Israel & Gaza: ಗಾಜಾ ನಾಗರಿಕರನ್ನು ಹೊರ ಹಾಕಲು ಇಸ್ರೇಲ್ & ಅಮೆರಿಕ ಪ್ಲಾನ್!
ಇಸ್ರೇಲ್ & ಗಾಜಾ ನಡುವೆ ಹೊತ್ತಿ ಉರಿಯುತ್ತಿರುವ ಬೆಂಕಿ ಈಗಷ್ಟೇ ಆರಿದೆ, ಹೀಗೆ ಯುದ್ಧದ ಕಿಚ್ಚು ತಣ್ಣಗಾದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಈ ಸುದ್ದಿ ಇದೀಗ ಇಡೀ ಗಾಜಾ ಪಟ್ಟಿಯಲ್ಲಿ ಹೊಸ ಭಯದ ಅಲೆ ಎಬ್ಬಿಸಿದ್ದು, ಭವಿಷ್ಯದಲ್ಲಿ ಇಡೀ ಗಾಜಾ ನಗರವನ್ನೇ ಖಾಲಿ ಮಾಡಿಸುವ ಸ್ಕೆಚ್ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಾಗಾದ್ರೆ ಯಾರು ಈ ರೀತಿಯ ಪ್ಲಾನ್ ಮಾಡಿರುವುದು? ಮುಂದೆ ಓದಿ.
ಇಸ್ರೇಲ್ & ಗಾಜಾ ಪಟ್ಟಿ ಯುದ್ಧ ಹಿನ್ನೆಲೆ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆಯೂ ಶುರುವಾಗಿತ್ತು ಹಾಗೂ ಇದೇ ಕಾರಣಕ್ಕೆ ಎದ್ದು ಬಿದ್ದು ಯುದ್ಧ ನಿಲ್ಲಿಸಲಾಗಿದೆ. ಹೀಗಿದ್ದರೂ ಗಾಜಾ ಪಟ್ಟಿ ಮಾತ್ರ ತಣ್ಣಗಾಗಿಲ್ಲ. ಯಾಕಂದ್ರೆ ಇದೀಗ ಅಮೆರಿಕ & ಇಸ್ರೇಲ್ ಒಟ್ಟಾಗಿ ಒಂದು ಪ್ಲಾನ್‌ನ ಮಾಡಿದ್ದು, ಗಾಜಾ ಪಟ್ಟಿಯಲ್ಲಿ ವಾಸ ಮಾಡುತ್ತಿರುವ ಜನರನ್ನು ಬೇರೆ ಕಡೆಗೆ ಕಳುಹಿಸಲು ಅಂದ್ರೆ ಪೂರ್ವ ಆಫ್ರಿಕಾಗೆ ವಲಸೆ ಹೋಗುವಂತೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಬಗ್ಗೆ ಒಂದು ಸುತ್ತಿನ ಚರ್ಚೆಗಳು ಕೂಡ ಆರಂಭವಾಗಿದೆ ಎನ್ನಲಾಗಿದ್ದು, ಹೊಸ ತಲೆನೋವು ಶುರುವಾಗುತ್ತಿದೆ.

ಗಾಜಾ ಪಟ್ಟಿ ಅಮೆರಿಕದ ವಶಕ್ಕೆ?
ಇಸ್ರೇಲ್ ಯುದ್ಧ ನಿಲ್ಲಿಸುವ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಒಂದು ಮಾತು ಹೇಳಿದ್ದರು, ಇಸ್ರೇಲ್ ಸೇನೆ ಗಾಜಾ ಪಟ್ಟಿಯಲ್ಲಿ ಯುದ್ಧ ನಿಲ್ಲಿಸಿದ ನಂತರ ಇಡೀ ಗಾಜಾ ಪ್ರದೇಶವನ್ನು ಅಮೆರಿಕದ ವಶಕ್ಕೆ ನೀಡಲಿದೆ ಎಂದಿದ್ದರು. ಅದರ ಭಾಗವಾಗಿ ಇದೀಗ ಪ್ಲಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಗಾಜಾ ಪಟ್ಟಿಯಲ್ಲಿ ಜೀವನ ನಡೆಸುತ್ತಿರುವ ಜನರ ಪರಿಸ್ಥಿತಿ ಭೀಕರವಾಗಿದೆ. 2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಯುದ್ಧ ಕೆಲವು ದಿನಗಳ ಹಿಂದೆ ಮುಗಿದಿತ್ತು, ಆದರೆ ಇದೀಗ ಬೇರೆಯದ್ದೇ ಕಿರಿಕ್ ಶುರುವಾಗಿದೆ.












Click it and Unblock the Notifications