Ukraine War: ಉಕ್ರೇನ್ ಪರವಾಗಿ ನೇರವಾಗಿ ನುಗ್ಗಲಿದೆಯಾ ಅಮೆರಿಕ & ನ್ಯಾಟೋ ಸೇನೆ?

ರಷ್ಯಾ & ಉಕ್ರೇನ್ ದೇಶಗಳು ಈ ರೀತಿಯಾಗಿ ಹೊಡೆದಾಡುತ್ತಿದ್ದರೆ ಮತ್ತೊಂದು ಕಡೆ ಜಾಗತಿಕ ಆರ್ಥಿಕ ಸ್ಥಿತಿ ಅಲ್ಲಾಡಿ ಹೋಗುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಉಕ್ರೇನ್ ಯುದ್ಧ ವಿಚಾರ ಮುಂದೆ ಇಟ್ಟುಕೊಂಡು ಆರ್ಥಿಕ ಯುದ್ಧ ಶುರು ಮಾಡಿರುವ ಆರೋಪ ಕೂಡ ಇದೀಗ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ ಯುರೋಪ್ ಖಂಡದಲ್ಲೂ ಭಾರಿ ಆಕ್ರೋಶದ ಕಹಳೆ ಮೊಳಗಿದೆ. ಇಂತಹ ಪರಿಸ್ಥಿತಿಯಲ್ಲೇ, ಉಕ್ರೇನ್ ಪರವಾಗಿ ನೇರವಾಗಿ ನುಗ್ಗಲಿದೆಯಾ ಅಮೆರಿಕ & ನ್ಯಾಟೋ ಸೇನೆ?

ರಷ್ಯಾ & ಉಕ್ರೇನ್ ಯುದ್ಧದ ಭೀಕರತೆಗೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣ ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆಯೇ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧ ಪರಿಣಾಮ ನರಳಾಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಈಗ ತಮ್ಮ ತಿಕ್ಕಾಟ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ & ಉಕ್ರೇನ್, ಪರಮಾಣು ಅಂದ್ರೆ ನ್ಯುಕ್ಲಿಯರ್ ವಾರ್ ಮಾಡಲು ಸಜ್ಜಾಗಿವೆಯಾ? ಎಂಬ ಪ್ರಶ್ನೆ ಮೂಡಿದೆ. ಇಂತಹ ಸಮಯದಲ್ಲೇ ದಿಢೀರ್ ಅಂತಾ ಉಕ್ರೇನ್ ಪರವಾಗಿ ನೇರವಾಗಿ ನುಗ್ಗಲಿದೆಯಾ ಅಮೆರಿಕ & ನ್ಯಾಟೋ ಪಡೆಗಳು? ಎಂಬ ಪ್ರಶ್ನೆ ಕೂಡ ಆವರಿಸಿದೆ.

US And Nato May Take This Decision If Ukraine War Will Not End Soon

ಅಮೆರಿಕ & ನ್ಯಾಟೋ ಪಡೆಗಳ ಎಂಟ್ರಿ?

ಹೌದು, ಕಳೆದ ಕೆಲವು ದಿನಗಳಿಂದ ಈ ವಿಚಾರ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡದಾಗಿ ಚರ್ಚೆಗು ಬರುತ್ತಿದೆ. ಯಾಕಂದ್ರೆ ಪದೇ ಪದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಪರವಾಗಿ ತಮ್ಮ ಧ್ವನಿ ಎತ್ತುತ್ತಿದ್ದಾರೆ. ಹಾಗೇ ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ಇದೇ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಕೂಡ ಗರಂ ಆಗಿದ್ದಾರೆ. ಮತ್ತೊಂದು ಕಡೆ ಯುದ್ಧಕ್ಕೆ ಬ್ರೇಕ್ ಹಾಕಲು ಚೀನಾ ಮುಂದಾಗಬೇಕು ಅನ್ನೋ ಡಿಮ್ಯಾಂಡ್ ಕೂಡ ಮುಂದೆ ಇಟ್ಟಿದ್ದಾರೆ. ಹೀಗೆ, ಇಡೀ ಪ್ರಪಂಚ ಟ್ರಂಪ್ ಅವರ ಹೇಳಿಕೆ ಬಗ್ಗೆ ಅವಲೋಕನ ಮಾಡುತ್ತಿದೆ. ಮತ್ತೊಂದು ಕಡೆಯಲ್ಲಿ, ದಿಢೀರ್ ಅಂತಾ ಉಕ್ರೇನ್ ಪರ ನೇರವಾಗಿ ಅಮೆರಿಕ & ನ್ಯಾಟೋ ಪಡೆಗಳು ನುಗ್ಗುವ ಸಾಧ್ಯತೆ ಇದೆ?

ನೇರವಾಗಿ ಅಮೆರಿಕ ಸೇನೆಯ ಎಂಟ್ರಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲೆಕ್ಷನ್ ಗೆಲ್ಲುವ ಸಮಯದಲ್ಲಿ, ನಾನು ಉಕ್ರೇನ್ ಯುದ್ಧವನ್ನ ನಿಲ್ಲಿಸುತ್ತೇನೆ ಅಂತಾ ಹೇಳಿದ್ದರು. ಆದರೆ ಟ್ರಂಪ್ ಅಧಿಕಾರಕ್ಕೆ ಬಂದು ಹಲವು ತಿಂಗಳು ಕಳೆದರೂ ಈ ಯುದ್ಧ ನಿಂತಿಲ್ಲ. ಹೀಗಿದ್ದಾಗ ರೊಚ್ಚಿಗೆದ್ದಿರುವ ಟ್ರಂಪ್ ಉಕ್ರೇನ್ ಪರವಾಗಿ ತಮ್ಮ ಸೇನೆಯ ಜೊತೆ ನ್ಯಾಟೋ ಪಡೆಗಳನ್ನು ಕಳುಹಿಸುತ್ತಾರಾ? ಅನ್ನೋ ಚರ್ಚೆ ಶುರುವಾಗಿದೆ. ಆದರೆ ವಾಸ್ತವವಾಗಿ ಇದು ಅಸಾಧ್ಯ ಅಂತಿದ್ದಾರೆ ತಜ್ಞರು. ಯಾಕಂದ್ರೆ ಅಕಸ್ಮಾತ್ ಟ್ರಂಪ್ ಈ ರೀತಿ ಮಾಡಿದರೆ ಮುಂದೆ ಅದು, ನೇರವಾಗಿ ರಷ್ಯಾ & ಅಮೆರಿಕ ನಡುವಿನ ಯುದ್ಧವಾಗಲಿದೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಅಮೆರಿಕ ಮರೆಯಲ್ಲಿ ನಿಂತು ತನ್ನ ಆಟ ಆಡುತ್ತಿದೆ ಅಂತಾರೆ ತಜ್ಞರು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+