Us Attack on Houthis: ಹೌತಿ ಉಗ್ರರ ಮೇಲೆ ಅಮೆರಿಕ ಬಾಂಬ್ ಸುರಿಮಳೆ:ಇರಾನ್‌ಗೆ ವಾರ್ನಿಂಗ್, 24 ಉಗ್ರರ ಸಾವು!

ಇರಾನ್‌ ಬೆಂಬಲ ಹೊಂದಿರುವ ಹೌತಿ ಬಂಡುಕೋರರು / ಉಗ್ರರ ಮೇಲೆ ಅಮೆರಿಕ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು. ಈ ಕಾರ್ಯಾಚರಣೆಯಲ್ಲಿ ಬರೋಬ್ಬರಿ 24 ಜನ ಉಗ್ರರು ಸಾವನ್ನಪ್ಪಿದ್ದಾರೆ. ಡೊನಾಲ್ಡ್‌ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಮೇಲೆ ನಡೆದಿರುವ ಅತೀ ದೊಡ್ಡ ಕಾರ್ಯಾಚರಣೆ ಇದಾಗಿದೆ. ಹೌತಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲಾಗಿದೆ. ಅಲ್ಲದೆ ಹೌತಿ ಉಗ್ರರಿಗೆ ಕೂಡಲೇ ಬೆಂಬಲ ನಿಲ್ಲಿಸಬೇಕು ಎಂದು ಇರಾನ್‌ಗೆ ಖಡಕ್‌ ಎಚ್ಚರಿಕೆಯನ್ನು ಸಹ ಕೊಡಲಾಗಿದೆ.

ಮಧ್ಯಪ್ರಾಚ್ಯದ ಈಚೆಗಿ ಬೆಳವಣಿಗೆಯಲ್ಲಿ ಇರಾನ್‌ನೊಂದಿಗೆ ಹೌತಿ ಬಂಡುಕೋರರು ಒಪ್ಪಂದವನ್ನು ಮಾಡಿಕೊಂಡಿದ್ದರು. ಅಲ್ಲದೆ ಮುಂದುವರಿದು ಕೆಂಪು ಸಮುದ್ರ ಹಡಗು ಸಾಗಾಣಿಕೆಯ ಮೇಲೆ ಯೆಮೆನ್‌ನ ಇರಾನ್‌ ಒಪ್ಪಂದವನ್ನು ಉಲ್ಲಂಘಿಸಿ ಹೌತಿ ಬಂಡುಕೋರರು ನಡೆಸಿರುವ ದಾಳಿಯು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕಣ್ಣನ್ನು ಕೆಂಪಗಾಗಿಸಿವೆ ಎಂದು ಹೇಳಲಾಗಿದೆ.

US Bombs Houthi Militants Warning to Iran 24 Militants killed

ಇರಾನ್‌ ದೇಶ ಬೆಂಬಲವನ್ನು ಹೊಂದಿರುವ ಹೌತಿ ಬಂಡುಕೋರರ ಮೇಲೆ ದಾಳಿ ನಡೆಸಲಾಗಿದೆ. ಮಧ್ಯಪ್ರಾಚ್ಯದ ಯೆಮೆನ್‌ ರಾಜಧಾನಿ ಸನಾ ಭಾಗದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಅತೀ ದೊಡ್ಡ ಮಟ್ಟದಲ್ಲಿ ಮಿಲಿಟರಿ ಕಾರ್ಯಾಚರಣೆ ಜಗತ್ತು ಸಾಕ್ಷಿಯಾಗಿದೆ. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಡೊನಾಲ್ಡ್‌ ಟ್ರಂಪ್ ಅವರು ಯಾವುದೇ ದಾಳಿಗಳನ್ನು ನಡೆಸಲು ಸೂಚನೆ ನೀಡಿರಲಿಲ್ಲ. ಯುದ್ಧ ಬೇಡ ಎನ್ನುವುದೇ ಅವರ ನಿಲುವಾಗಿತ್ತು. ಆದರೆ, ಅನಿವಾರ್ಯ ಪರಿಸ್ಥಿತಿಯಿಂದ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಯೆಮೆನ್ ಮೇಲೆ ಅಮೆರಿಕ ಮಿಲಿಟರಿ ಕಾರ್ಯಾಚರಣೆಯಿಂದ ಹಲವು ಉಗ್ರರು ಇನ್ನೂ ಮೃತಪಟ್ಟಿದ್ದಾರೆ. ಇರಾನ್ ಜೊತೆ ಮೈತ್ರಿ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನಿಮ್ಮ ಸಮಯ ಮುಗಿದಿದೆ. ಈಗ ಇದನ್ನು ಮುಗಿಸಬೇಕಿದೆ ಎಂದು ಡೊನಾಲ್ಡ್‌ ಟ್ರಂಪ್ ಅವರು ಗುಡುಗಿದ್ದಾರೆ. ಇನ್ನು ಅಮೆರಿಕ ನಡೆಸಿರುವ ಈ ದಾಳಿಯಲ್ಲಿ 13 ಜನ ಸಾರ್ವಜನಿಕರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೌತಿಗಳ ಭದ್ರಕೋಟೆ ಎಂದೇ ಹೇಳಲಾಗುತ್ತಿರುವ ಉತ್ತರ ಪ್ರಾಂತ್ಯ ಪ್ರದೇಶದಲ್ಲಿ ನಾಲ್ಕು ಮಕ್ಕಳು ಮತ್ತು ಒಬ್ಬರು ಮಹಿಳೆ ಸೇರಿದಂತೆ ಒಟ್ಟು 11 ಜನ ಸಾವನ್ನಪ್ಪಿದ್ದಾರೆ.

ಯೆಮೆನ್‌ನಲ್ಲಿ ಹೌತಿಗಳ ಉಪಟಳವು ವಿಶ್ವ ವಾಣಿಜ್ಯಕ್ಕೆ ಸಂಕಷ್ಟವನ್ನು ತಂದೊಡ್ಡಿತ್ತು. ಕಳೆದ ಒಂದು ದಶಕದಿಂದಲೂ ಇಲ್ಲಿ ಯೆಮೆನ್‌ನ ಹೆಚ್ಚಿನ ಭಾಗವನ್ನು ಹೌತಿ ಬಂಡುಕೋರರು ವಶಕ್ಕೆ ಪಡೆದುಕೊಂಡಿದ್ದರು. ಇಸ್ರೇಲ್- ಹಮಾಸ್ ನಡುವೆ ಯುದ್ಧ ಪ್ರಾರಂಭವಾದ ಮೇಲೆ ಜಾಗತಿಕ ವಾಣಿಜ್ಯದ ಮೇಲೆ ಪರಿಣಾಮ ಬೀರಿತ್ತು. ಮುಖ್ಯ ವಾಣಿಜ್ಯ ಕೇಂದ್ರವಾಗಿರುವ ಇಲ್ಲಿನ ಕರಾವಳಿಯಲ್ಲಿ ಹಡಗುಗಳ ಮೇಲೆ ಸರಣಿ ದಾಳಿಗಳನ್ನು ಹೌತಿ ಪ್ರಾರಂಭಿಸಿತ್ತು. ಗಾಜಾ ಯುದ್ಧಕ್ಕೆ ಸಂಬಂಧಿಸಿದಂತೆ ಪ್ಯಾಲೆಸ್ಟೀನಿಯನ್ನರೊಂದಿಗೆ ಸೇರಿ ಈ ದಾಳಿಗಳನ್ನು ನಡೆಸಿರುವುದಾಗಿ ಹೇಳಲಾಗಿದೆ.

ಯುದ್ಧ ಅಪರಾಧ ಎಂದ ಹೌತಿ ಆಡಳಿತ: ಡೊನಾಲ್ಡ್‌ ಅವರ ಆಡಳಿತ ಹೌತಿ ಉಗ್ರರ ಉಪಟಳವನ್ನು ಅತ್ಯಂತ ಗಂಭಿರವಾಗಿ ಪರಿಗಣಿಸಿರುವುದಾಗಿ ಹೇಳಿದೆ. ಈ ದಾಳಿಯನ್ನು ಹೌತಿಗಳ ರಾಜಕೀಯ ಬ್ಯೂರೋ / ಆಡಳಿತವು ಯುದ್ಧ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಿಗಡಾಯಿಸಿರುವ ಪರಿಸ್ಥಿತಿ ರಿಯಾಕ್ಟ್‌ ಮಾಡುವುದಕ್ಕೆ ಸಿದ್ಧ ಎಂದೂ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+