹ ಹದಗೆಡುತ್ತ ಬಂತು ಅನ್ನೋ ಆರೋಪ ಕೇಳಿಬಂತು.

ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾಗ, ಸ್ವಲ್ಪ ಹಳಸಿದ್ದ 2 ದೇಶಗಳ ನಡುವಿನ ಸಂಬಂಧವು ಬೈಡನ್ ಕಾಲಘಟ್ಟದಲ್ಲಿ ಪಾತಾಳ ಸೇರಿದೆ ಎಂಬ ಆರೋಪ ಇದೆ. ಹೀಗಾಗಿ ಇಬ್ಬರ ಉತ್ಪಾದನೆ ವಲಯ, ಆಮದು ಸೇರಿದಂತೆ ಹಲವು ಚರ್ಚೆಯು ನಡೆದಿದೆ. ಸುಮಾರು 4 ಗಂಟೆ ಕಾಲ ಇಬ್ಬರು ಚರ್ಚೆ ನಡೆಸಿದ್ದಾರೆ. ಹಾಗೇ ಇಷ್ಟುದಿನ ಆಗಿರು ತಪ್ಪು ಸರಿಮಾಡಿಕೊಂಡು ಮುಂದೆ ಹೋಗಲು ಬೈಡನ್ & ಜಿನ್‌ಪಿಂಗ್ ಪರಸ್ಪರ ಒಪ್ಪಿಗೆ ಕೂಡ ಸೂಚಿಸಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+